ಬ್ರೇಕಿಂಗ್ ನ್ಯೂಸ್
18-08-23 06:46 pm Source: Gizbot Kannada ಡಿಜಿಟಲ್ ಟೆಕ್
ಇಯರ್‌ಬಡ್ಸ್ ವಲಯದಲ್ಲಿ ನಾಯ್ಸ್ ಕಂಪೆನಿ ಡಿವೈಸ್‌ಗಳಿಗೆ ಉತ್ತಮ ಮಾರುಕಟ್ಟೆಯಿದೆ. ತನ್ನ ವಿಭಿನ್ನ ಶೈಲಿ ಹಾಗೂ ನವೀನ ಮಾದರಿಯ ತಂತ್ರಜ್ಞಾನದಿಂದ ನಾಯ್ಸ್ ಇಯರ್‌ಬಡ್ಸ್‌ಗಳು ಗಮನಸೆಳೆದಿವೆ. ಇದೀಗ ಅದರ ಮುಂದುವರೆದ ಭಾಗವಾಗಿ ಹೊಸ ನಾಯ್ಸ್ ಬಡ್ಸ್ VS106 ಅನ್ನು ಬಿಡುಗಡೆ ಮಾಡಿದೆ.
ಹೌದು, ನಾಯ್ಸ್ ಬಡ್ಸ್ VS106 ಇಯರ್‌ಬಡ್ಸ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಇಯರ್ ಬಡ್ಸ್ ಟ್ರೂ ವಾಯರ್‌ಲೆಸ್ ಸ್ಟಿರಿಯೊ ಲೈನ್‌ಅಪ್‌ಗೆ ಸೇರಿದ್ದು, ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 50 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ನಾಯ್ಸ್ ಬಡ್ಸ್ VS106 ನವೀನ ಮಾದರಿಯ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಈ ಇಯರ್‌ಬಡ್ಸ್ ಬಳಕೆದಾರರಿಗೆ ಅತ್ಯುತ್ತಮ ಆಡಿಯೋ ಅನುಭವವನ್ನು ನೀಡಲಿದೆ. ಇದಕ್ಕಾಗಿ ಮೂರು ವಿಭಿನ್ನ ಈಕ್ವಲೈಜರ್ ವಿಧಾನಗಳೊಂದಿಗೆ ಕಸ್ಟಮೈಸ್ ಮಾಡಲು ಅನುಮತಿಸಲಿದೆ. ಇದಲ್ಲದೆ ಹೆಚ್ಚುವರಿಯಾಗಿ ಕ್ವಾಡ್ ಮೈಕ್ರೊಫೋನ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಅನ್ನು ಸಹ ಹೊಂದಿದೆ. ಇದರಿಂದ ಬಳಕೆದಾರರಿಗೆ ಅತ್ಯುತ್ತಮವಾದ ಆಡಿಯೊ ಅನುಭವವನ್ನು ಖಾತ್ರಿಗೊಳಿಸಲಿದೆ.
ಇನ್ನು ನಾಯ್ಸ್ ಬಡ್ಸ್ VS106 ಸಿಂಗಲ್ ಚಾರ್ಜ್‌ನಲ್ಲಿ 50 ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ. ಅದರಲ್ಲೂ ಕೇವಲ 10 ನಿಮಿಷಗಳ ಕ್ವಿಕ್ ಚಾರ್ಜ್‌ನಲ್ಲಿ 200 ನಿಮಿಷಗಳ ಪ್ಲೇಟೈಮ್ ನೀಡಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಇಯರ್‌ಬಡ್ಸ್ 10mm ಆಡಿಯೋ ಡ್ರೈವರ್ ಹೊಂದಿದ್ದು, ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್ ಅನ್ನು ಒದಗಿಸುತ್ತದೆ. ಜೊತೆಗೆ 40ms ವರೆಗಿನ ಅಲ್ಟ್ರಾ-ಕಡಿಮೆ ಲೇಟೆನ್ಸಿ ಹೊಂದಿದ್ದು, ವಿಳಂಬ-ಮುಕ್ತ ಮನರಂಜನೆಯನ್ನು ನೀಡಲಿದೆ.
ನಾಯ್ಸ್ ಬಡ್ಸ್ VS106 ಇಯರ್‌ಬಡ್ಸ್ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಇದನ್ನು ಆಕ್ಟಿವ್ ಲೈಪ್‌ಸ್ಟೈಲ್‌ನೊಂದಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ನೀರು ಮತ್ತು ಬೆವರಿನಿಂದ ರಕ್ಷಣೆ ನೀಡಲು IPX5 ವಾಟರ್ ಪ್ರೂಫ್ ವ್ಯವಸ್ಥೆಯನ್ನು ಸಹ ಹೊಂದಿದೆ. ಇದು ಬಳಕೆದಾರರ ಲೈಪ್‌ಸ್ಟೈಲ್ ಮತ್ತು ಔಟ್‌ಸೈಡ್ ಸಾಹಸಗಳಿಗೆ ಸೂಕ್ತವಾಗಿದೆ.
ನಾಯ್ಸ್ ಬಡ್ಸ್ VS106 ಭಾರತದಲ್ಲಿ 1,299ರೂ.ಬೆಲೆಯಲ್ಲಿ ಎಂಟ್ರಿ ನೀಡಿದೆ. ಇದನ್ನು ನೀವು ಜೆಟ್ ಬ್ಲ್ಯಾಕ್, ಸ್ಕೈ ಬ್ಲೂ ಮತ್ತು ಕ್ಲೌಡ್ ವೈಟ್ ಕಲರ್ ಆಯ್ಕೆಗಳಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಇಯರ್‌ಬಡ್ಸ್ ನಿಮಗೆ ಅಮೆಜಾನ್ ಮತ್ತು gonoise.com ಮೂಲಕ ಖರೀದಿಗೆ ಲಭ್ಯವಾಗಲಿದೆ.
ಇದಲ್ಲದೆ ನಾಯ್ಸ್ ಕಂಪೆನಿ ಇತ್ತೀಚಿಗೆ ನಾಯ್ಸ್ ಬಡ್ಸ್ VS104 ಮ್ಯಾಕ್ಸ್ ಇಯರ್‌ಬಡ್ಸ್ ಪರಿಚಯಿಸಿದೆ. ಈ ಇಯರ್‌ಬಡ್ಸ್ ಪ್ರೀಮಿಯಂ ಆಡಿಯೋ ಅನುಭವವನ್ನು ನೀಡಲಿದ್ದು, 13mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದೆ. ಇದು ಬ್ಲೂಟೂತ್ 5.3 ಆನ್‌ಬೋರ್ಡ್ ಜೊತೆಗೆ ಹೈಪರ್ ಸಿಂಕ್ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದ ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್ ಮುಚ್ಚಳವನ್ನು ತೆರೆದ ತಕ್ಷಣವೇ ಸ್ಮಾರ್ಟ್‌ಫೋನ್‌ನೊಂದಿಗೆ ಇಯರ್‌ಬಡ್ಸ್ ಕನೆಕ್ಟ್ ಆಗಲಿದೆ.
ಈ ಇಯರ್‌ಬಡ್ಸ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಟೆಕ್ನಾಲಜಿ ಹೊಂದಿದೆ. ಇದರಿಂದ ನಿಮ್ಮ ಸುತ್ತಮತ್ತಲಿನ ಶಬ್ದವನ್ನು 25 dB ವರೆಗೆ ಕಡಿತಗೊಳಿಸುತ್ತದೆ. ಆದರಿಂದ ಬಳಕೆದಾರರಿಗೆ ಅಹ್ಲಾದಕರ ಹಾಗೂ ತಲ್ಲೀನಗೊಳಿಸುವ ಆಲಿಸುವ ಅನುಭವ ಸಿಗಲಿದೆ. ಜೊತೆಗೆ ಈ ಇಯರ್‌ಬಡ್ಸ್ ಕರೆಗಳು ಮತ್ತು ವರ್ಚುವಲ್ ಮೀಟಿಂಗ್‌ಗಳ ಸಮಯದಲ್ಲಿ ಸ್ಪಷ್ಟ ಸಂವಹನಕ್ಕಾಗಿ ಕ್ವಾಡ್ ಮೈಕ್ ಮತ್ತು ಎನ್ವಿರಾನ್‌ಮೆಂಟಲ್ ನಾಯ್ಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದಿಷ್ಟೇ ಅಲ್ಲ ಈ ಇಯರ್‌ಬಡ್ಸ್ 50ms ವರೆಗೆ ಆಡಿಯೊ ಸಿಂಕ್ರೊನೈಸೇಶನ್ ಅನ್ನು ನೀಡಲಿದೆ.
Noise Buds vs106 promise a Playtime of up to 50 Hours on a Single Charge Price just RS 1299.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm