ಬ್ರೇಕಿಂಗ್ ನ್ಯೂಸ್
01-04-23 06:43 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಸ್ಮಾರ್ಟ್‌ಫೋನ್‌ಗಳಲ್ಲೊಂದಾದ ಜನಪ್ರಿಯ Google Pixel 6a ಸ್ಮಾರ್ಟ್‌ಫೋನ್ ಬೆಲೆ ಮತ್ತೆಮ್ಮೆ ಇಳಿಕೆಯಾಗಿದೆ. ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ Google Pixel 6a ಸ್ಮಾರ್ಟ್‌ಫೋನ್ ಮೇಲೆ ಶೇ. 34% ರಿಯಾಯಿತಿ ಹಾಗೂ ಹಲವಾರು ಬ್ಯಾಂಕ್ ಡಿಸ್ಕೌಂಟ್ ಕೊಡುಗೆಗಳನ್ನು ಒದಗಿಸಲಾಗಿದ್ದು, ಈ ಮೊದಲು 43,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿದ್ದ 6 GB RAM + 128GB ಸ್ಟೋರೇಜ್ ಮಾದರಿಯ Google Pixel 6a ಸ್ಮಾರ್ಟ್‌ಫೋನ್ ಬೆಲೆ ಇದೀಗ 28,999 ರೂ.ಗಳಿಗೆ ಇಳಿಕೆಯಾಗಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್ ಡಿಸ್ಕೌಂಟ್ ಕೊಡುಗೆ ದೊರೆಯುತ್ತದೆ ಹಾಗೂ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಹ ಲಭ್ಯವಿವೆ.
Google Pixel 6a ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಹಲವು ಬ್ಯಾಂಕ್ ಕೊಡುಗೆಗಳು ಹೀಗಿವೆ.
ಸಿಟಿ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,500ರೂ. ವರೆಗೆ
ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,000ರೂ. ವರೆಗೆ
IDFC FIRST ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,000ರೂ. ವರೆಗೆ
ಇಂಡಸ್‌ಇಂಡ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವಹಿವಾಟುಗಳ ಮೇಲೆ 10% ರಿಯಾಯಿತಿ, 1,000ರೂ. ವರೆಗೆ
Google Pixel 6a ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
Google Pixel 6a ಸ್ಮಾರ್ಟ್‌ಫೋನ್ 6.1-ಇಂಚಿನ ಫುಲ್ HD+ (1,080 x 2,400 ಪಿಕ್ಸೆಲ್‌ಗಳು) OLED ಡಿಸ್‌ಪ್ಲೇ ಹೊಂದಿದೆ. 20:9 ಅನುಪಾತದಲ್ಲಿರುವ ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಮತ್ತು 60Hz ರಿಫ್ರೆಶ್ ರೇಟ್ ಹೊಂದಿರುವದನ್ನು ನಾವು ಗಮನಿಸಬಹುದು. ಈ Google Pixel 6a ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಮತ್ತು Titan M2 ಸೆಕ್ಯುರಿಟಿ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಪ್ರೊಸೆಸರ್ ಅನ್ನು 6GB LPDDR5 RAM ನೊಂದಿಗೆ ಜೋಡಿಸಲಾಗಿದೆ. ಆಂಡ್ರಾಯ್ಡ್ 12 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿರುವ ಈ ಸ್ಮಾರ್ಟ್‌ಫೋನ್ ಕನಿಷ್ಠ ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಗೂಗಲ್ ತಿಳಿಸಿದೆ.
ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Google Pixel 6a ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದೆ. ಈ ಕ್ಯಾಮೆರಾವು f/1.7 ಅಪಾರ್ಚರ್ ನೊಂದಿಗೆ ಲೆನ್ಸ್‌ನೊಂದಿಗೆ 12.2-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವ ಮತ್ತು 12-ಮೆಗಾಪಿಕ್ಸೆಲ್ ಸೆಕೆಂಡರಿ ಸಂವೇದಕದೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, Google Pixel 6a ಸ್ಮಾರ್ಟ್‌ಫೋನಿನಲ್ಲಿ f/2.0 ಅಪರ್ಚರ್ ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. Google Pixel 6a ಹಿಂದಿನ ಕ್ಯಾಮರಾವು 30fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ನೀಡುತ್ತದೆ ಮತ್ತು ಮುಂಭಾಗದ ಕ್ಯಾಮರಾ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ.
Google Pixel 6a ಸ್ಮಾರ್ಟ್‌ಫೋನ್ 128GB ಅಂತರ್ಗತ ಸಂಗ್ರಹಣೆ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.2, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಬ್ಯಾರೋಮೀಟರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕವನ್ನು ಸ್ಮಾರ್ಟ್‌ಫೋನ್ ಒಳಗೊಂಡಿವೆ. ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ Pixel 6a ನಲ್ಲಿ Google 4,410mAh ಬ್ಯಾಟರಿ ಒದಗಿಸಲಾಗಿದ್ದು, ಇದು 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 72 ಗಂಟೆಗಳವರೆಗೆ ಬ್ಯಾಕಪ್ ಒಳಗೊಂಡಿರುವ ತೀವ್ರ ಬ್ಯಾಟರಿ ಸೇವರ್ ಮೋಡ್‌ನೊಂದಿಗೆ ಬಂದಿದೆ.
google pixel 6a at rs 27,499 on flipkart is a deal not to miss.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm