ಬ್ರೇಕಿಂಗ್ ನ್ಯೂಸ್
13-04-23 08:11 pm Source: Vijayakarnataka ಡಿಜಿಟಲ್ ಟೆಕ್
Xiaomi 13 ಸ್ಮಾರ್ಟ್‌ಫೋನ್ ಮೂಲಕ ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಸದ್ದು ಮಾಡುತ್ತಿರುವ ಜನಪ್ರಿಯ ಮೊಬೈಲ್ ಬ್ರ್ಯಾಂಡ್ Xiaomi ಮುಂದಿನ ಏಪ್ರಿಲ್ 18 ರಂದು ಜಾಗತಿಕವಾಗಿ ಕ್ಯಾಮೆರಾ ಫೋಕಸ್ ಆಧಾರಿತ ವಿನೂತನ Xiaomi 13 Ultra ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಕ್ಯಾಮೆರಾ ಪ್ರಿಯರನ್ನು ಆಕರ್ಷಿಸುವ ಸಲುವಾಗಿಯೇ ಈ ಹೊಸ Xiaomi 13 Ultra ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುತ್ತಿರುವ ಬಗ್ಗೆ ಕಂಪೆನಿ ಸ್ಪಷ್ಟಪಡಿಸಿದ್ದು, ಕಂಪೆನಿಯ ಬಿಡುಗಡೆ ಪ್ರಕಟಣೆಯ ಪ್ರಕಾರ, ಮುಂಬರುವ ಈ ಹೊಸ Xiaomi 13 Ultra ಸ್ಮಾರ್ಟ್‌ಫೋನ್ ಲೈಕಾ-ಬ್ರಾಂಡ್ ಕ್ಯಾಮೆರಾ ಲೆನ್ಸ್‌ಗಳನ್ನು ಹೊಂದಿರುತ್ತದೆ ಎಂದು ದೃಢಪಡಿಸಿದೆ. ಹಾಗಾದರೆ, ಮುಂಬರುವ Xiaomi 13 Ultra ಸ್ಮಾರ್ಟ್‌ಫೋನ್ ಹೇಗಿರಬಹುದು ಎಂಬುದನ್ನು ನೋಡೋಣ ಬನ್ನಿ.
Xiaomi ಕಂಪೆನಿ ಏಪ್ರಿಲ್ 18 ರಂದು ಜಾಗತಿಕವಾಗಿ Xiaomi 13 Ultra ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಘೋಷಿಸಿದೆ ಹಾಗೂ ಈವೆಂಟ್ ಟೀಸರ್ನಲ್ಲಿ ಸ್ಮಾರ್ಟ್‌ಫೋನಿನ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸವನ್ನು ಬಹಿರಂಗಪಡಿಸಿದೆ. ಟೀಸರ್ ಚಿತ್ರದಲ್ಲಿ ಕಾಣಿಸುವಂತೆ, ಮುಂಬರುವ ಈ Xiaomi 13 Ultra ಸ್ಮಾರ್ಟ್‌ಫೋನ್ ಸ್ವಲ್ಪ ದೊಡ್ಡ ಸರ್ಕ್ಯುಲರ್ ಕ್ಯಾಮೆರಾ ಮಾಡ್ಯೂಲ್ ಜೊತೆಗೆ ನಾಲ್ಕು ಸೆನ್ಸಾರ್‌ಗಳನ್ನು ಹೊಂದಿರುವಂತೆ ಕಾಣುತ್ತದೆ. ಈ ಸ್ಮಾರ್ಟ್‌ಫೋನಿನ ವಿನ್ಯಾಸದ ಆಧಾರದ ಮೇಲೆ ನಾವು ಈ ಸ್ಮಾರ್ಟ್‌ಫೋನ್ ಪಂಚ್-ಹೋಲ್ ಸೆಲ್ಫಿ ಕ್ಯಾಮೆರಾ ಮತ್ತು ಕರ್ವ್ಡ್ ಎಡ್ಜ್ ಗಳನ್ನು ಹೊಂದಿದೆ ಎಂದು ನಿರೀಕ್ಷಿಸಬಹುದು. ಇಷ್ಟೇ ಅಲ್ಲದೇ ಈ ಸ್ಮಾರ್ಟ್‌ಫೋನ್ ವೈಟ್ ಸೆರಾಮಿಕ್ ಮತ್ತು ಬ್ಲ್ಯಾಕ್ ಲೆದರ್ ಫಿನಿಶ್ ಎಂಬ ಎರಡು ಕಲರ್‌ಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.
