ಬ್ರೇಕಿಂಗ್ ನ್ಯೂಸ್
23-06-21 02:48 pm GIZBOT Mantesh ಡಿಜಿಟಲ್ ಟೆಕ್
ಜನಪ್ರಿಯ ರಿಯಲ್ ಮಿ ಮೊಬೈಲ್ ಕಂಪನಿಯು ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಅವುಗಳಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿದ್ದ, ಬಜೆಟ್ ಬೆಲೆಯ ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಆದರೆ ಇದೀಗ ರಿಯಲ್‌ಮಿಯು ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಏರಿಕೆ ಮಾಡಿದ್ದು, ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ.
ಹೌದು, ರಿಯಲ್ ಮಿ ಮೊಬೈಲ್ ಕಂಪನಿ ಸಂಸ್ಥೆಯು ತನ್ನ ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಬೆಲೆಯಲ್ಲಿ 500ರೂ.ಗಳನ್ನು ಏರಿಕೆ ಮಾಡಿದೆ. ಈ ಫೋನ್ 4GB RAM + 64GB ಮತ್ತು 4GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಈ ಎರಡು ವೇರಿಯಂಟ್‌ಗಳ ಬೆಲೆಯಲ್ಲಿಯೂ ಹೆಚ್ಚಳ ಮಾಡಿದೆ. ಹೀಗಾಗಿ 9,999ರೂ.ಗಳಿಗೆ ಲಭ್ಯವಿದ್ದ 4GB RAM + 64GB ವೇರಿಯಂಟ್ ಈಗ 10,499ರೂ. ಪ್ರೈಸ್‌ಟ್ಯಾಗ್ ಹೊಂದಿದೆ. ಹಾಗೆಯೇ 10,999ರೂ. ಬೆಲೆಯಲ್ಲಿದ್ದ 4GB RAM/128GB ವೇರಿಯಂಟ್ ದರ ಏರಿಕೆಯಿಂದಾಗಿ 11,499ರೂ.ಗಳ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ರಿಯಲ್‌ಮಿ C25s ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್
ರಿಯಲ್‌ಮಿ C25s ಸ್ಮಾರ್ಟ್‌ಫೋನ್ 720x1,600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ LCD ಪೂರ್ಣ ಹೆಚ್‌ಡಿ ಪ್ಲಸ್ ಹೊಂದಿದೆ. ಈ ಡಿಸ್‌ಪ್ಲೇಯ ಟೀಯರ್‌ಟ್ರಾಪ್ ಸ್ಟೈಲ್ ನಾಚ್ ಮಾದರಿಯಲ್ಲಿದ್ದು, ಡಿಸ್‌ಪ್ಲೇ ಅನುಪಾತವು 88.7 ಆಗಿದೆ. 570 nits ಬ್ರೈಟ್ನೆಸ್ ನಿಟ್ಸ್ ಸಾಮರ್ಥ್ಯವನ್ನು ಹೊಂದಿದೆ.
ಪ್ರೊಸೆಸರ್ ಬಲ
ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G85 ಪ್ರೊಸೆಸರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಇದೆ. ಇದರೊಂದಿಗೆ 64GB ಸ್ಟೋರೇಜ್ ಹಾಗೂ 128GB ವೇರಿಯಂಟ್ ಆಯ್ಕೆ ಹೊಂದಿದ್ದು, 4GB RAM ಸಪೋರ್ಟ್ ಅನ್ನು ಪಡೆದುಕೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ವಿಸ್ತರಣೆಗೆ ಅವಕಾಶ ಇದೆ
ಕ್ವಾಡ್ ಕ್ಯಾಮೆರಾ ರಚನೆ
ರಿಯಲ್‌ಮಿ C25s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿರಲಿದೆ. ಇನ್ನು ತೃತೀಯ ಕ್ಯಾಮೆರಾ 2ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು ಬೇಸಿಕ್ ಸೆನ್ಸಾರ್ ಪಡೆದಿರಲಿದೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದೆ.
ಬ್ಯಾಟರಿ ಲೈಫ್
ಬ್ಯಾಟರಿ ಲೈಫ್ ರಿಯಲ್‌ಮಿ C25s ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯವನ್ನು ಹೊಂದಿದ್ದು, 18W ಸಾಮರ್ಥ್ಯದ ಫ್ಲ್ಯಾಶ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದರರೊಂದಿಗೆ ಕನೆಕ್ಟಿವಿಟಿಗಾಗಿ ಫೋನ್ 4 ಜಿ ವೋಲ್ಟಿಇ, ಜಿಪಿಎಸ್, ವೈ-ಫೈ, ಬ್ಲೂಟೂತ್ ಅನ್ನು ಬೆಂಬಲಿಸುತ್ತದೆ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಹೊಂದಿದೆ.
(Kannada Copy of Gizbot Kannada)
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 09:59 pm
Mangalore Correspondent
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಒಂದು ಅಸ್ಥಿಪಂಜರದ ಜೊತೆಗಿ...
18-09-25 11:11 pm
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm