ಬ್ರೇಕಿಂಗ್ ನ್ಯೂಸ್
10-04-23 08:15 pm Source: Vijayakarnataka ಡಿಜಿಟಲ್ ಟೆಕ್
ಚೀನಾ ಮೂಲದ ಟೆಕ್ ದೈತ್ಯ OnePlus ಇತ್ತೀಚೆಗಷ್ಟೇ ಭಾರತದಲ್ಲಿ ಪರಿಚಯಿಸಿರುವ 40-ಇಂಚಿನ ನೂತನ OnePlus TV 40 Y1S ಸ್ಮಾರ್ಟ್‌ಟಿವಿ ದೇಶದಲ್ಲಿ ಇದೇ 14 ಏಪ್ರಿಲ್ 2023 ರಿಂದ ಮೊದಲ ಬಾರಿಗೆ ಮಾರಾಟವಾಗಲಿದೆ ಎಂದು ಘೋಷಿಸಿದೆ. ಇದೇ ಏಪ್ರಿಲ್ 14 ರಿಂದ OnePlus, Amazon ಮತ್ತು Flipkart ಸೇರಿದಂತೆ ದೇಶದ ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿ 40-ಇಂಚಿನ OnePlus TV 40 Y1S ಸ್ಮಾರ್ಟ್‌ಟಿವಿ ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದ್ದು, ದೇಶದ ಗ್ರಾಹಕರು 21,999 ರೂ. ಬೆಲೆಯಲ್ಲಿ ಈ ಹೊಸ OnePlus TV 40 Y1S ಸ್ಮಾರ್ಟ್‌ಟಿವಿಯನ್ನು ಖರೀದಿಸಲು ಸಾಧ್ಯವಿದೆ ಎಂದು OnePlus ಕಂಪೆನಿ ತಿಳಿಸಿದೆ.
OnePlus TV 40 Y1S ಸ್ಮಾರ್ಟ್‌ಟಿವಿ ವೈಶಿಷ್ಟ್ಯಗಳು.
ದೇಶದಲ್ಲಿ ಇತ್ತೀಚಿಗಷ್ಟೇ ಈ ನೂತನ OnePlus TV 40 Y1S ಸ್ಮಾರ್ಟ್‌ಟಿವಿಯನ್ನು OnePlus ಕಂಪೆನಿ ಪರಿಚಯಿಸಿತ್ತು. ಈ ಹೊಸ ಸ್ಮಾರ್ಟ್‌ಟಿವಿ OxygenPlay 2.0, Dolby ಆಡಿಯೋ ಮತ್ತು HLG ಫಾರ್ಮ್ಯಾಟ್ ಬೆಂಬಲದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಬಿಡುಗಡೆಯಾಗಿದೆ. 40 ಇಂಚಿನ FHD ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿರುವ ಈ OnePlus TV 40 Y1S ಸ್ಮಾರ್ಟ್‌ಟಿವಿ HDR10+, HDR10 ಮತ್ತು HLG ಫಾರ್ಮ್ಯಾಟ್‌ಗಳನ್ನು ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಟಿವಿ ಪರದೆಯು ಒನ್‌ಪ್ಲಸ್ ಗಾಮಾ ಎಂಜಿನ್ ಸಹ ಬೆಂಬಲಿಸಲಿದ್ದು, ಇದು "ಬಣ್ಣಗಳು, ಡೈನಾಮಿಕ್ ಶ್ರೇಣಿ ಮತ್ತು ಸ್ಪಷ್ಟತೆಗೆ ಉತ್ತಮವಾಗಿದೆ" ಎಂದು ಕಂಪನಿ ಹೇಳಿಕೊಂಡಿದೆ.
ಈ OnePlus TV 40 Y1S ಸ್ಮಾರ್ಟ್‌ಟಿವಿಯಲ್ಲಿ 1GB RAM ಮತ್ತು 8GB ಆನ್‌ಬೋರ್ಡ್ ಸ್ಟೋರೇಜ್ ಜೊತೆಗೆ ಸಂಯೋಜಿಸಲಾದ 64-ಬಿಟ್ MediaTek MT9216 ಪ್ರೊಸೆಸರ್ ಅಳವಡಿಸಲಾಗಿದೆ. ಇದು OxygenPlay 2.0 ಜೊತೆಗೆ Android TV 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ. OnePlus TV 40 Y1S ಸ್ಮಾರ್ಟ್‌ಟಿವಿ ಗ್ರಾಹಕರು OnePlus ಕನೆಕ್ಟ್ 2.0 ಬಳಸಿಕೊಂಡು ತಮ್ಮ ಸ್ಮಾರ್ಟ್‌ಫೋನ್ ಅನ್ನು OnePlus ಟಿವಿಗೆ ಸಂಪರ್ಕಿಸಬಹುದು. ಜೊತೆಗೆ OxygenPlay 2.0 ನ ಭಾಗವಾಗಿ 230 ಲೈವ್ ಚಾನಲ್‌ಗಳಿಗೆ ನೇರ ಪ್ರವೇಶ ಸಿಗಲಿದೆ. ಇಷ್ಟೇ ಅಲ್ಲದೇ, ಹಲವಾರು ಸ್ಮಾರ್ಟ್ ಮ್ಯಾನೇಜರ್ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ಟಿವಿ ಹೊಂದಿದೆ.
OnePlus TV 40 Y1S ಸ್ಮಾರ್ಟ್‌ಟಿವಿಯಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಎರಡು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು ಮತ್ತು ಎತರ್ನೆಟ್ ಪೋರ್ಟ್ ವೈಶಿಷ್ಟ್ಯಗಳಿವೆ. ಇದರಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಗೂಗಲ್ ಅಸಿಸ್ಟೆಂಟ್ ಹಾಟ್‌ಕೀಗಳೊಂದಿಗೆ ಬ್ಲೂಟೂತ್ ರಿಮೋಟ್ ನೀಡಲಾಗಿದ್ದು, ಇದು ಅಂತರ್ನಿರ್ಮಿತ Chromecast, Google ಅಸಿಸ್ಟೆಂಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಗೇಮಿಂಗ್‌ಗಾಗಿ ಸ್ವಯಂ-ಕಡಿಮೆ ಲೇಟೆನ್ಸಿ ಮೋಡ್ (ALLM) ಹಾಗೂ ಡಾಲ್ಬಿ ಆಡಿಯೊದೊಂದಿಗೆ 20W ಔಟ್‌ಪುಟ್‌ನೊಂದಿಗೆ ಎರಡು ಪೂರ್ಣ-ಶ್ರೇಣಿಯ ಸ್ಪೀಕರ್‌ಗಳನ್ನು ಈ OnePlus TV 40 Y1S ಸ್ಮಾರ್ಟ್‌ಟಿವಿಯು ಹೊಂದಿದೆ.
oneplus tv 40 y1s to go on sale in india from april 14.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm