ಬ್ರೇಕಿಂಗ್ ನ್ಯೂಸ್
25-12-20 03:27 pm Source: GIZBOT ಡಿಜಿಟಲ್ ಟೆಕ್
ಖಾಸಗಿ ಸಂಸ್ಥೆಯಲ್ಲಿ ದುಡಿಯುವ ನೌಕರರ ಪಾಲಿಗೆ ನೌಕರರ ಭವಿಷ್ಯ ನಿಧಿ(PF) ಕಷ್ಟಕಾಲಕ್ಕೆ ಆರ್ಥಿಕ ನೆರವಿನ ಭರವಸೆ ಆಗಿದೆ. ಪ್ರತಿಯೊಬ್ಬ ನೌಕರನು ತನ್ನ ಭವಿಷ್ಯ ನಿಧಿಯ ಬಗ್ಎ ಸಾವಿರಾರು ಕನಸು ಕಟ್ಟಿಕೊಂಡಿರುತ್ತಾನೆ. ನಿವೃತ್ತಿಯ ನಂತರ, ಇಲ್ಲವೇ ಕಷ್ಟ ಕಾಲದಲ್ಲಿ ಪಿಎಫ್ ಹಣ ನೌಕರರ ಸಹಾಯಕ್ಕೆ ಬರಲಿದೆ. ಇನ್ನು ಪ್ರತಿ ತಿಂಗಳು ಕಾರ್ಯನಿರತ ನೌಕರರ ಸಂಬಳದಲ್ಲಿನ ಒಂದು ನಿರ್ದಿಷ್ಟ ಮೊತ್ತ ಮತ್ತು ಉದೋಗ ಸಂಸ್ಥೆಯಿಂದ ಒಂದು ನಿರ್ದಿಷ್ಟ ಮೊತ್ತ ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಜಮಾ ಆಗುತ್ತದೆ.

ಹೌದು, ಖಾಸಗಿ ಸಂಸ್ಥೆಯಲ್ಲಿ ದುಡಿಯುವ ಪ್ರತಿಯೊಬ್ಬ ನೌಕರನು ಪಿಎಫ್ ಮೇಲೆ ಆಸೆ ಕಂಗಳಿಂದ ನೋಡುತ್ತಿರುತ್ತಾನೆ. ಇನ್ನು ಪಿಎಫ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ಉದ್ಯೋಗಿಯ ತನ್ನ ಕೆವೈಸಿ ಮಾಹಿತಿಯನ್ನು ನಮೂದಿಸಿರಬೇಕು. ಉದ್ಯೋಗಿಯು ಮುಖ್ಯವಾಗಿ ಆಧಾರ್ ಕಾರ್ಡ್ ಮಾಹಿತಿ ಸರಿಯಾಗಿರಬೇಕು. ಆಧಾರ್ ಕಾರ್ಡ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಬಳಕೆಯಲ್ಲಿಟ್ಟಿರಬೇಕು. ಹಾಗೆಯೇ ಬ್ಯಾಂಕ್ ಖಾತೆಯ ವಿವರ, ಪ್ಯಾನ್ ಕಾರ್ಡ್ ಮಾಹಿತಿ ಒದಗಿಸುವುದು ಅಗತ್ಯವಾಗಿದೆ. ಕೆಲವೊಮ್ಮೆ ನೀವು ಮೊಬೈಲ್ ಸಂಖ್ಯೆ ಬದಲಾಯಿಸಿದರೆ ಅದನ್ನು ಪಿಎಫ್ ಖಾತೆಯಲ್ಲಿ ಸಹ ಮೊಬೈಲ್ ನಂಬರ್ ಬದಲಾಯಿಸಬಹುದು.
ನೀವು ಯಾವುದಾದರೂ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರೆ, ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಕಡಿತಗೊಳ್ಳುವ ಭವಿಷ್ಯ ನಿಧಿ ಮೊತ್ತದ ಬಗ್ಗೆ ನಿಮಗೆ ತಿಳಿದಿರಬೇಕು. ಇದನ್ನು ಸುಲಭಗೊಳಿಸಲು, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)UAN ಎಂದು ಹೆಚ್ಚು ವ್ಯಾಪಕವಾಗಿ ಕರೆಯಲ್ಪಡುವ ಯುನಿವರ್ಸಲ್ ಅಕೌಂಟ್ ಸಂಖ್ಯೆಯನ್ನು ಪ್ರಾರಂಭಿಸಿತು, ಅದು ಖಾತೆಯಲ್ಲಿ ಮಾಡಲಾಗುತ್ತಿರುವ ಎಲ್ಲಾ ವಹಿವಾಟುಗಳು ಮತ್ತು ಠೇವಣಿಗಳ ಬಗ್ಗೆ ನಿಗಾ ಇಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಇದು ನೀವು ಕೆಲಸ ಹಾಗೂ ಕಂಪೆನಿ ಬದಲಾಯಿಸಿದರೂ ಒಂದೇ ಖಾತೆ ಸಂಖ್ಯೆಯಲ್ಲಿ ರನ್ ಆಗಲಿದೆ.

ಇನ್ನು ಇದರಲ್ಲಿ ಇತರ ಯಾವುದೇ ಬ್ಯಾಂಕ್ ಖಾತೆಗಳಂತೆ, ಯುಎಎನ್ ಸಹ ಸದಸ್ಯರು ಸಕ್ರಿಯ ಫೋನ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು, ಅದರ ಮೂಲಕ ಭವಿಷ್ಯದ ಎಲ್ಲಾ ಸಂವಹನಗಳನ್ನು ಮಾಡಲಾಗುತ್ತದೆ. ಇದರರ್ಥ, ನೀವು ಇತ್ತೀಚೆಗೆ ಹೊಸ ಸಂಖ್ಯೆಯನ್ನು ಪಡೆದುಕೊಂಡಿದ್ದರೆ ಮತ್ತು ಹಿಂದಿನದು ಇನ್ನು ಮುಂದೆ ಸಕ್ರಿಯವಾಗಿಲ್ಲದಿದ್ದರೆ ನಿಮ್ಮ ಫೋನ್ ಸಂಖ್ಯೆಯನ್ನು ಖಾತೆಯಲ್ಲಿ ನವೀಕರಿಸುವುದು ಸಹ ಮುಖ್ಯವಾಗಿದೆ. EPFO ಪೋರ್ಟಲ್ ಬಳಸಿ ನಿಮ್ಮ ಫೋನ್ ಸಂಖ್ಯೆಯನ್ನು ಹೇಗೆ ಬದಲಾಯಿಸುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ.

Https://www.epfindia.gov.in/site_en/index.php ಗೆ ಭೇಟಿ ನೀಡಿ ಮತ್ತು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ
ಹಂತ:2 ಮ್ಯಾನೇಜ್ ಟ್ಯಾಬ್ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ ಸಂಪರ್ಕ ವಿವರಗಳ ಆಯ್ಕೆಯನ್ನು ಆರಿಸಿ
ಹಂತ:3 ಇಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಚೆಕ್‌ಬಾಕ್ಸ್ ಆಯ್ಕೆಯನ್ನು ಆರಿಸಿ
ಹಂತ:4 ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಅದನ್ನು ಖಚಿತಪಡಿಸಲು ಮರು ನಮೂದಿಸಿ
ಹಂತ:5 ನಂತರ ಒಟಿಪಿ ಸ್ವೀಕರಿಸಲು ಗೆಟ್ ಆಥರೈಸೇಶನ್ ಪಿನ್ ಬಟನ್ ಕ್ಲಿಕ್ ಮಾಡಿ
ಹಂತ:6 ಈಗ, ಹಿಂದಿನ ಹಂತದಲ್ಲಿ ನಮೂದಿಸಲಾದ ನಿಮ್ಮ ಹೊಸ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ನಮೂದಿಸಿ ಮತ್ತು ಬದಲಾವಣೆಗಳನ್ನು ಉಳಿಸು ಬಟನ್ ಕ್ಲಿಕ್ ಮಾಡಿ
ಹಂತ:7 ಇದರ ನಂತರ, ಸಂಪರ್ಕ ವಿವರಗಳನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದು ಹೊಸ ಸಂದೇಶ ಕಾಣಿಸುತ್ತದೆ.
This News Article is a Copy of GIZBOT
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
24-01-26 02:13 pm
HK News Staffer
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm