ಬ್ರೇಕಿಂಗ್ ನ್ಯೂಸ್
21-02-21 03:10 pm Source: GIZBOT Mutthuraju H M ಡಿಜಿಟಲ್ ಟೆಕ್
ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳು ಜನಪ್ರಿಯತೆ ಪಡೆದುಕೊಂಡ ಪರಿಣಾಮ ಫೇಸ್‌ಬುಕ್ ಕೂಡ ಪೇಸ್‌ಬುಕ್ ರೂಮ್ಸ್ ಎನ್ನುವ ಫೀಚರ್ಸ್ ಪರಿಚಯಿಸಿತ್ತು. ಈ ರೂಮ್ಸ್ ಅಪ್ಲಿಕೇಶನ್ ಬಳಸಿಕೊಂಡು ಮೀಟಿಂಗ್ ಅನ್ನು ನಡೆಸಬಹುದಾಗಿದೆ. ಅದರಲ್ಲೂ ಕೊರೊನಾ ವೈರಸ್‌ನ ಹಾವಳಿ ಶುರುವಾದ ನಂತರ ಹೆಚ್ಚಿನ ಜನರು ಮನೆಯಿಂದಲೇ ಕಾರ್ಯನಿರ್ವಹಿಸಲು ಶುರುಮಾಡಿದ ಪರಿಣಾಮ ವರ್ಚುವಲ್ ಮಿಟಿಂಗ್‌ಗಳಿಗಾಗಿ ವಿಡಿಯೋ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಸಂಸ್ಥೆಗಳು ಹೊಸ ಮಾದರಿಯ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳನ್ನು ಪರಿಚಯಿಸಿದ್ದೂ ನಿಮಗೆಲ್ಲಾ ತಿಳಿದೆ ಇದೆ.
ಹೌದು, ಆನ್‌ಲೈನ್ ಕ್ಲಾಸ್, ಆನ್‌ಲೈನ್ ಮಿಟಿಂಗ್ ಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ಅಪ್ಲಿಕೇಶನ್‌ಗಳು ಸಾಕಷ್ಟು ಉಪಯುಕ್ತವಾಗಿವೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಕೂಡ ರೂಮ್ಸ್ ಎನ್ನುವ ವಿಡಿಯೋ ಕಾನ್ಫರೆನ್ಸಿಂಗ್ ಫೀಚರ್ಸ್ ಅನ್ನು ಪರಿಚಯಿಸಿದೆ. ಇದನ್ನು ಬಳಸಿಕೊಂಡು ವರ್ಚುವಲ್ ಮೀಟಿಂಗ್, ವಿಡಿಯೋ ಕಾಲ್ ಮಾಡುವುದಕ್ಕೆ ಅನುಮತಿಸುತ್ತದೆ. ಸದ್ಯ ಈ ಫೀಚರ್ಸ್ ಅನ್ನು ಫೇಸ್‌ಬುಕ್‌ನಲ್ಲಿ ಎಲ್ಲರೂ ಬಳಸಬಹುದಾಗಿದೆ. ಆದರೆ ಇದನ್ನು ಫೇಸ್‌ಬುಕ್ ಮೆಸೇಂಜರ್‌ನಲ್ಲಿಯೂ ಸಹ ರೂಮ್ಸ್‌ಗಳನ್ನು ಕ್ರಿಯೆಟ್ ಮಾಡಬಹುದಾಗಿದೆ.
ಫೇಸ್‌ಬುಕ್ ರೂಮ್ಸ್‌ಗಳನ್ನು ಮೆಸೆಂಜರ್‌ನಲ್ಲಿಯೂ ಸಹ ಕ್ರಿಯೆಟ್ ಮಾಡಬಹುದಾಗಿದೆ. ನಿಮ್ಮ ಸಂಪರ್ಕಗಳಿಗೆ ವೀಡಿಯೊ ಕರೆಗಳನ್ನು ಮಾಡಲು ಮೆಸೆಂಜರ್ ನಲ್ಲಿ ಪ್ರಯತ್ನಿಸಿದ್ದರೆ, ನೀವು ಜೂಮ್ ಸಭೆಗಳಿಗೆ ಹೇಗೆ ಹಾಜರಾಗುತ್ತೀರೋ ಹಾಗೆಯೇ, ಫೇಸ್‌ಬುಕ್ ಮೆಸೆಂಜರ್ ನಿಮಗೆ ಕೊಠಡಿಗಳನ್ನು ಸೇರಲು ಮತ್ತು ಗುಂಪು ವೀಡಿಯೊ ಕರೆಗಳನ್ನು ಮಾಡಲು ಸಹ ಅನುಮತಿಸುತ್ತದೆ. ಸದ್ಯ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ರೂಮ್ಸ್‌ಗಳನ್ನು ರಚಿಸುವುದು ಸುಲಭವಾಗಿದೆ. ಅದು ಹೇಗೆ ಈ ಕೆಳಿನ ಹಂತಗಳಲ್ಲಿ ತಿಳಿಯಿರಿ.
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ರೂಮ್ಸ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ ?
ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಮೆಸೆಂಜರ್ ಅನ್ನು ಪ್ರಾರಂಭಿಸಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ. ನಿಮ್ಮನ್ನು ಪರದೆಯ ಮೇಲಿನ ಚಾಟ್‌ಗಳಿಗೆ ಕರೆದೊಯ್ಯಲಾಗುತ್ತದೆ.
ಹಂತ 2: ಮೇಲಿನ ಎಡಭಾಗದಲ್ಲಿ, ಹುಡುಕಾಟ ಪಟ್ಟಿಯ ಕೆಳಗೆ, ರೂಮ್ಸ್ ಕ್ರಿಯೆಟ್ ಟ್ಯಾಪ್ ಮಾಡಿ. ಈ ಆಯ್ಕೆಯನ್ನು ಫೇಸ್‌ಬುಕ್ ಅಪ್ಲಿಕೇಶನ್‌ನಿಂದಲೂ ಆಯ್ಕೆ ಮಾಡಬಹುದು, ಮುಖಪುಟದಲ್ಲಿ ರೂಮ್ಸ್ ಕ್ರಿಯೆಟ್ ಅನ್ನು ನೋಡಿ. ನೀವು ಜನರ ಪಟ್ಟಿಯನ್ನು ನೋಡಿದರೆ,
ಹಂತ 3: ಒಮ್ಮೆ ನೀವು ರೂಮ್ ಕ್ರಿಯೆಟ್ ಆಯ್ಕೆಯನ್ನು ಟ್ಯಾಪ್ ಮಾಡಿದರೆ, ರೂಮ್ಸ್ ಅನ್ನು ರಚಿಸಲು ಕೆಲವು ಆಯ್ಕೆಗಳನ್ನು ನೀವು ನೋಡುತ್ತೀರಿ. Who can join automatically? ಎಂಬುದನ್ನು ಟ್ಯಾಪ್ ಮಾಡಿ? ಮತ್ತುAnyone with the link or Only invited friends ಬಯಸಿದ ಆಯ್ಕೆಯನ್ನು ಆರಿಸಿ. ಲಿಂಕ್ ಹೊಂದಿರುವ ಯಾರಾದರೂ ಸೇರಬಹುದು ಮತ್ತು ನಿಮ್ಮ ಕೊಠಡಿಯನ್ನು ಇತರರೊಂದಿಗೆ ಹಂಚಿಕೊಳ್ಳಬಹುದು.
ಹಂತ 4: ಸಂಪರ್ಕ ಹೊಂದಿದವರಿಗೆ ವೀಡಿಯೊ ಕರೆಯನ್ನು ಪ್ರಾರಂಭಿಸಲು ಈಗ ಜಾಯಿನ್ ರೂಮ್ ಅನ್ನು ಒತ್ತಿರಿ.
This News Article is a Copy of GIZBOT
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm