ಬ್ರೇಕಿಂಗ್ ನ್ಯೂಸ್
26-07-21 02:42 pm GIZBOT Mutthuraju H M ಡಿಜಿಟಲ್ ಟೆಕ್
ಒಪ್ಪೋ ಕಂಪೆನಿ ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳಿಗೆ ಜನಪ್ರಿಯತೆ ಪಡೆದುಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಹೊಸ ಒಪ್ಪೋ A93s 5G ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಹೌದು, ಒಪ್ಪೋ ಕಂಪೆನಿ ಒಪ್ಪೋ A93s 5G ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.80 ಇಂಚಿನ ಫುಲ್-ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಹಾಗೆಯೇ 8GB RAM + 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ
ಒಪ್ಪೋ A93s 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.80 ಇಂಚಿನ ಫುಲ್-ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 600nits ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿರುವ ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿದೆ. ಪ್ರೊಸೆಸರ್ ಒಪ್ಪೋ A93s 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC

ಪ್ರೊಸೆಸರ್
ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಕಲರ್ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM + 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷ
ಒಪ್ಪೋ A93s 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಫ್ರಂಟ್ ಶೂಟಿಂಗ್ ಮೋಡ್‌ಗಳಲ್ಲಿ ಸಪೋರ್ಟ್ ನೈಟ್ ಸೀನ್, ವಿಡಿಯೋ, ಫೋಟೋ, ಪೋರ್ಟ್ರೇಟ್, ಟೈಮ್-ಲ್ಯಾಪ್ಸ್ ಫೋಟೋಗ್ರಫಿ, ಪನೋರಮಾ, ಎಐ ಐಡಿ ಫೋಟೋ ಫೀಚರ್ಸ್ ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಒಪ್ಪೋ A93s 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್, ಜಿಪಿಎಸ್, ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ, ಮತ್ತು ಬ್ಲೂಟೂತ್ ವಿ 5.1 ಸೇರಿವೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಒಪ್ಪೋ A93s 5G ಸ್ಮಾರ್ಟ್‌ಫೋನ್ ಏಕೈಕ 8GB RAM + 256GB ಶೇಖರಣಾ ಆಯ್ಕೆಗಾಗಿ ಸಿಎನ್‌ವೈ 1,999 (ಸರಿಸುಮಾರು ರೂ. 22,900) ಬೆಲೆ ಹೊಂದಿದೆ. ಇನ್ನು ಈ ಫೋನ್ ಅರ್ಲಿ ಸಮ್ಮರ್ ಲೈಟ್ ಸೀ, ಸಮ್ಮರ್ ನೈಟ್ ಸ್ಟಾರ್ ರಿವರ್, ವೈಟ್ ಪೀಚ್ ಸೋಡಾ ಕಲರ್ ಆಯ್ಕೆಗಳಲ್ಲಿ ಬರುತ್ತದೆ. ಇದು ಇದೇ ಜುಲೈ 30 ರಿಂದ ಚೀನಾದಲ್ಲಿ ಮಾರಾಟ ಪ್ರಾರಂಭವಾಗಲಿದೆ.
(Kannada Copy of Gizbot Kannada)
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
20-07-26 03:42 pm
HK News Staffer
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
20 ದಿನಗಳ ಉಪವಾಸದಿಂದ ಹದಗೆಟ್ಟ ಆರೋಗ್ಯ, ಸೋನಮ್ ವಾಂಗ...
18-07-26 09:31 pm
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ...
18-07-26 06:22 pm
20-07-26 09:32 pm
HK News Staffer
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
20-07-26 10:17 pm
HK News Desk
ಪಂಜುರ್ಲಿ ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ಮೇಲೆ ಪೂಜಾ...
20-07-26 07:47 pm
ಕೋತಿ ಕಂಡು ಮನೆಗೆ ಓಡಿಬಂದ 8 ವರ್ಷದ ಬಾಲಕಿ, ಕುಸಿದು...
20-07-26 07:45 pm
ಸುರತ್ಕಲ್ನಲ್ಲಿ ಮರ್ಡರ್ ; 20 ವರ್ಷದ ತಮ್ಮನ ತಲೆಗೆ...
20-07-26 04:41 pm
ಖೋಟಾ ನೋಟು ಜಾಲ ; 22 ವರ್ಷಗಳ ಹಿಂದೆಯೂ ನಕಲಿ ನೋಟು ದ...
19-07-26 07:42 pm