ಬ್ರೇಕಿಂಗ್ ನ್ಯೂಸ್
20-07-21 11:03 am GIZBOT Mutthuraju H M ಡಿಜಿಟಲ್ ಟೆಕ್
ಕೊರೊನಾ ಬಂದ ನಂತರ ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇನ್ನು ಕೂಡ ಮನೆಯಿಂದಲೇ ಕೆಲಸ ನಿರ್ವಹಿಸುವುದನ್ನು ಮುಂದುವರೆಸಿವೆ. ಮನೆಯಿಂದಲೇ ಕೆಲಸ ಮಾಡುವುದರಿಂದ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ಹೊರೆ ಬಿದ್ದಿದೆ. ಆದರೂ ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಸ್ಥಿರ ಬ್ರಾಡ್‌ಬ್ಯಾಂಡ್ ವೇಗ ಎರಡೂ ಕೂಡ ಸಾಕಷ್ಟು ಸುಧಾರಿಸುತ್ತಿವೆ. ಸದ್ಯ ಜೂನ್ 2021ರಲ್ಲಿ ನೆಟ್‌ವರ್ಕ್ ವೇಗದ ಕುರಿತಂತೆ ಪ್ರಖ್ಯಾತ ಓಕ್ಲಾ ಸಂಸ್ಥೆ ಪರೀಕ್ಷೆ ನಡೆಸಿದ್ದು, ಭಾರತದಲ್ಲಿ ಇಂಟರ್ನೆಟ್ ವೇಗ ಸುಧಾರಣೆ ಕಂಡಿದೆ ಎಂದು ವರದಿ ಮಾಡಿದೆ.
ಹೌದು, ಇಂಟರ್‌ನೆಟ್ ಸ್ಪೀಡ್ ಟೆಸ್ಟರ್ ಒಕ್ಲಾ ಭಾರತದಲ್ಲಿ ಇಂಟರ್‌ನೆಟ್ ವೇಗದಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿದೆ. ಭವಿಷ್ಯದ ದೃಷ್ಟಿಯಿಂದ ಭಾರತವು ಇಂಟರ್‌ನೆಟ್ ವೇಗದ ಸುಧಾರಣೆಯನ್ನು ಮುಂದುವರೆಸಿದೆ. ಅಲ್ಲದೆ ಜಾಗತಿಕ ಇಂಟರ್ನೆಟ್ ವೇಗದ ಶ್ರೇಯಾಂಕದಲ್ಲಿ ತನ್ನ ಸ್ಥಾನವನ್ನು ಸುಧಾರಿಸಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಒಕ್ಲಾ ರಿಪೋರ್ಟ್ ನಲ್ಲಿ ಭಾರತದ ಇಂಟರ್‌ನೆಟ್ ವೇಗ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಭಾರತದಲ್ಲಿ ಇಂಟರ್ನೆಟ್ ವೇಗ ಸುಧಾರಿಸುತ್ತಿದೆ
ಭಾರತ ಸ್ಥಿರ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ವೇಗದಲ್ಲಿ 70 ನೇ ಸ್ಥಾನದಲ್ಲಿದೆ ಮತ್ತು ಮೊಬೈಲ್ ಇಂಟರ್ನೆಟ್ ವೇಗದಲ್ಲಿ 122 ನೇ ಸ್ಥಾನದಲ್ಲಿದೆ ಎಂದು ಓಕ್ಲಾ ವರದಿ ತಿಳಿಸಿದೆ. ಅದರಲ್ಲೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ತನ್ನ ಮೊಬೈಲ್ ಇಂಟರ್ನೆಟ್ ವೇಗ ಹೆಚ್ಚಾಗಿದ್ದರಿಂದ ಭಾರತದ ಬೆಳವಣಿಗೆಯ ಗ್ರಾಫ್ ಮೇಲಕ್ಕೆ ಚಲಿಸುತ್ತಿದೆ. ನಿಗದಿತ ಬ್ರಾಡ್‌ಬ್ಯಾಂಡ್ ವೇಗವು ಮೇ ತಿಂಗಳಲ್ಲಿ ಕುಸಿತ ಕಂಡರೂ, ಭಾರತವು ಈ ವಿಭಾಗದಲ್ಲಿ ಒಟ್ಟಾರೆ ಬೆಳೆಯುವಲ್ಲಿ ಯಶಸ್ವಿಯಾಗಿದೆ.
ಇದು ಸರಾಸರಿ ಸ್ಥಿರ ಬ್ರಾಡ್‌ಬ್ಯಾಂಡ್ ವೇಗವನ್ನು 5817Mbps ಕಂಡಿದೆ. ಇದು ಮೇ 2021 ರಲ್ಲಿ 66.65Mbps ವೇಗಕ್ಕಿಂತ ಹೆಚ್ಚಾಗಿದೆ. ಮೊಬೈಲ್ ಇಂಟರ್‌ನೆಟ್ ವೇಗಕ್ಕೆ ಸಂಬಂಧಿಸಿದಂತೆ, ಜೂನ್‌ನಲ್ಲಿ ಸರಾಸರಿ 17.84Mbps ವೇಗವನ್ನು ಕಂಡಿದೆ. ಇದು ಮೇ ತಿಂಗಳಲ್ಲಿ ಕಂಡುಬರುವ ಸರಾಸರಿ 1534Mbps ವೇಗಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಮೊಬೈಲ್ ಇಂಟರ್‌ನೆಟ್‌ಗಾಗಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದಲ್ಲಿ ವ್ಯತ್ಯಾಸವಿದೆ.
ಜೂನ್‌ನಲ್ಲಿ ಭಾರತದಲ್ಲಿ ಸರಾಸರಿ ಡೌನ್‌ಲೋಡ್ ವೇಗ 17.84Mbps ಆಗಿದ್ದರೆ, ಅಪ್‌ಲೋಡ್ ವೇಗ 5.17Mbps ಆಗಿತ್ತು. ಹಾಗೆಯೇ ಸ್ಥಿರ ಬ್ರಾಡ್‌ಬ್ಯಾಂಡ್‌ಗೆ ಸಂಬಂಧಿಸಿದಂತೆ, ದೊಡ್ಡ ವ್ಯತ್ಯಾಸವಿರಲಿಲ್ಲ. ಡೌನ್‌ಲೋಡ್ ವೇಗ ಜೂನ್‌ನಲ್ಲಿ 58.17Mbps ಆಗಿದ್ದರೆ, ಅಪ್‌ಲೋಡ್ ವೇಗ 54.43Mbps ಆಗಿತ್ತು. ಇನ್ನು ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) 193.51Mbps ವೇಗದ ಮೊಬೈಲ್ ಇಂಟರ್ನೆಟ್ ವೇಗದೊಂದಿಗೆ ಮೊದಲ ಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. ಇದರ ನಂತರ ದಕ್ಷಿಣ ಕೊರಿಯಾ (180.48Mbps), ಕತಾರ್ (171.76Mbps), ನಾರ್ವೆ (167.60Mbps), ಮತ್ತು ಸೈಪ್ರಸ್ (161.80Mbps) ಮೊದಲ 5 ಸ್ಥಾನಗಳಲ್ಲಿವೆ.
(Kannada Copy of Gizbot Kannada)
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm