ಬ್ರೇಕಿಂಗ್ ನ್ಯೂಸ್
16-01-21 05:36 pm Source: GIZBOT Mutthuraju H M ಡಿಜಿಟಲ್ ಟೆಕ್
ಪ್ರಸ್ತುತ ಜನವರಿ 1 ರಿಂದ ಭಾರತದ ಎಲ್ಲಾ ವಾಹನಗಳು ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿರಬೇಕು ಎಂಬ ಕಾನೂನ ಜಾರಿಯಲ್ಲಿದೆ. ಕಳೆದ ತಿಂಗಳು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಆದೇಶವನ್ನು ಪ್ರಕಟಿಸಿದ ನಂತರ ದೇಶದೆಲ್ಲೆಡೆ ಈ ಕ್ರಮ ಜಾರಿಯಲ್ಲಿದೆ. ಈ ಮೂಲಕ ದೇಶಾದ್ಯಂತ ಇರುವ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸರದಿಯಲ್ಲಿ ವಾಹನಗಳು ನಿಲ್ಲುವುದನ್ನು ತಪ್ಪಿಸುವುದಕ್ಕೆ ಸಾಧ್ಯವಾಗುತ್ತಿದೆ. ದೇಶದಲ್ಲಿರುವ ಟೋಲ್‌ಪ್ಲಾಜ್‌ಗಳಲ್ಲಿ ತಡೆರಹಿತ ಸಂಚಾರವನ್ನು ಸಕ್ರಿಯಗೊಳಿಸುವ ಪ್ರಯತ್ನವಾಗಿ ಈ ಕಾಯ್ದೆ ಜಾರಿಯಲ್ಲಿದೆ.
ಹೌದು, ಜನವರಿ 1 ರಿಂದ ಪ್ರತಿಯೊಂದು ವಾಹನವೂ ಫಾಸ್ಟ್ಯಾಗ್ ಹೊಂದಿರಲೇಬೆಕಂಬ ಕಾನೂನು ಜಾರಿಯಾಗಿದೆ. ಟೋಲ್ ಪ್ಲಾಜಾಗಳಲ್ಲಿನ ಚಾಲಕರಿಗೆ ಸರದಿಯಲ್ಲಿ ಕಾಯದೆ ತಕ್ಷಣ ಹಣವನ್ನು ಪಾವತಿಸಲು ಫಾಸ್ಟ್ಯಾಗ್ ಸಹಾಯ ಮಾಡುತ್ತದೆ. ಅವರು ನೇರವಾಗಿ ಬ್ಯಾಂಕಿನಿಂದ ಹಣವನ್ನು ಪಾವತಿಸುವ ಮೂಲಕ ಇದನ್ನು ಮಾಡಬಹುದು. ಈಗಾಗಲೇ, ಫಾಸ್ಟ್ಯಾಗ್ 20 ಕ್ಕೂ ಹೆಚ್ಚು ಬ್ಯಾಂಕುಗಳೊಂದಿಗೆ ಕೈಜೋಡಿಸಿದೆ. ಇದನ್ನು ಬ್ಯಾಂಕುಗಳು, ಯುಪಿಐ ಅಥವಾ ಇ-ವ್ಯಾಲೆಟ್‌ಗಳ ಮೂಲಕ ಮಾಡಬಹುದು. Google Pay, PhonePe, ಮತ್ತು BHIM UPI ಯಿಂದ FASTag ಅನ್ನು ಹೇಗೆ ರೀಚಾರ್ಜ್ ಮಾಡುವುದು ಅನ್ನೊದು ತಿಳಿದೆ ಇದೆ.

ವಾಹನ ಸವಾರರು ಫಾಸ್ಟ್ಯಾಗ್ ಅನ್ನು ಐಡಿಬಿಐ ಬ್ಯಾಂಕ್ ಮೂಲಕ ಕೂಡ ರಿಚಾರ್ಜ್ ಮಾಡಬಹುದು. ಇನ್ನು ಐಡಿಬಿಐ ಫಾಸ್ಟ್ಯಾಗ್‌ಗೆ ಸೇರುವ ಶುಲ್ಕ ರೂ. 100. ಆಗಿದೆ. ಇದನ್ನು ಐ-ನೆಟ್ ಬ್ಯಾಂಕಿಂಗ್, ನೆಫ್ಟ್ / ಆರ್ಟಿಜಿಎಸ್, ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್, ನಗದು ಮತ್ತು ಹೆಚ್ಚಿನ ವಿಧಾನಗಳಿಂದ ರೀಚಾರ್ಜ್ ಮಾಡಬಹುದು. ಯುಪಿಐ ಮೂಲಕ ರೀಚಾರ್ಜ್ ಮಾಡಲು, ಯುಪಿಐ ಐಡಿ netc.vrn@idbi ಅನ್ನು ಬಳಸಬಹುದು. ಇನ್ನು ಐಡಿಬಿಐ ಫಾಸ್ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಐಡಿಬಿಐ ಫಾಸ್ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವುದು ಹೇಗೆ?
ಹಂತ 1: ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ನೊಂದಿಗೆ www.idbibank.in/fastag ಅನ್ನು ಲಾಗಿನ್ ಮಾಡಿ.
ಹಂತ 2: ರೀಚಾರ್ಜ್ ಖಾತೆಗಾಗಿ ಪಾವತಿಗಳಿಗೆ ಹೋಗಿ.
ಹಂತ 3: ಟ್ಯಾಗ್ / ಸಿಯುಜಿ ವ್ಯಾಲೆಟ್ ರೀಚಾರ್ಜ್ ಆಯ್ಕೆಮಾಡಿ ಮತ್ತು ನಿಮ್ಮ ಆದ್ಯತೆಗೆ ಅನುಗುಣವಾಗಿ ಮಾಡಿದ ಪಾವತಿಯನ್ನು ಆರಿಸಿ.
ಹಂತ 4: ಲಭ್ಯವಿರುವ ಮೇಲಿನ ಆಯ್ಕೆಗಳಲ್ಲಿ ಒಂದನ್ನು ಆರಿಸಿ.
ಹಂತ 5: ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ ಮತ್ತು ಪಾವತಿ ಮಾಡಿ.

ಇನ್ನು ನೀವು ನಿಮ್ಮ ಐಡಿಬಿಐ ಫಾಸ್ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವ ಮೊದಲು, ಶುಲ್ಕಗಳು ಮತ್ತು ತೆರಿಗೆಗಳು ಅನ್ವಯವಾಗುತ್ತವೆ ಎಂದು ನೀವು ತಿಳಿದುಕೊಳ್ಳಬೇಕು. ಆನ್‌ಲೈನ್ ರೀಚಾರ್ಜ್‌ಗಳಿಗೂ ಅನುಕೂಲಕರ ಶುಲ್ಕ ಅನ್ವಯವಾಗುತ್ತದೆ. ವಾಹನ ವರ್ಗದ ಪ್ರಕಾರ ಠೇವಣಿ ದರಗಳು ಅನ್ವಯವಾಗುತ್ತವೆ ಮತ್ತು ನೀವು ಫಾಸ್ಟ್ಯಾಗ್ ಖಾತೆಯನ್ನು ಮುಚ್ಚಿದಾಗ ಅದನ್ನು ಮರುಪಾವತಿಸಲಾಗುತ್ತದೆ.
This News Article is a Copy of GIZBOT
11-12-25 12:44 pm
HK News Desk
ಬೆಂಗಳೂರು ದೇವನಹಳ್ಳಿ ಬಳಿ ಭೀಕರ ಅಪಘಾತ ; ಡಿವೈಡರ್ ಹ...
11-12-25 12:14 pm
Transport Minister Ramalinga Reddy: ಆರ್ಟಿಒ...
10-12-25 09:40 pm
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
10-12-25 11:13 pm
HK News Desk
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
10-12-25 11:04 pm
Mangalore Correspondent
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm