ಬ್ರೇಕಿಂಗ್ ನ್ಯೂಸ್
28-03-21 03:49 pm Source: GIZBOT Mutthuraju H M ಡಿಜಿಟಲ್ ಟೆಕ್
ಸದ್ಯ ಶಾರ್ಟ್ ವಿಡಿಯೊ ಅಪ್ಲಿಕೇಶನ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಹುತೇಕ ಬಳಕೆದಾರರು ಕಿರು ವಿಡಿಯೋ ಮಾಡಿ ಜನಪ್ರಿಯ ಆಪ್ಸ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದು ಅನೇಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎನ್ನಬಹುದಾಗಿದೆ. ಆದರೆ ಶಾರ್ಟ್ ವಿಡಿಯೊ ಆಪ್‌ಗಳಿಗೆ ವಿಡಿಯೊ ಅಪ್‌ಲೋಡ್ ಮಾಡುವ ಮೊದಲು ಬಳಕೆದಾರರು ರೆಕಾರ್ಡ್ ಮಾಡಿರುವ ವಿಡಿಯೊ ಎಡಿಟ್ ಮಾಡುತ್ತಾರೆ. ಹೀಗೆ ಎಡಿಟ್ ಮಾಡಲು ಸಾಕಷ್ಟು ಆಪ್ಸ್ ಸಹ ಲಭ್ಯ ಇವೆ. ಆದರೆ ಕೆಲವು ಆಪ್ಸ್‌ಗಳು ಟ್ರೆಂಡಿ ಆಗಿದೆ.
ಹೌದು, ಶಾರ್ಟ್ ವಿಡಿಯೊ ಆಪ್ ಗಳು ಬಳಕೆದಾರರಲ್ಲಿ ಶಾರ್ಟ್ ವಿಡಿಯೊ ಕ್ರಿಯೆಟ್ ಮಾಡಲು ಪ್ರೇರೆಪಿಸುವಂತಿದ್ದು, ಈಗಾಗಲೇ ಅನೇಕರು ಶಾರ್ಟ್ ವಿಡಿಯೋ ಆಪ್‌ಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಬಹುತೇಕರು ನೇರವಾಗಿ ಆಪ್‌ನಲ್ಲಿಯೇ ವಿಡಿಯೊ ಮೇಕಿಂಗ್ ಮಾಡಿ ಅಪ್‌ಲೋಡ್ ಮಾಡುತ್ತಾರೆ. ಆದರೆ ಇನ್ನು ಕೆಲವರು ವಿಡಿಯೊಗಳನ್ನು ಕ್ರಿಯೆಟ್ ಮಾಡಿ ನಂತರ ವಿಡಿಯೊ ಎಡಿಟಿಂಗ್ ಆಪ್ಸ್‌ಗಳಲ್ಲಿ ಎಡಿಟ್ ಮಾಡಿ ಅಪ್‌ಲೋಡ್ ಮಾಡುತ್ತಾರೆ. ಶಾರ್ಟ್ ವಿಡಿಯೋ ಮಾಡುವವರು ವಿಡಿಯೊ ಎಡಿಟ್ ಆಪ್ಸ್‌ಗಳನ್ನು ಬಳಕೆ ಮಾಡಬಹುದು.
TIMBRE ಆಪ್
ಈ ಟಿಂಬ್ರ ವಿಡಿಯೊ ಎಡಿಟಿಂಗ್ ಆಪ್ ಸಹ ಹಲವು ಅಗತ್ಯ ಸೌಲಬ್ಯಗಳನ್ನು ಒಳಗೊಂಡಿದ್ದು, ವಿಡಿಯೊ ಮರ್ಜ್, ಕಟ್, ಕನವರ್ಟ್, ಸ್ಪ್ಲಿಟ್, ವಿಡಿಯೊ ಸ್ಪೀಡ್, ರಿವರ್ಸ್ ಆಯ್ಕೆಗಳು ಇವೆ. ಜೊತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿದ್ದು, ವಿಡಿಯೊಗೆ ಮ್ಯೂಸಿಕ್ ಸೇರಿಸುವ ಆಯ್ಕೆ ನೀಡಲಾಗಿದೆ. ಹಾಗೆಯೇ ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಸ್ಟಿಕ್ಕರ್ಸ್, ಜಿಐಎಫ್, ಸೇರಿದಂತೆ ಟೆಕ್ಟ್ಸ್ ಸೌಲಭ್ಯ ಇದೆ.
InShot ಆಪ್
ಇನ್‌ಶಾಟ್ ಆಪ್ ಜನಪ್ರಿಯತೆ ಪಡೆದ ವಿಡಿಯೊ ಅಪ್ಲಿಕೇಶನ್ ಆಗಿದ್ದು, ಹಲವು ಆಯ್ಕೆಗಳ ಸಿಗಲಿವೆ. ಈ ಆಪ್‌ನಲ್ಲಿ ಅಗತ್ಯ ಬೇಸಿಕ್ ಎಡಿಟಿಂಗ್ ಆಯ್ಕೆಗಳೊಂದಿಗೆ ವಿಡಿಯೊ ವೇಗದ ಏರಿಳಿತ ಮಾಡುವ ಆಯ್ಕೆ, ಮ್ಯೂಸಿಕ್ ಸೇರಿಸುವ ಆಯ್ಕೆ ನೀಡಲಾಗಿದೆ. ಹಾಗೆಯೇ ಸಾಫ್ಟ್ ಟ್ಯೂನ್, ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಸ್ಟಿಕ್ಕರ್ಸ್, ಕ್ರೇಜಿ ಮೀರರ್, ಸೇರಿದಂತೆ ಟೆಕ್ಟ್ಸ್ ಸೇರಿಸಬಹುದಾಗಿದೆ.
VIZMATO ಆಪ್
ವಿಜ್‌ಮೇಟೊ ವಿಡಿಯೊ ಆಪ್ ಸಹ ಉತ್ತಮವಾಗಿದ್ದು, ವಿಡಿಯೊಗಳನ್ನು ಟ್ರಿಮ್ ಕಟ್ ಮಾಡುವುದರ ಜೊತೆಗೆ ಇನ್ನೊಂದು ವಿಡಿಯೊ ಸೇರಿಸಬಹುದಾದ ಆಯ್ಕೆ ಇದೆ. ವಿಡಿಯೊ ಸೇರಿಸಿದಮೇಲೆ ಮತ್ತೆ ಎಡಿಟ್ ಮಾಡಬಹುದಾಗಿದೆ. ಹಾಗೆಯೇ ಫಿಲ್ಟರ್, ಸ್ಲೈಡ್‌ಶೋ, ಸೌಂಡ್, ವಿಡಿಯೊ ಸ್ಪೀಡ್ ಸೇರಿದಂತೆ ಅಗತ್ಯ ಇರುವ ಬೇಸಿಕ್ ಸೌಲಭ್ಯಗಳು ಲಭ್ಯ ಇವೆ.
FUNIMATE ಆಪ್
ಟಿಕ್‌ಟಾಕ್ ವಿಡಿಯೊ ಎಡಿಟ್‌ಗೆ ಫ್ಯೂನಿಮೇಟ್ ಕೂಲ್ ಆಪ್ ಎಂದೆನ್ನಬಹುದಾಗಿದೆ. ಈ ಆಪ್‌ನಲ್ಲಿ ಸಾಕಷ್ಟು ಎಫೆಕ್ಟ್ ಮತ್ತು ಮ್ಯೂಸಿಕ್ ಲಭ್ಯವಾಗಲಿವೆ. ಇವುಗಳೊಂದಿಗೆ ಆಕರ್ಷಕ ಸ್ಟಿಕರ್ಸ್‌ಗಳಿವೆ. ಉಳಿದಂತೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿದ್ದು, ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಜಿಐಎಫ್, ಹಲವು ಎಫೆಕ್ಟ್‌ಗಳ ಕಲೆಕ್ಷನ್‌ಗಳಿವೆ.
ಇತರೆ ಜನಪ್ರಿಯ ಆಪ್ಸ್
ಸದ್ಯ ವಿಡಿಯೊ ಎಡಿಟ್ ಮಾಡಲು ಸಾಕಷ್ಟು ಆಪ್ಸ್‌ಗಳು ಲಭ್ಯ ಇವೆ. ಕೆಲವಯ ಆಪ್ಸ್‌ಗಳು ಹೆಚ್ಚು ಸೂಕ್ತ ಅನಿಸುತ್ತವೆ ಅವುಗಳ ಬಗ್ಗೆ ತಿಳಿಸಿದ್ದೆವೆ. ಅವುಗಳನ್ನು ಹೊರತುಪಡಿಸಿ ವಿಡಿಯೋಶಾಪ್-Videoshop, ಮ್ಯಾಜಿಸ್ಟೊ-Magisto, ವಿಡಿಯೋ ಶೋ-VideoShow, ವಿವಾ ವಿಡಿಯೋ-VivaVideo, ಕ್ವಿಕ್-Quik, ಬೀಕಟ್-BeeCut ನಂತಹ ವಿಡಿಯೊ ಎಡಿಟಿಂಗ್ ಆಪ್ಸ್‌ಗಳು ಉತ್ತಮ ಆಯ್ಕೆ ಆಗಿದೆ.
This News Article Is A Copy Of GIZBOT
30-12-24 01:13 pm
HK News Desk
Bangalore Police, New Year 2024 Rules; ಹೊಸ ವರ...
29-12-24 06:29 pm
Mandya Police Assult, Slap, Video: ತನ್ನ ಕಪಾಳಕ...
29-12-24 12:31 pm
SIT, Munirathna, rape, honeytrap, AIDS: ಶಾಸಕ...
29-12-24 11:51 am
Grace Ministry Bangalore Christmas 2024 : ಗ್ರ...
28-12-24 06:57 pm
30-12-24 11:14 pm
HK News Desk
Maha Kumbh Mela 2025: 12 ವರ್ಷಗಳ ಬಳಿಕ ಉತ್ತರ ಪ್...
29-12-24 10:23 pm
South Korea Flight Crash: ದಕ್ಷಿಣ ಕೊರಿಯಾದಲ್ಲಿ...
29-12-24 02:35 pm
ಮನಮೋಹನ್ ಸಿಂಗ್ ಸ್ಮಾರಕದ ಹೆಸರಲ್ಲಿ ವಿವಾದ ; ನರಸಿಂಹ...
28-12-24 09:46 pm
Manmohan Singh Wiki Kannada; ಪಾಕ್ನಲ್ಲಿ ಜನನ,...
27-12-24 10:38 am
30-12-24 10:45 pm
Mangalore Correspondent
M Frdinds, Wenlock hospital, Mangalore: ವೆನ್ಲ...
30-12-24 10:29 pm
Mangalore New Year Celebration 2025, Rules, P...
30-12-24 08:19 pm
‘ಹ್ಯಾಪಿ ನ್ಯೂ ಇಯರ್ ’ ಶುಭ ಹಾರೈಕೆ ಸಂದೇಶದಲ್ಲೇ ಸೈಬ...
30-12-24 03:41 pm
Anil Lobo Macc Bank, Suicide, UT Khader : ಎಂಸ...
29-12-24 11:08 pm
29-12-24 10:50 pm
Mangalore Correspondent
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm