ಬ್ರೇಕಿಂಗ್ ನ್ಯೂಸ್
07-04-21 06:42 pm Source: Gizbot Bureau ಡಿಜಿಟಲ್ ಟೆಕ್
ಸೆಕ್ಯುರಿಟಿ ಕ್ಯಾಮರಾಗಳು ಇದೀಗ ಸಾಂಪ್ರದಾಯಿಕ ವಸ್ತುಗಳಾಗಿ ಕೇವಲ ಆಫೀಸಿಗೆ ಮಾತ್ರವೇ ಎಂಬಂತಾಗಿ ಉಳಿದಿಲ್ಲ.ಇದೀಗ ಸೆಕ್ಯುರಿಟಿ ಕ್ಯಾಮರಾಗಳು ಪ್ರತಿ ಮನೆಯ ಅಗತ್ಯತೆಯೇ ಆಗಿದೆ.
ಇತ್ತೀಚೆಗೆ ಲಭ್ಯವಾಗುತ್ತಿರುವ ಸೆಕ್ಯುರಿಟಿ ಕ್ಯಾಮರಾಗಳಲ್ಲಿ ಹೊಸ ಮತ್ತು ನೂತನವಾಗಿರುವ ಹಲವು ವೈಶಿಷ್ಟ್ಯತೆಗಳಿರುತ್ತದೆ. ಹೆಚ್ಚಿನ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಇವು ಕೆಲಸ ಮಾಡುತ್ತದೆ. ನಾವಿಲ್ಲಿ ಅಂತಹ ಕೆಲವು ಪೋರ್ಟೇಬಲ್ ಸೆಕ್ಯುರಿಟಿ ಕ್ಯಾಮರಾಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ.
ಈ ಸೆಕ್ಯುರಿಟಿ ಕ್ಯಾಮರಾಗಳು ಡುಯಲ್ ಮೋಟರ್ ಹೆಡ್ ಗಳನ್ನು ಹೊಂದಿದ್ದು ಕ್ಯಾಮರಾಗಳು ತಿರುಗುವುದಕ್ಕೆ ಮತ್ತು 360 ಡಿಗ್ರಿ ಅಡ್ಡ ಮತ್ತು 96 ಡಿಗ್ರಿ ಲಂಬವಾಗಿ ವೀಕ್ಷಿಸುವುದಕ್ಕೆ ನೆರವಾಗುತ್ತದೆ. ಇಲ್ಲಿ ನಾವು ಪಟ್ಟಿ ಮಾಡಿರುವ ಕೆಲವು ಸೆಕ್ಯುರಿಟಿ ಕ್ಯಾಮರಾಗಳು ನೂತನ ಫೀಚರ್ ಗಳನ್ನು ಹೊಂದಿದ್ದು ಪ್ರಮುಖವಾಗಿ ಹೈ-ಸೆಕ್ಯುರಿಟಿ ಎನ್ಕ್ರಿಪ್ಶನ್, ಸೂಪರ್ ಇಮೇಜ್ ಕ್ವಾಲಿಟಿ, ಡಿಜಿಟಲ್ ಝೂಮ್ ಮತ್ತು ರಿಮೋಟ್ ಆಕ್ಸಿಸ್ ಸೌಲಭ್ಯವನ್ನು ಹೊಂದಿದೆ. ಇವುಗಳು ಸುಲಭವಾಗಿ ಇನ್ಸ್ಟಾಲ್ ಮಾಡುವುದಕ್ಕೂ ಕೂಡ ನೆರವು ನೀಡುತ್ತವೆ.
ಈ ಹೈ ಡೆಫಿನೇಷನ್ ವೈಫೈ ವೀಡಿಯೋ ಕ್ಯಾಮರಾಗಳು ನಿಮ್ಮ ಮನೆಯಿಂದ ಇತರೆ ಯಾವುದೇ ಪ್ರದೇಶಕ್ಕೆ ಹೋಗುವಾಗಲೂ ಕೂಡ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ನೀವು ಮನೆಯಲ್ಲಿ ಇದ್ದಾಗ ಹೆಚ್ಚಿನ ಭದ್ರತೆಯನ್ನು ಇವು ನಿಮ್ಮ ಮನೆಗೆ ಒದಗಿಸುತ್ತದೆ. ಇವುಗಳು ಕ್ರಿಸ್ಟಲ್ ಕ್ಲಿಯರ್ ಪಿಕ್ಚರ್ ಕ್ವಾಲಿಟಿಯನ್ನು ನೀಡುತ್ತದೆ. ಈ ಸೆಕ್ಯುರಿಟಿ ಕ್ಯಾಮರಾಗಳಲ್ಲಿ ನೀವು HD 720P ಯನ್ನು 30 ಫ್ರೇಮ್ಸ್ ಪ್ರತಿ ಸೆಕೆಂಡಿಗೆ ಕ್ಲಿಕ್ಕಿಸಿಕೊಳ್ಳಬಹುದು. ಇವು ಬಿಲ್ಟ್ ಇನ್ ಮೈಕ್ರೋಫೋನ್ ಮತ್ತು ಸ್ಪೀಕರ್ ಗಳನ್ನು ಹೊಂದಿದ್ದು ಕ್ಯಾಮರಾ ಹಾಕಿರುವ ಜಾಗದಲ್ಲಿನ ಶಬ್ದ ಮತ್ತು ಮಾತುಕತೆಗಳನ್ನು ಆಲಿಸುವುದಕ್ಕೂ ಕೂಡ ಸಾಧ್ಯವಾಗುತ್ತದೆ.
ಎಂಐ 360° 1080p ವೈಫೈ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 2,698
ಪ್ರಮುಖ ವೈಶಿಷ್ಟ್ಯತೆಗಳು
• ಎಐ ಮೋಷನ್ ಡಿಟೆಕ್ಷನ್ ಅಲರ್ಟ್. ಕ್ಯಾಮರಾ ಆಂಗಲ್ 110 ಡಿಗ್ರಿ ಮತ್ತು ಕನೆಕ್ಟಿವಿಟಿ ವೈ-ಫೈ IEEE 802.11 b/g/n 2.4 GHz ನಷ್ಟಿದೆ.
• ಇನ್ ಪುಟ್ ಪವರ್: 5V ; ಕೆಲಸದ ಟೆಂಪರೇಚರ್: -10℃ ~ 50℃; ಬೆಂಬಲ ನೀಡುವ ಡಿವೈಸ್ ಗಳು : ಆಂಡ್ರಾಯ್ಡ್ 4.4 ಮತ್ತು ಮೇಲಿನ ವರ್ಷನ್ ಅಥವಾ IOS 9.0 ಮೇಲಿನ ವರ್ಷನ್ ಗಳಲ್ಲಿ ಕಾರ್ಯ
• ಇನ್ಫ್ರಾರೆಡ್ ನೈಟ್ ವರ್ಷನ್
• ಟಾಕ್ ಬ್ಯಾಕ್ ಫೀಚರ್
• ಎಂಐ ಕ್ಯಾಮರಾ 360° ಯಲ್ಲಿ ಪರಿಪೂರ್ಣವಾಗಿರುವ ಪಿಕ್ಚರ್ ಕ್ವಾಲಿಟಿಯನ್ನು ನೀಡುತ್ತದೆ. ಎಂಐ ಕ್ಯಾಮರಾಗಳು 20 ಮೆಗಾಪಿಕ್ಸಲ್, , 1080p ರೆಸಲ್ಯೂಷನ್ ಮತ್ತು ವೈಡ್ಆಂಗಲ್ ಡೈನಾಮಿಕ್ ರೇಂಜ್, ಇದೆ. ಹಿಂಭಾಗದ ದೂರದ ಚಿತ್ರಗಳು ಕೂಡ ಸ್ಪಷ್ಟವಾಗಿ ವಿವರವಾಗಿ ಲಭ್ಯವಾಗುತ್ತದೆ. • ಇನ್ವರ್ಟೆಡ್ ಇನ್ಸ್ಟಾಲೇಷನ್ ಕೂಡ ಅವಕಾಶ (ಐಚ್ಛಿಕ) • 64ಜಿಬಿ SD ಕಾರ್ಡ್ ಸ್ಟೋರೇಜ್.
ಡಿ-ಲಿಂಕ್ ಸೆಕ್ಯುರಿಟಿ ಕ್ಯಾಮರಾ
MRP: Rs. 2,430
ಪ್ರಮುಖ ವೈಶಿಷ್ಟ್ಯತೆಗಳು
• ನಿಮ್ಮ ಡಾಟಾವನ್ನು ಮೈಡ್ ಲಿಂಕ್ ಕ್ಲೌಡ್ ನಲ್ಲಿ ಸೇವ್ ಮಾಡಿ. ( ಅನಿಯಮಿತ ಕೊನೆಯ 24 ಘಂಟೆಗಳ ಕ್ಲೌಡ್ ಸ್ಟೋರೇಜ್ ಉಚಿತ, SD ಕಾರ್ಡ್ ನ ಅಗತ್ಯವಿಲ್ಲ)
• ಫೋಟೇಜ್ ನ್ನು ಯಾವುದೇ ಸಮಯದಲ್ಲಾದರೂ, ಯಾವುದೇ ಪ್ರದೇಶದಲ್ಲಿದ್ದರೂ ಕೂಡ ಆಕ್ಸಿಸ್ ಮಾಡುವುದಕ್ಕೆ ಅವಕಾಶವಿದೆ.
• ಆಲ್ಟ್ರಾ ಸಣ್ಣ ಗಾತ್ರ- ಸಣ್ಣ ಗಾತ್ರದ ಕ್ಯಾಮರಾವಾಗಿರುವುದರಿಂದಾಗಿ ನೀವು ಕ್ಯಾಮರಾವನ್ನು ಎಲ್ಲಿ ಇಟ್ಟಿದ್ದೀರಾ ಎಂಬುದನ್ನು ಗೊತ್ತಾಗದಂತೆ ಫಿಟ್ ಮಾಡಬಹುದು.
• ಹೈ ಡೆಫಿನೇಷನ್ ಕ್ಲಾರಿಟಿ - 720p HD ಕ್ವಾಲಿಟಿ ವೀಡಿಯೋ
• ರಾತ್ರಿ ಮತ್ತು ಹಗಲು ಎರಡೂ ಸಮಯದಲ್ಲೂ ಕಾರ್ಯ - ರಾತ್ರಿಯ ವೇಳೆ ಅಂದರೆ ಕತ್ತಲಲ್ಲಿ 5 ಮೀಟರ್ ವರೆಗೆ ನೋಡಬಹುದು
• ಶಬ್ದ ಮತ್ತು ಮೋಷನ್ ಡಿಟೆಕ್ಷನ್ - ಇನ್ಸ್ಟೆಂಟ್ ಅಲರ್ಟ್ ನೋಟಿಫಿಕೇಷನ್ • ವೀಡಿಯೋ ರೆಕಾರ್ಡಿಂಗ್ - ನಿಮ್ಮ ಮೊಬೈಲ್ ಡಿವೈಸ್ ನಲ್ಲಿ ಲೈವ್ ವೀಡಿಯೋ ಕ್ಲಿಪ್ ಗಳನ್ನು ಸೇವ್ ಮಾಡಿಕೊಳ್ಳಿ
ಗೋಡ್ರೇಜ್ ಏಸ್ 720p HD ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 2,100
ಪ್ರಮುಖ ವೈಶಿಷ್ಟ್ಯತೆಗಳು
• ಒಳಾಂಗಣ ಮತ್ತು ಹೊರಾಂಗಣ ಎರಡೂ ಬಳಕೆಗೆ ಯೋಗ್ಯ
• ನೈಟ್ ವಿಷನ್ ಫೀಚರ್
• ಚಾನಲ್ ಗಳ ಸಂಖ್ಯೆ: 0
• 720P HD ವಿಷನ್
• ಇನ್ಫ್ರಾರೆಡ್ ನೈಟ್ ವಿಷನ್
• ಮೋಷನ್ ಡಿಟೆಕ್ಷನ್
• 2 ಮಾರ್ಗದ ಆಡಿಯೋಗೆ ಅವಕಾಶ
ಮೊಟೋರೊಲಾ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮರಾ
MRP: Rs. 4,490
ಪ್ರಮುಖ ವೈಶಿಷ್ಟ್ಯತೆಗಳು
• ರಿಮೋಟ್ HD ಗುಣಮಟ್ಟದ ವೀಡಿಯೋ ಸ್ಟ್ರೀಮಿಂಗ್ (ವೈ-ಫೈ ಮೂಲಕ ಇಂಟರ್ನೆಟ್ ಆಕ್ಸಿಸ್ ನ್ನು ಬಯಸುತ್ತದೆ.)
• ಮೋಟೊರೊಲಾ ಮಾನಿಟರ್ ಆಪ್ ಗೆ ಉಚಿತ ಹಬ್ಬಲ್
• ಮೋಷನ್-ಟ್ರಿಗ್ಗರ್ಡ್ ಸ್ನ್ಯಾಪ್ ಶಾಟ್
• ಗರಿಷ್ಟ- ಸೂಕ್ಷ್ಮತೆ ಹೊಂದಿರುವ ಮೈಕ್ರೋಫೋನ್ ಜೊತೆಗೆ ಟು-ವೇ ಸಂವಹನಕ್ಕೆ ಅವಕಾಶ
• ರೂಮ್ ಟೆಂಪರೇಚರ್ ಡಿಸ್ಪ್ಲೇ ಮತ್ತು ಇನ್ಫ್ರಾರೆಡ್ ನೈಟ್ ವಿಷನ್
This News Article Is A Copy Of GIZBOT BUREAU
05-02-25 06:39 pm
HK News Desk
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
05-02-25 10:51 pm
Mangalore Correspondent
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
Mangalore gun misfire, congress, chittaranjan...
04-02-25 07:47 pm
05-02-25 04:29 pm
Bangalore Correspondent
Ullal Police Station, Mangalore, Crime: ಪಿಎಸ್...
03-02-25 05:46 pm
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am