ಬ್ರೇಕಿಂಗ್ ನ್ಯೂಸ್
16-04-21 06:53 pm Source: Gizbot Bureau ಡಿಜಿಟಲ್ ಟೆಕ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಅಂಡ್ರಾಯ್ಡ್ 12 ಆವೃತ್ತಿಯ ಫೀಚರ್ಸ್ ಬಗ್ಗೆ ಈಗಾಗಲೇ ಗ್ರಾಹಕರಿಗೆ ಕುತೂಹಲ ಹೆಚ್ಚಾಗಿದೆ. ಗೂಗಲ್ ಕಂಪನಿಯ IO ಡೆವಲಪರ್ ಕಾನ್ಫರೆನ್ಸ್ ಇದೇ ಮೇ 18 ರಿಂದ ಮೇ 20 ರವರೆಗೆ ನಡೆಯಲಿದೆ. ಸಂಸ್ಥೆಯ ಈ IO ಕಾನ್ಫರೆನ್ಸ್ ವೇಳೆ ಗೂಗಲ್ ತನ್ನ ಬಹುನಿರೀಕ್ಷಿತ ಆಂಡ್ರಾಯ್ಡ್ 12 ಓಎಸ್ ಅನ್ನು ಅನಾವರಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಓಎಸ್ ಸದ್ಯದ್ ಆಂಡ್ರಾಯ್ಡ್ 11 ಓಎಸ್ ಗಿಂತ ಸಾಕಷ್ಟು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.
ಹೌದು, ಗೂಗಲ್ ಸಂಸ್ಥೆಯು ತನ್ನ ನೂತನ ಆಂಡ್ರಾಯ್ಡ್ 12 ಓಎಸ್ ಅನ್ನು IO ಕಾನ್ಫರೆನ್ಸ್ ನಲ್ಲಿ ಅಅವರಣ ಮಾಡಲಿದೆ ಎನ್ನಲಾಗಿದೆ. ಇನ್ನು ಕೆಲವು ಆಯ್ದ ಗೂಗಲ್ ಪಿಕ್ಸಲ್ ಆವೃತ್ತಿಯ ಫೋನ್‌ಗಳಲ್ಲಿ ಪ್ರಾಯೋಗಿಕವಾಗಿ ಆಂಡ್ರಾಯ್ಡ್ 12 ಓಎಸ್ ಲಭ್ಯವಾಗಿದೆ. ಮೂರು ದಿನಗಳ ಸಮ್ಮೇಳನದಲ್ಲಿ ಹಲವಾರು ಕೀನೋಟ್ಸ್, ಕಾರ್ಯಾಗಾರಗಳು ಮತ್ತು ನನ್ನನ್ನು ಕೇಳಿ ಎನಿಥಿಂಗ್ ಸೆಷನ್ಸ್ (ಎಎಂಎ) ಗಳನ್ನು ಆಯೋಜಿಸಲಾಗುತ್ತದೆ. ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು, ನೀವು Google IO ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಗಾದರೇ ಆಂಡ್ರಾಯ್ಡ್ 12 ಓಎಸ್ ನಲ್ಲಿ ಯಾವೆಲ್ಲಾ ಹೊಸ ಫೀಚರ್ಸ್‌ಗಳು ಫೋನ್‌ಗೆ ಸೇರಲಿವೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.
JPEG ಗಿಂತ ಉತ್ತಮ ಪೋಟೊ ಸಪೋರ್ಟ್
ಆಂಡ್ರಾಯ್ಡ್ 12 ಓಎಸ್ AV1 ಇಮೇಜ್ ಫೈಲ್ ಫಾರ್ಮ್ಯಾಟ್ ಅನ್ನು ಬೆಂಬಲಿಸಲಿದೆ. ಇದರಲ್ಲಿ ಫೋಟೊಗಳು JPEG ಫಾರ್ಮೇಟ್‌ಗಿಂತ ಉತ್ತಮ ಗುಣಮಟ್ಟದಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.
ಅಧಿಕ ಡೇಟಾದ ಆಪ್ಸ್ ಭಾರವಲ್ಲ
ಆಂಡ್ರಾಯ್ಡ್ 12 ನಲ್ಲಿ ಅಧಿಕ ಡೇಟಾದ ಆಪ್ಸ್‌ಗಳು ಸುಗಮವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಇರಲಿದೆ. ಹೀಗಾಗಿ ಆಂಡ್ರಾಯ್ಡ್ 12 ಓಎಸ್‌ನಲ್ಲಿ ಅಧಿಕ ಡೇಟಾದ ಆಪ್ಸ್ ಭಾರವಲ್ಲ. ವಿಶೇಷವಾಗಿ ಸೋಶೀಯಲ್ ಮೀಡಿಯಾ ಆಪ್ಸ್ ಹಾಗೂ ಗೇಮಿಂಗ್ ಇತ್ಯಾದಿಗಳ ಬಳಕೆ ಸುಗಮವಾಗಿರಲಿದೆ.
ನೂತನ ಗೆಸ್ಚರ್ ಆಯ್ಕೆ
ಆಂಡ್ರಾಯ್ಡ್ 12 ಓಎಸ್‌ನಲ್ಲಿ ಹೊಸದಾಗಿ ಗೆಸ್ಚರ್‌ಗಳು ಸೇರ್ಪಡೆ ಆಗಲಿವೆ. ಹೊಸ ಓಎಸ್‌ನಲ್ಲಿ ವೀಡಿಯೊ ನೋಡುವಾಗ, ಪುಸ್ತಕ ಓದುವಾಗ ಅಥವಾ ಆಟವನ್ನು ಆಡುವಾಗ ಗೂಗಲ್ ಉತ್ತಮ ಗೆಸ್ಚರ್ ನ್ಯಾವಿಗೇಷನ್ ನೀಡುತ್ತದೆ.
ತ್ವರಿತ ಆಪರೇಟಿಂಗ್
ಆಂಡ್ರಾಯ್ಡ್ 12 ಓಎಸ್‌ನಲ್ಲಿ ನೋಟಿಫೀಕೇಶನ್ ಹಾಗೂ ಆಪ್‌ಗಳ ತೆರೆಯುವಿಕೆ ಕಾರ್ಯ ಹೆಚ್ಚು ತ್ವರಿತವಾಗಲಿವೆ. ಕಸ್ಟಮ್ ವಿಷಯ ಮತ್ತು ಐಕಾನ್‌ಗಳೊಂದಿಗೆ ಉತ್ತಮವಾಗಿ ಕಾಣುವಂತೆ ಗೂಗಲ್ ನೋಟಿಫೀಕೇಶನ್ ವಿನ್ಯಾಸಗಳನ್ನು ರಿಫ್ರೆಶ್ ಮಾಡುತ್ತಿದೆ. ಅಲ್ಲದೆ, ನೋಟಿಫೀಕೇಶನ್ ವೇಗವಾಗಿ ತೆರೆದುಕೊಳ್ಳುತ್ತವೆ.
ಹೈ ಕ್ವಾಲಿಟಿ ವಿಡಿಯೊ ಸಪೋರ್ಟ್
ಆಂಡ್ರಾಯ್ಡ್ 12 ಓಎಸ್ ಕಡಿಮೆ ಸ್ಟೋರೇಜ್‌ನಲ್ಲಿ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ನೀಡುವ ಅವಕಾಶ ಹೊಂದಿರಲಿದೆ. ಅದಕ್ಕಾಗಿ HEVC -ಕಾಂಪಿಟೇಬಲ್ ಮೀಡಿಯಾ ಟ್ರಾನ್ಸ್‌ಕೋಡಿಂಗ್ ಬೆಂಬಲವನ್ನು ಗೂಗಲ್ ಸೇರಿಸಲಿದೆ. ಈ HEVC ವೈಶಿಷ್ಟ್ಯದೊಂದಿಗೆ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ ಸ್ವಯಂಚಾಲಿತವಾಗಿ ಫೈಲ್ ಅನ್ನು AVC ಗೆ ಟ್ರಾನ್ಸ್‌ಕೋಡ್ ಮಾಡಬಹುದು. ಅಪ್ಲಿಕೇಶನ್‌ಗಳು ಉತ್ತಮ ವೀಡಿಯೊಗಳನ್ನು ಶೂಟ್ ಮಾಡುತ್ತದೆ ಮತ್ತು ಕಡಿಮೆ ಶೇಖರಣಾ ಸ್ಥಳವನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ನೀವು ಕಳುಹಿಸುವ ಯಾವುದೇ ಇಮೇಜ್ ಫೈಲ್ ಅನ್ನು ಸಂಪಾದಿಸಲು ಅಥವಾ ಟಿಪ್ಪಣಿ ಮಾಡಲು ಈ ವೈಶಿಷ್ಟ್ಯವು ಒದಗಿಸುತ್ತದೆ. ಇದು ಆಂಡ್ರಾಯ್ಡ್ 12 ಶೇರ್ ಶೀಟ್‌ನಲ್ಲಿ ಲಭ್ಯವಿದೆ ಮತ್ತು ಸ್ಕ್ರೀನ್‌ಶಾಟ್ ಎಡಿಟರ್‌ನಂತೆಯೇ ಮಾರ್ಕ್ಅಪ್ ಆಯ್ಕೆಗಳನ್ನು ತರುತ್ತದೆ. ದಿನ / ರಾತ್ರಿ ಥೀಮ್‌ಗೆ ಹೊಂದಿಕೆಯಾಗುವ ಹಿನ್ನೆಲೆ ಹೊಂದಿರುವ ಅಪ್ಲಿಕೇಶನ್ ಐಕಾನ್ ಅನ್ನು ಸ್ಪ್ಲಾಶ್ ಪರದೆಯು ತೋರಿಸುತ್ತದೆ.
This News Article Is A Copy Of GIZBOT BUREAU
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm