ಬ್ರೇಕಿಂಗ್ ನ್ಯೂಸ್
18-04-23 07:35 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಎಲೆಕ್ಟ್ರಾನಿಕ್ ಬ್ರ್ಯಾಂಡ್HP ಸಂಸ್ಥೆಯು GenZ ಗಳು ಮತ್ತು ಮಿಲೇನಿಯಲ್ ಯುವಜತೆಯ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ತನ್ನ ಹೊಸ ಪೆವಿಲಿಯನ್ ಪ್ಲಸ್ ನೋಟ್‌ಬುಕ್‌ಗಳನ್ನು (HP ಪೆವಿಲಿಯನ್ ಪ್ಲಸ್ 14 ಮತ್ತು ಪೆವಿಲಿಯನ್ X360) ಭಾರತದಲ್ಲಿ ಇಂದು ಪರಿಚಯಿಸಿದೆ. ಗ್ರಾಹಕರ ವೇಗದ ಜೀವನಶೈಲಿಗೆ ಹೊಂದಿಕೊಳ್ಳಲು ಮತ್ತು ವೈವಿಧ್ಯಮಯ ಕಂಪ್ಯೂಟಿಂಗ್ ಅಗತ್ಯಗಳನ್ನು ಪೂರೈಸಲು ಹೊಸ HP ಪೆವಿಲಿಯನ್ ಪ್ಲಸ್ ಲ್ಯಾಪ್‌ಟಾಪ್‌ಗಳು 13th Gen Intel® Core™ ಪ್ರೊಸೆಸರ್‌ಗಳಿಂದ ಸಜ್ಜುಗೊಂಡಿದ್ದು, ಸುಧಾರಿತ ಕಾರ್ಯಕ್ಷಮತೆ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳೊಂದಿಗೆ HP 14 ಮತ್ತು HP 15 ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಲಾಗಿದೆ. ಪೆವಿಲಿಯನ್ ಮತ್ತು HP 14 ಹಾಗೂ 15 ಸರಣಿಗಳು ಭಾರತದಲ್ಲಿ HP ಯ ಅತ್ಯಂತ ಜನಪ್ರಿಯ ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುವ ಗ್ರಾಹಕ ನೋಟ್‌ಬುಕ್‌ಗಳಾಗಿವೆ ಎಂದು HP ಸಂಸ್ಥೆ ತಿಳಿಸಿದೆ.
ತಮ್ಮ ಮನೆ-ಕಚೇರಿ, ಹೂದೋಟ ಅಥವಾ ಪ್ರಯಾಣದಲ್ಲೂ ಕೆಲಸ ಮಾಡಲು ಮತ್ತು ಆಡಲು ಸಾಧ್ಯವಾಗುವಂತಹ ಸಾಧನಗಳನ್ನು GenZ ಗಳು ಮತ್ತು ಮಿಲೇನಿಯಲ್‌ಗಳು ಬಯಸುತ್ತಾರೆ. ಹೈಬ್ರಿಡ್ ಜೀವನಶೈಲಿಗಾಗಿ x360 ಹಿಂಜ್ ಮತ್ತು ಮಲ್ಟಿ-ಟಚ್‌ನೊಂದಿಗೆ ಸುಧಾರಿತ ಚಲನಶೀಲ ಉತ್ಪಾದಕತೆ ಮತ್ತು ಪ್ರಯಾಣದ ಸಂದರ್ಭದಲ್ಲಿ ಮನರಂಜನೆಗಾಗಿ HP ಪೆವಿಲಿಯನ್ ಪ್ಲಸ್ 14 ಅನ್ನು ನಿರ್ಮಿಸಲಾಗಿದೆ. ಫುಲ್ ಫಂಕ್ಷನ್ USB-C ಯಂತಹ ಹಲವು ಪೋರ್ಟ್‌ಗಳ ಆಯ್ಕೆ, USB-C ಪವರ್ ಅಡಾಪ್ಟರ್ ಬೆಂಬಲ, HDMI ಮತ್ತು ಗ್ರಾಹಕರಿಗೆ ತಮ್ಮ ಟೆಕ್ ಪರಿಸರ ವ್ಯವಸ್ಥೆಯನ್ನು ಇಚ್ಛಾನುಸಾರ ಸಂಯೋಜಿಸಲು ಹೆಡ್‌ಫೋನ್ ಜ್ಯಾಕ್ ಮುಂತಾದವುಗಳನ್ನು ಹೊಂದಿದೆ. ವರ್ಧಿತ ಗೌಪ್ಯತೆ ಮತ್ತು ಸುರಕ್ಷತೆಯನ್ನು ಒದಗಿಸಲು HP ಪೆವಿಲಿಯನ್ x360 14-ಇಂಚಿನ ಲ್ಯಾಪ್‌ಟಾಪ್ ಮ್ಯಾನುಯಲ್ ಕ್ಯಾಮೆರಾ ಶಟರ್ ಡೋರ್ ನಿಮದ ಸುಸಜ್ಜಿತವಾಗಿದೆ. ಸ್ವಚ್ಛ, ಆಧುನಿಕ ವಿನ್ಯಾಸದಲ್ಲಿ ನಿರ್ಮಿಸಲಾಗಿರುವ ಪೆವಿಲಿಯನ್ ಪ್ಲಸ್ 14 ಕೇವಲ 1.39 ಕೆಜಿ ಭಾರವಿದೆ. ಪೆವಿಲಿಯನ್ ಶ್ರೇಣಿಯ ಲ್ಯಾಪ್‌ಟಾಪ್‌ಗಳು ನ್ಯಾಚುರಲ್ ಸಿಲ್ವರ್, ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ಸ್ಪ್ರೂಸ್ ಬ್ಲೂ ಮುಂತಾದ ಅತ್ಯಾಧುನಿಕ ಬಣ್ಣಗಳಲ್ಲಿ ಲಭ್ಯವಿವೆ. ಈ ಹೊಸ ನೋಟ್‌ಬುಕ್‌ಗಳ ವೈಶಿಷ್‌ಟಯಗಳು ಹೀಗಿವೆ.
HP ಪೆವಿಲಿಯನ್ ಪ್ಲಸ್ 14 ಮತ್ತು ಪೆವಿಲಿಯನ್ X360
ಸ್ಪಷ್ಟವಾದ ದೃಶ್ಯಗಳಿಗಾಗಿ EyeSafe ಪ್ರಮಾಣೀಕೃತ ಮತ್ತು OLED ಡಿಸ್‌ಪ್ಲೇ 400 NITs ಪ್ರಕಾಶವನ್ನು ಹೊಂದಿದೆ
ಸುಧಾರಿತ ಚಲನಶೀಲ ಉತ್ಪಾದಕತೆಗಾಗಿ ಮಲ್ಟಿ-ಟಚ್
ಗರಿಷ್ಠ ಉತ್ಪಾದಕತೆಗಾಗಿ 13th Gen Intel® Core™ ಪ್ರೊಸೆಸರ್‌ಗಳು ಮತ್ತು DDR5
ಹೈ-ರೆಸಲ್ಯೂಶನ್ HP ಟ್ರೂ ವಿಷನ್ 5MP ಕ್ಯಾಮೆರಾವು ಪರಿಸರದ ಮತ್ತು AI ಗದ್ದಲವನ್ನು ನಿವಾರಿಸುತ್ತದೆ.
ಗೌಪ್ಯತೆಗಾಗಿ ಕ್ಯಾಮರಾ ಶಟರ್ ಅನ್ನು ಮ್ಯಾನುವಲ್ ಆಗಿ ಬಳಸಬಹುದು
ಬಹುಕಾರ್ಯವನ್ನು ಜಂಜಾಟಗಳಿಲ್ಲದೆ ನಡೆಸಲು ಬಹು ಪೋರ್ಟ್ ಆಯ್ಕೆಗಳು ಲಭ್ಯವಿವೆ
HP 14 & HP 15
HP 14 1.4 ಕೆಜಿ ಭಾರವಿದೆ, HP 15 1.6 ಕೆಜಿ ತೂಕವಿದೆ. ಇದು ಒಯ್ಯುವುದನ್ನು ಸುಲಭಗೊಳಿಸುತ್ತದೆ.
ಗೌಪ್ಯತೆಗಾಗಿ ಹಸ್ತಚಾಲಿತ ಶಟರ್ ಡೋರ್ ಸೌಲಭ್ಯವಿದೆ
ವೇಗದ ಸಂಪರ್ಕಕ್ಕಾಗಿ ವೈ-ಫೈ 6
ವೀಡಿಯೊ ಮತ್ತು ಧ್ವನಿಯ ಉತ್ತಮ ಗುಣಮಟ್ಟಕ್ಕಾಗಿ ಪರಿಸರದ ಮತ್ತು AI ಗದ್ದಲ ನಿವಾರಣೆ ಸೌಲಭ್ಯವಿರುವ FHD ಕ್ಯಾಮೆರಾ ಹೊಂದಿದೆ
ಬೆಲೆ ಮತ್ತು ಲಭ್ಯತೆ
HP 14 INR 39,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
HP ಪೆವಿಲಿಯನ್ X360 INR 57,999/-ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
HP ಪೆವಿಲಿಯನ್ ಪ್ಲಸ್ 14 ಕೇವಲ 81,999/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಬಿಡುಗಡೆ ಕುರಿತು ಮಾತನಾಡಿದ HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಅವರು, “ಭಾರತದಲ್ಲಿ ಪಿಸಿ ಬಳಕೆದಾರರ ನೆಲೆಯು ವಿಸ್ತರಿಸುತ್ತಿದೆ. ಮೆಟ್ರೋ ನಗರಗಳು ಮತ್ತು ಸಣ್ಣ ಪಟ್ಟಣಗಳ ಯುವಕರು ಕೆಲಸ, ಕಲಿಕೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಪಿಸಿಗಳನ್ನು ಬಳಸುತ್ತಾರೆ. ಯುವ ಮತ್ತು ಆಧುನಿಕ ಗ್ರಾಹಕರ ವಿಕಸಿಸುತ್ತಿರುವ ಅಗತ್ಯಗಳನ್ನು ಪೂರೈಸಲು HP ಯು ತನ್ನ ಪರಿಸರ ವ್ಯವಸ್ಥೆಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಮತ್ತು ಆವಿಷ್ಕರಿಸುತ್ತಿದೆ. ಮಲ್ಟಿ-ಟಚ್ ಮತ್ತು ಅನೇಕ ಪೋರ್ಟ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಹೈಬ್ರಿಡ್ ಜೀವನಶೈಲಿಯನ್ನು ಪೂರೈಸಲು ಹೊಚ್ಚ-ಹೊಸ HP ಪೆವಿಲಿಯನ್ ಪ್ಲಸ್ 14 ಲ್ಯಾಪ್‌ಟಾಪ್‌ಗಳನ್ನು ನಾವು ತಯಾರಿಸಿದ್ದೇವೆ. ಅಲ್ಲದೆ, ಉತ್ತಮ ಕಾರ್ಯಕ್ಷಮತೆಯ ಹೊಸ HP 14 ಮತ್ತು HP 15 ಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವಂತೆ ನಿರ್ಮಿಸಲಾಗಿದೆ. ಬಳಕೆದಾರರು ಸಂಪರ್ಕದಲ್ಲಿರುತ್ತಾರೆ, ಕ್ರಿಯಾಶೀಲರಾಗಿರುತ್ತಾರೆ ಮತ್ತು ಉತ್ಪಾದಕರಾಗಿರುತ್ತಾರೆ" ಎಂದು ಹೇಳಿದರು.
ಹೊಸ HP ಮತ್ತು HP 15 ಪರಿಚಯಿಸುತ್ತಿದ್ದೇವೆ:
ಉನ್ನತ ದರ್ಜೆಯ ಕಾರ್ಯಕ್ಷಮತೆ ನೀಡುವ ಉದ್ದೇಶದಿಂದ ಬಹುಮುಖತೆ ಮತ್ತು ಕೈಗೆಟುಕುವಿಕೆಯ ಮೇಲೆ ಗಮನವಿರಿಸಿ ನಿರ್ಮಿಸಲಾದ ಹೊಚ್ಚ ಹೊಸ HP 14 ಮತ್ತು HP 15 ಲ್ಯಾಪ್‌ಟಾಪ್‌ಗಳನ್ನು HP ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳು ಕಾಂಪ್ಯಾಕ್ಟ್ ಆಗಿದ್ದು, ಒಯ್ಯಲು ಸುಲಭವಾಗಿವೆ. ಲ್ಯಾಪ್‌ಟಾಪ್‌ಗಳು ಕವರ್ ಚಾಸಿಸ್‌ನಲ್ಲಿ ಲೋಹದ ವಿನ್ಯಾಸವಿದ್ದು, ದೀರ್ಘ ಬಾಳಿಕೆ ಬರುತ್ತವೆ. ಇಂಟೆಲ್‌ನ ಅತ್ಯಾಧುನಿಕ ಪ್ರೊಸೆಸರ್‌ಗಳಿರುವ ಕಾರಣ ಲ್ಯಾಪ್‌ಟಾಪ್‌ಗಳು ದೃಢವಾದ ಕಾರ್ಯಕ್ಷಮತೆ ಮತ್ತು ಮಲ್ಟಿ ಟಾಸ್ಕಿಂಗ್ ಸೌಲಭ್ಯ ನೀಡುತ್ತವೆ. ಐಚ್ಛಿಕ ಫಿಂಗರ್-ಪ್ರಿಂಟ್ ರೀಡರ್ ಲಾಗ್-ಇನ್ ಮಾಡಲು ವೇಗವಾದ ಮತ್ತು ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.ಸುಸ್ಥಿರತೆಗೆ HP ಯು ಬದ್ಧವಾಗಿದ್ದು, ಹೊಸದಾಗಿ ಬಿಡುಗಡೆಯಾದ ಎಲ್ಲ ಸಾಧನಗಳು - HP ಪೆವಿಲಿಯನ್ ಪ್ಲಸ್, HP ಪೆವಿಲಿಯನ್ X360 HP 14 ಮತ್ತು 15 - ಸಾಗರದಿಂದ ಸಂಗ್ರಹಿಸಲಾದ ಪ್ಲಾಸ್ಟಿಕ್ ಮತ್ತು ಗ್ರಾಹಕರು ಬಳಸಿರುವ ಮರುಬಳಕೆಯ ಪ್ಲಾಸ್ಟಿಕ್‌ಗಳಿಂದ ನಿರ್ಮಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
hp pavilion plus notebooks, hp 14 and hp 15 laptops launched in india.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 09:24 pm
HK News Desk
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm