ಬ್ರೇಕಿಂಗ್ ನ್ಯೂಸ್
21-08-23 07:52 pm Source: Gizbot Kannada ಡಿಜಿಟಲ್ ಟೆಕ್
ಜನಪ್ರಿಯ ಇ ಕಾಮರ್ಸ್ ದೈತ್ಯ ಅಮೆಜಾನ್ ಆನ್‌ಲೈನ್ ಶಾಪಿಂಗ್ ಗ್ರಾಹಕರನ್ನು ಸೆಳೆಯಲು ಒಂದಿಲ್ಲೊಂದು ಮಾರಾಟ ಮೇಳ ಆಯೋಜಿಸುತ್ತ ಸಾಗಿದೆ. ಇದೀಗ ಅಮೆಜಾನ್ ಸೌಂಡ್‌ಬಾರ್ ಡೇಸ್ ಸೇಲ್ ಮಾರಾಟ ಅಡಿ ಕೆಲವು ಆಯ್ದ ಬ್ರ್ಯಾಂಡೆಂಡ್ ಆಡಿಯೋ ಸೌಂಡ್‌ಬಾರ್‌ಗಳಿಗೆ ಬಿಗ್ ಡಿಸ್ಕೌಂಟ್ ಘೋಷಿಸಿದೆ.
ಹೌದು, ಅಮೆಜಾನ್ ತಾಣದಲ್ಲಿ ಕೆಲವು ಆಯ್ದ ಸೌಂಡ್‌ಬಾರ್ ಡಿವೈಸ್‌ಗಳಿಗೆ ಬೊಂಬಾಟ್ ಡಿಸ್ಕೌಂಟ್ ಲಭ್ಯ. ಸೋನಿ, ಫಿಲಿಪ್ಸ್, ಜೆಬಿಎಲ್, ಬೋಟ್ ಸೇರಿದಂತೆ ಇತರೆ ಕೆಲವು ಕಂಪನಿಗಳ ಸೌಂಡ್‌ಬಾರ್‌ಗಳು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಫಿಲಿಪ್ಸ್ ಸಂಸ್ಥೆಯ ಫಿಲಿಪ್ಸ್ ಆಡಿಯೋ TAB7807 3.1CH ಹಾಗೂ ಸೋನಿ ಕಂಪನಿಯ ಸೋನಿ HT-S20R ರಿಯಲ್ 5.1ch ಡಿವೈಸ್‌ಗಳು ಹೆಚ್ಚಿನ ಗಮನ ಸೆಳೆದಿದೆ.
ಫಿಲಿಪ್ಸ್ ಸಂಸ್ಥೆಯ ಫಿಲಿಪ್ಸ್ TAB7807 3.1 CH ಸೌಂಡ್‌ಬಾರ್ 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳ ಪಡೆದಿದೆ. ಅದೇ ರೀತಿ ಸೋನಿ ಸಂಸ್ಥೆಯ ಸೋನಿ HT-S20R ರಿಯಲ್ 5.1ch ಸಹ ಡೈನಾಮಿಕ್ ಆಡಿಯೋ ಸೌಲಭ್ಯ ಪಡೆದುಕೊಂಡಿದೆ. ಇನ್ನುಳಿದಂತೆ ಈ ಸೌಂಡ್‌ಬಾರ್‌ಗಳ ಫೀಚರ್ಸ್ ಬಗ್ಗೆ ಹಾಗೂ ಇತರೆ ಸೌಂಡ್‌ಬಾರ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಫಿಲಿಪ್ಸ್ TAB7807 3.1 CH ಸೌಂಡ್‌ಬಾರ್ ಫೀಚರ್ಸ್ ಹೀಗಿವೆ : ಫಿಲಿಪ್ಸ್ TAB7807 3.1 CH ಸೌಂಡ್‌ಬಾರ್ ಕೂಡ 3.1 ಚಾನೆಲ್ ಸೌಲಭ್ಯ ಪಡೆದಿದೆ. ಆದರೆ ಈ ಸೌಂಡ್‌ಬಾರ್ 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದ್ದು, ಇದರಲ್ಲಿ ಸಂಪೂರ್ಣ ಸಿಸ್ಟಮ್‌ಗೆ ವಾಯರ್‌ಲೆಸ್ ಆಗಿ ಕನೆಕ್ಟ್ ಮಾಡುವ 8 ಇಂಚಿನ ಸಬ್ ವೂಫರ್ ಅನ್ನು ಸಹ ಪಡೆದುಕೊಂಡಿದೆ. ಈ ಫಿಲಿಪ್ಸ್ ಸೌಂಡ್‌ಬಾರ್‌ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಟ್ವೀಟರ್ ಸ್ಪೀಕರ್‌ಗಳನ್ನು ಒದಗಿಸಲಾಗಿದೆ ಎಂದು ಫಿಲಿಪ್ಸ್ ಕಂಪೆನಿ ಹೇಳಿಕೊಂಡಿದೆ.
ಈ ಸೌಂಡ್‌ಬಾರ್ ಕೂಡ ಡಾಲ್ಬಿ ಅಟ್ಮಾಸ್ ಆಡಿಯೋ ಸೌಲಭ್ಯ ಅನ್ನು ಸಪೋರ್ಟ್ ಮಾಡುತ್ತದೆ. ಹೀಗಾಗಿ ಈ ಮೂಲಕ ಬಳಕೆದಾರರು ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲಿಯೂ ಬಹುಮುಖ್ಯವಾಗಿ ಸಿನಿಮಾಗಳನ್ನು ವೀಕ್ಷಣೆ ಮಾಡುವಾಗ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಸೌಂಡ್‌ಬಾರ್ ಬೆಲೆಯು 27,499 ರೂ. ಆಗಿದೆ.
ಸೋನಿ HT-S20R ರಿಯಲ್ 5.1ch ಸೌಂಡ್‌ಬಾರ್ ಫೀಚರ್ಸ್ ಹೀಗಿವೆ : ಸೋನಿ HT-S20R ರಿಯಲ್ 5.1ch ಸೌಂಡ್‌ಬಾರ್ ಡಾಲ್ಬಿ ಡಿಜಿಟಲ್‌ನೊಂದಿಗೆ 5.1 ಪ್ರತ್ಯೇಕ ಆಡಿಯೊ ಚಾನಲ್‌ಗಳಿಂದ ಸರೌಂಡ್ ಸೌಂಡ್ ಅನ್ನು ಒದಗಿಸುತ್ತದೆ. ಅಲ್ಲದೇ ಇದು ಡೈನಾಮಿಕ್, ತಲ್ಲೀನಗೊಳಿಸುವ, ಸಿನಿಮೀಯ ವಾಯಿಸ್ ಅನ್ನು ಒದಗಿಸಲು 3-ch ಸೌಂಡ್‌ಬಾರ್ ಗಳೊಂದಿಗೆ ಕೆಲಸ ನಿರ್ವಹಿಸುವ ಬಾಹ್ಯ ಸಬ್‌ವೂಫರ್ ಸೌಲಭ್ಯ ಅನ್ನು ಸಹ ನೀಡುತ್ತದೆ.
ಸೋನಿ HT-S20R ರಿಯಲ್ 5.1ch ಸೌಂಡ್‌ಬಾರ್ 400W ಪವರ್ ಔಟ್‌ಪುಟ್ ಅನ್ನು ಹೊಂದಿದ್ದು, ಈ ಸಾಧನ ಬ್ಲೂಟೂತ್ ಸಂಪರ್ಕದ ಮೂಲಕ ಬಳಕೆದಾರರ ನೆಚ್ಚಿನ ಕಂಟೆಂಟ್ ಅನ್ನು ಸುಲಭವಾಗಿ ಪ್ಲೇ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಹಾಗೆಯೇ ಮೆಮೊರಿ ಸ್ಟಿಕ್‌ನಿಂದ ಸುಲಭವಾಗಿ ಮ್ಯೂಸಿಕ್ ಅನ್ನು ಪ್ಲಗ್ ಮಾಡಲು ಮತ್ತು ಪ್ಲೇ ಮಾಡಲು ಯುಎಸ್‌ಬಿ ಪೋರ್ಟ್ ಅನ್ನು ಬಳಕೆ ಮಾಡಬಹುದು.
ಸೋನಿ HT-S20R ರಿಯಲ್ 5.1ch ಸೌಂಡ್‌ಬಾರ್ ಒಂದೇ ಕೇಬಲ್ ಕನೆಕ್ಟಿವಿಟಿ ಮೂಲಕ ಟಿವಿಗೆ ಸೌಂಡ್‌ಬಾರ್ ಅನ್ನು ಕನೆಕ್ಟ್ ಮಾಡಲು ಇದು HDMI ಆರ್ಕ್ ಮತ್ತು ಆಪ್ಟಿಕಲ್ ಕನೆಕ್ಟಿವಿಟಿ ಸೌಲಭ್ಯದೊಂದಿಗೆ ಲಭ್ಯ. ಇನ್ನು ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಈ ಸೌಂಡ್‌ಬಾರ್ ಬೆಲೆಯು 17,843 ರೂ. ಆಗಿದೆ.
Amazon is Offering Great Offers on these Sony and Philips Soundbar.
14-01-25 03:36 pm
HK News Desk
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
14-01-25 08:36 pm
Mangalore Correspondent
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
Bangalore Cow Incident: ಹಸುವಿನ ಕೆಚ್ಚಲು ಕೊಯ್ದ...
13-01-25 10:48 am
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm