ಬ್ರೇಕಿಂಗ್ ನ್ಯೂಸ್
29-05-21 05:01 pm GIZBOT Mutthuraju H M ಡಿಜಿಟಲ್ ಟೆಕ್
ಜನಪ್ರಿಯ ಆಪಲ್ ಐಫೋನ್ ಇತ್ತೀಚಿಗೆ ಐಫೋನ್ SE 2020 ಐಫೋನ್ ಬಿಡುಗಡೆ ಮಾಡಿದ್ದು, ಆಪಲ್ ಪ್ರಿಯರಲ್ಲಿ ಖುಷಿ ಮೂಡಿಸಿತ್ತು. ಈ ಐಫೋನ್ ಯಶಸ್ವಿಯ ಮುಂದುವರಿದ ಭಾಗವಾಗಿ ಆಪಲ್ ಈಗ ನೂತನವಾಗಿ ಐಫೋನ್ SE 3 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲು ಸಜ್ಜಾಗಿದೆ. ಬರಲಿರುವ ನೂತನ ಐಫೋನ್ ಬಯೋನಿಕ್ A14 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.
ಹೌದು, ಆಪಲ್ ನೂತನವಾಗಿ ಐಫೋನ್ SE 3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಆಕರ್ಷಕ ಫೀಚರ್ಸ್ ಹೊಂದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದು ಬಂದಿದೆ. ಐಫೋನ್ SE 3 ಸ್ಮಾರ್ಟ್‌ಫೋನ್ 6.1 ಇಂಚಿನ ಡಿಸ್‌ಪ್ಲೇ ಇರಲಿದ್ದು, ಕಡಿಮೆ ಬೆಜಲ್ ರಚನೆಯೊಂದಿಗೆ ಸೆಂಟರ್ ಪಂಚ್ ಹೋಲ್ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಐಫೋನ್ SE 3 ಸ್ಮಾರ್ಟ್‌ಫೋನ್ ಐಫೋನ್ 12 ಮಾದರಿಗಳಂತೆ ಚೌಕಾಕಾರ ಅಂಚಿನ ವಿನ್ಯಾಸವನ್ನು ಹೊಂದಿದೆ. ಹಿಂಭಾಗದಲ್ಲಿರುವ ಏಕ-ಕ್ಯಾಮೆರಾ ಮತ್ತು ಫ್ಲ್ಯಾಷ್ ಅನ್ನು ಮಾತ್ರೆ ಆಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ. ಮುಂಭಾಗದಲ್ಲಿ, ಕನಿಷ್ಠ ಬೆಜೆಲ್‌ಗಳೊಂದಿಗೆ ಕೇಂದ್ರಿತ ಪಂಚ್-ಹೋಲ್ ಪ್ರದರ್ಶನವನ್ನು ಆಡುವುದನ್ನು ಕಾಣಬಹುದು. ಹಾಗೆಯೇ ಈ ಫೋನ್ ವೈಶಿಷ್ಟ್ಯಗಳು ಟಚ್-ಐಡಿ ವೈಶಿಷ್ಟ್ಯಗಳವನ್ನು ಪಡೆದಿರಲಿದೆ. ಇದರೊಂದಿಗೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುತ್ತದೆ ಎಂದು ಲೀಕ್ ಮಾಹಿತಿಗಳು ಸುಳಿವು ನೀಡಿವೆ.
ಸ್ಮಾರ್ಟ್‌ಫೋನ್‌ನ ಬೆಲೆಯನ್ನು ನಿಯಂತ್ರಣದಲ್ಲಿಡಲು ಪ್ರದರ್ಶನವು ಎಲ್‌ಸಿಡಿ ರೀತಿಯಿಂದ ದೂರವಿರಬೇಕು. ಐಫೋನ್ SE 3 ನಲ್ಲಿ ಹೆಚ್ಚುವರಿ ಎಲ್‌ಸಿಡಿ ಪ್ರದರ್ಶನಕ್ಕೆ ಮತ್ತೊಂದು ಕಾರಣವೆಂದರೆ ಅದನ್ನು ಉನ್ನತ ಹಂತದ ಐಫೋನ್ಗಳಿಂದ ಬೇರ್ಪಡಿಸುವುದು. ಈ ಫೋನ್ ಐಫೋನ್ ಬಯೋನಿಕ್ A14 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.
ಹಿಂದಿನ ಐಫೋನ್ SE 2020 ಫೋನ್ ಬಯೋನಿಕ್ A13 SoC ಪ್ರೊಸೆಸರ್ ಹೊಂದಿದೆ. ಐಫೋನ್ SE 2020 ಫೋನ್ ನಂತೆ ನೂತನ ಐಫೋನ್ SE 3 ಸ್ಮಾರ್ಟ್‌ಫೋನ್ ಸಹ 64GB, 128GB ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಈ ಫೋನ್ 5ಜಿ ಸಪೋರ್ಟ್ ಪಡೆದಿರಲಿದ್ದು, ವೈಫೈ 6 ಅನ್ನು ಬೆಂಬಲಿಸುವ ನಿರೀಕ್ಷೆಗಳು ಇವೆ.
ಇನ್ನು ಈ ಫೋನ್ ಜೂನ್ 7ರಂದು ನಡೆಯಲಿರುವ WWDC 2021 ಕಾರ್ಯಕ್ರಮದಲ್ಲಿ ಅನಾವರಣ ಆಗುವ ನಿರೀಕ್ಷೆಗಳಿವೆ. ಒಂದು ವೇಳೆ ಲಾಂಚ್ ಆಗದಿದ್ದರೇ ಮುಂದಿನ ವರ್ಷಕ್ಕೆ ಲಾಂಚ್ ಆಗಲಿದೆ ಎನ್ನಲಾಗಿದೆ. ಐಫೋನ್ SE 3 ಫೋನ್ ಪ್ರೈಸ್ ದೃಷ್ಠಿಯಿಂದ ಕೆಲವು ಆಂಡ್ರಾಯ್ಡ್ ಫೋಣ್‌ಗಳಿಗೆ ನೇರ ಸ್ಪರ್ಧೆ ಒಡ್ಡಲಿದೆ. ಭಾರತದಲ್ಲಿ ಐಫೋನ್ SE 3 ಬೆಲೆ ಸುಮಾರು 45000ರೂ.ಗಳ ಆಸುಪಾಸಿನಲ್ಲಿ ಇರುವ ಸಾಧ್ಯತೆಗಳು ಇವೆ.
(Kannada Copy of Gizbot Kannada)
15-07-25 10:35 am
Bangalore Correspondent
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:32 am
Mangalore Correspondent
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
15-07-25 11:38 am
Mangalore Correspondent
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am