ಇಲ್ಲಿಯವರೆಗೂ ಮುಂಬರುವ ಈ Xiaomi 13 Ultra ಸ್ಮಾರ್ಟ್‌ಫೋನ್ ಹೊಂದಿರಲಿರು ಫೀಚರ್ಸ್ ಕುರಿತು ಕಂಪೆನಿಯು ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಆದರೆ, ವದಂತಿಗಳ ಪ್ರಕಾರ Xiaomi 13 Ultra ಸ್ಮಾರ್ಟ್‌ಫೋನ್ 120 Hz ರಿಫ್ರೆಶ್ ರೇಟ್ ಸಾಮರ್ಥ್ಯದ 6.7 ಇಂಚಿನ 2K AMOLED ಡಿಸ್‌ಪ್ಲೇಯನ್ನು ಹೊಂದಲಿದೆ. ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಜೊತೆಗೆ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ ಈ Xiaomi 13 Ultra ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 13 OS ಆಧಾರಿತ MIUI 14 ಲೇಯರ್‌ನೊಂದಿಗೆ ರನ್ ಮಾಡುತ್ತದೆ. ಹಾಗೂ 4900mAh ಬ್ಯಾಟರಿ ಜೊತೆಗೆ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಇತ್ತೀಚಿನ ಸೋರಿಕೆ ಮಾಹಿತಿಗಳು ಸೂಚಿಸಿವೆ.
ಕ್ಯಾಮೆರಾ ವಿಭಾಗದಲ್ಲಿ, Xiaomi 13 Ultra ಸ್ಮಾರ್ಟ್‌ಫೋನ್ ಲೈಕಾ-ಬ್ರಾಂಡ್ ಕ್ಯಾಮೆರಾ ಲೆನ್ಸ್‌ಗಳನ್ನು ಹೊಂದಿರುತ್ತದೆ ಎಂಬುದನ್ನು ಕಂಪೆನಿ ದೃಢಪಡಿಸಿದೆ. ಇದು 50MP Sony IMX989 ಪ್ರಾಥಮಿಕ ಲೆನ್ಸ್ ಜೊತೆಗೆ ಮೂರು ಹೆಚ್ಚುವರಿ 50MP ಸೆನ್ಸಾರ್‌ಗಳನ್ನು ಹೊಂದಿರುವ ಕ್ವಾಡ್-ಕ್ಯಾಮೆರಾ ಸೆಟಪ್ ಹೊಂದಿರಬಹುದು ಹಾಗೂ 32MP ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿರಬಹುದು ಎಂದು ಸೂಚಿಸಿವೆ. ವಂದತಿಯ ಪ್ರಕಾರ Xiaomi ಕಂಪನಿಯ ಈ ಸ್ಮಾರ್ಟ್‌ಫೋನ್ ಇಲ್ಲಿಯವರೆಗಿನ ಫೋನ್‌ಗಳಿಗಿಂತ ಅತ್ಯಂತ ದುಬಾರಿ ಬೆಲೆಯದಾಗಿದೆ. ಹಲವಾರು ಸೋರಿಕೆಗಳು ಮತ್ತು ವದಂತಿಗಳ ಪ್ರಕಾರ, ಇದರ ಬೆಲೆ CNY 2,699 (ಸುಮಾರು ರೂ 75,100) ರಿಂದ CNY 7,499 (ಸುಮಾರು ರೂ 89,500) ವರೆಗೆ ಇರುತ್ತದೆ. ಈ ವೆಚ್ಚವು ಮಾರುಕಟ್ಟೆಯ ಅನುಗುಣವಾಗಿ ಬದಲಾಗಬಹುದು.
phone launch set for april 18, teased to feature leica-tuned camera.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am