ಬ್ರೇಕಿಂಗ್ ನ್ಯೂಸ್
03-04-23 07:51 pm Source: Vijayakarnataka ಡಿಜಿಟಲ್ ಟೆಕ್
OnePlus ಕಂಪೆನಿಯ ಇತ್ತೀಚಿನ OnePlus 11 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ ಕಳೆದ ವರ್ಷ OnePlus ಪರಿಚಯಿಸಿದ್ದ ಜನಪ್ರಿಯ OnePlus 10R 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆಯಾಗಿದೆ. ಕಳೆದ ವರ್ಷದ ಅಂತ್ಯದಲ್ಲಷ್ಟೇ OnePlus 10R ಸ್ಮಾರ್ಟ್‌ಫೋನ್ ಬೆಲೆಯಲ್ಲಿ 4,000 ರೂ.ಗಳಷ್ಟು ಕಡಿತಗೊಳಿಸಲಾಗಿತ್ತು. ಇದೀಗ ಮತ್ತೆ 3,000 ರೂ.ಗಳಷ್ಟು ಬೆಲೆ ಇಳಿಕೆ ಮಾಡಲಾಗಿದ್ದು, ಕೇವಲ ಆರು ತಿಂಗಳ ಒಳಗಾಗಿ ಎರಡನೇ ಬೆಲೆ ಕಡಿತಕ್ಕೆ ಸಾಕ್ಷಿಯಾಗಿದೆ. ಇದರಿಂದ 8GB RAM + 128GB ಮಾದರಿಯ OnePlus 10R 5G ಸ್ಮಾರ್ಟ್‌ಫೋನ್ ಮೊಟ್ಟ ಮೊದಲ ಬಾರಿಗೆ 31,999 ರೂ. ಆರಂಭಿಕ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಮತ್ತು ಹಲವಾರು ಬ್ಯಾಂಕ್ ಕೊಡುಗೆಗಳಿಂದ OnePlus 10R 5G ಸ್ಮಾರ್ಟ್‌ಫೋನ್ ಬೆಲೆಯು ಮತ್ತಷ್ಟು ಕಡಿಮೆಯಾಗಲಿದೆ !
OnePlus ಕಂಪೆನಿ ದೇಶದಲ್ಲಿ OnePlus 10R ಸ್ಮಾರ್ಟ್‌ಫೋನನ್ನು 8GB+128GB (80W), 12GB+256GB (80W) ಮತ್ತು 12GB+256GB (150W) ಮೂರು ಮಾದರಿಗಳಲ್ಲಿ ಕ್ರಮವಾಗಿ 38,999 ರೂ., 42,999 ರೂ. ಮತ್ತು 43,999 ರೂ ಬೆಲೆಗಳಲ್ಲಿ ಪರಿಚಯಿಸಿತ್ತು. ಕೇವಲ ಆರು ತಿಂಗಳುಗಳ ಅಂತರದಲ್ಲಿ ಎರಡು ಬಾರಿ ಬೆಲೆ ಇಳಿಕೆಯ ನಂತರ ಇದೀಗ 8GB+128GB (80W), 12GB+256GB (80W) ಮತ್ತು 12GB+256GB (150W) ಮೂರು ಮಾದರಿಗಳನ್ನು ಕ್ರಮವಾಗಿ 31,999 ರೂ. 35,999 ರೂ. ಮತ್ತು 36,999 ರೂ. ನಲ್ಲಿ ಖರೀದಿಸಬಹುದು. ದೇಶದಲ್ಲಿ ಅಮೆಜಾನ್, ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಹಲವಾರು ಬ್ಯಾಂಕ್ ಕೊಡುಗೆಗಳು ಮತ್ತು ಸಿಯೆರಾ ಬ್ಲಾಕ್ ಮತ್ತು ಫಾರೆಸ್ಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ OnePlus 10R ಸ್ಮಾರ್ಟ್‌ಫೋನ್ ಇದೀಗ ಖರೀದಿಗೆ ಲಭ್ಯವಿದೆ.
OnePlus 10R 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
OnePlus 10R 5G ಸ್ಮಾರ್ಟ್‌ಫೋನಿನಲ್ಲಿ 20:9 ಆಕಾರ ಅನುಪಾತದೊಂದಿಗೆ 6.7-ಇಂಚಿನ ಫುಲ್ HD+ (1,080x2,412 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ನೀಡಲಾಗಿದೆ. ಇದರ ಪ್ರದರ್ಶನವು 120Hz ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 720Hz ಟಚ್ ರೆಸ್ಪಾನ್ಸ್ ರೇಟ್ ಸಾಮರ್ಥ್ಯಗಳಲ್ಲಿದ್ದು, ಡಿಸ್‌ಪ್ಲೇಯ ರಕ್ಷಣೆಗಾಗಿ 2.5D ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅಳವಡಿಸಲಾಗಿದೆ. ಛಾಯಾಗ್ರಹಣಕ್ಕಾಗಿ, OnePlus 10R 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲಿಸುವ 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಸಂವೇದಕ ಹಾಗೂ 8-ಮೆಗಾಪಿಕ್ಸೆಲ್ ಸೋನಿ IMX355 ಅಲ್ಟ್ರಾ-ವೈಡ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ಮ್ಯಾಕ್ರೋ ಶೂಟರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಸಾಮರ್ಥ್ಯದ ಸ್ಯಾಮ್‌ಸಂಗ್ ISOCELL S5K3P9 ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ EIS (Electronic image stabilization) ಬೆಂಬಲ ಸಹ ಹೊಂದಿದೆ.
OnePlus 10R 5G ಸ್ಮಾರ್ಟ್‌ಫೋನಿನಲ್ಲಿ 12GB LPDDR5 RAM ಜೊತೆ ಜೋಡಿಯಾಗಿರುವ MediaTek Dimensity 8100-Max ಪ್ರೊಸೆಸರ್ ಅಳವಡಿಸಲಾಗಿದೆ. OnePlus ಕಂಪೆನಿ ಹೇಳುವಂತೆ, ಈ MediaTek Dimensity 8100-Max ಪ್ರೊಸೆಸರ್ 11 ಪ್ರತಿಶತ ಉತ್ತಮ ಮಲ್ಟಿ-ಕೋರ್ ಕಾರ್ಯಕ್ಷಮತೆ, 20 ಪ್ರತಿಶತ ಸುಧಾರಿತ GPU ಕಾರ್ಯಕ್ಷಮತೆ, 25 ಪ್ರತಿಶತ ಸುಧಾರಿತ ವಿದ್ಯುತ್ ದಕ್ಷತೆ ಮತ್ತು 80 ಪ್ರತಿಶತ ಉತ್ತಮ AI ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಈ ಚಿಪ್‌ಸೆಟ್ 3D ಪ್ಯಾಸಿವ್ ಕೂಲಿಂಗ್ ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದ್ದು, ಇದು ತಾಪಮಾನವನ್ನು ನಿಯಂತ್ರಣದಲ್ಲಿಡಲು 4,100mm ಚದರ ವೇಪರ್ ಚೇಂಬರ್ ಬಳಸುತ್ತದೆ ಎಂದು ಕಂಪೆನಿ ತಿಳಿಸಿದೆ. ಇಷ್ಡೇ ಅಲ್ಲದೇ, ಹೈಪರ್‌ಬೂಸ್ಟ್ ಗೇಮಿಂಗ್ ಎಂಜಿನ್ ಮತ್ತು ಜನರಲ್ ಪರ್ಫಾರ್ಮೆನ್ಸ್ ಅಡಾಪ್ಟರ್ (ಜಿಪಿಎ) ಫ್ರೇಮ್ ಸ್ಟೆಬಿಲೈಸರ್ ಹೊಂದಿರುವ ಈ ಪ್ರೊಸೆಸರ್ ಸ್ಮಾರ್ಟ್‌ಫೋನಿನಲ್ಲಿ ಸುಗಮ ಗೇಮಿಂಗ್ ಕಾರ್ಯಕ್ಷಮತೆ ನೀಡಲಿದೆ ಎಂದು OnePlus ಕಂಪೆನಿ ಹೇಳಿಕೊಂಡಿದೆ.
OnePlus 10R 5G ಸ್ಮಾರ್ಟ್‌ಫೋನ್ 256GB ವರೆಗಿನ UFS 3.1 ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. OnePlus 10R 5G ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳಿವಬೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಬಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿರುವ ಇತರ ಸಂವೇದಕಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕಗಳು ಸೇರಿವೆ. OnePlus 10R 5G ಸ್ಮಾರ್ಟ್‌ಫೋನಿನ ವಿಶೇಷ ಆವೃತ್ತಿಯ ಫೋನ್ 4,500mAh ಬ್ಯಾಟರಿಯೊಂದಿಗೆ 150W SuperVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಆದರೆ, 80W SuperVOOC ವೇಗದ ಚಾರ್ಜಿಂಗ್ ಹೊಂದಿರುವ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿವೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಶಬ್ದ ರದ್ದತಿ ಬೆಂಬಲವನ್ನು ಒಳಗೊಂಡಿರುವುದನ್ನು ನಾವು ಗಮನಿಸಬಹುದು.
oneplus 10r with 150w charging support is now more affordable.
01-06-25 10:08 pm
HK News Desk
Tobacco Ban, Karnataka: ಸಾರ್ವಜನಿಕ ಸ್ಥಳಗಳಲ್ಲಿ...
01-06-25 09:37 pm
ಎಚ್ಎಂಟಿ ಅರಣ್ಯ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ;...
01-06-25 08:33 pm
Karnataka Traffic Police New Rules: ಸಕಾರಣವಿಲ್...
01-06-25 11:50 am
Siddaramaiah, HD Kumaraswamy: ಸಿದ್ದರಾಮಯ್ಯನವರೇ...
31-05-25 09:41 pm
01-06-25 12:35 pm
HK News Desk
ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ,...
26-05-25 11:34 pm
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
01-06-25 12:32 pm
Mangalore Correspondent
Mangalore Congress, Notice: ಪಕ್ಷದ ಸೂಚನೆ ಮೀರಿ...
01-06-25 11:59 am
ಕೋಮು ಪ್ರಚೋದಕ ಭಾಷಣಕ್ಕೆ ಕಠಿಣ ಕ್ರಮಕ್ಕೆ ಮುಸ್ಲಿಂ ನ...
31-05-25 11:14 pm
Mangalore Police Chief Sudheer Kumar Reddy, V...
31-05-25 10:57 pm
Mangalore Rain, Ullal, Flood, Death: ಗುಡ್ಡ ಕು...
31-05-25 07:18 pm
01-06-25 11:02 pm
Mangalore Correspondent
Belagavi Rape, Arrest, Crime: ಬೆಳಗಾವಿಯಲ್ಲಿ ಮತ...
01-06-25 07:56 pm
Bantwal Crime, Mangalore, Stone Petling: ಮುಸ್...
31-05-25 10:47 pm
Mangalore crime, Threat: ಲಿಸ್ಟ್ ರೆಡಿ ಮಾಡಿದ್ದೇ...
29-05-25 11:04 pm
Mangalore Crime, Konaje: ಮೊಂಟೆಪದವು ಕೆರೆಯಲ್ಲಿ...
29-05-25 07:59 pm