ಬ್ರೇಕಿಂಗ್ ನ್ಯೂಸ್
29-07-21 01:41 pm GIZBOT KANNADA ಡಿಜಿಟಲ್ ಟೆಕ್
ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇತ್ತೀಚಿಗಷ್ಟೆ ತನ್ನ ಹೊಸ ಪ್ರೈವಸಿ ನಿಯಮಗಳಿಂದ ಸ್ವಲ್ಪ ಹಿನ್ನಡೆ ಕಂಡರೂ, ವಾಟ್ಸಾಪ್ ಜನಪ್ರಿಯತೆ ಉಳಿಸಿಕೊಂಡು ಮುನ್ನುಗ್ಗುತ್ತಲಿದೆ. ವಿಡಿಯೋ ಕರೆ, ಟೆಕ್ಸ್ಟ್, ಸ್ಟಿಕ್ಕರ್ ಸಂಬಂಧಿಸಿದಂತೆ ಕೆಲವು ಅಪ್‌ಡೇಟ್‌ಗಳನ್ನು ಮಾಡಿದೆ. ಹಾಗೆಯೇ ಮಲ್ಟಿ ಡಿವೈಸ್ ಸಪೋರ್ಟ್ ಅನುಕೂಲ ಒದಗಿಸಿದೆ.
ಹೌದು, ಇನ್‌ಸ್ಟ್‌ಂಟ್ ಮೆಸೆಜ್ ತಾಣ ವಾಟ್ಸಾಪ್‌ನಲ್ಲಿ ಮಲ್ಟಿ ಡಿವೈಸ್ ಸಪೋರ್ಟ್ ಅವಕಾಶ ನೀಡಿದೆ. ಏಕಕಾಲಕ್ಕೆ ಎರಡು ಮೂರು ಡಿವೈಸ್‌ಗಳಲ್ಲಿ ವಾಟ್ಸಾಪ್ ಖಾತೆ ಬಳಕೆ ಮಾಡಬಹುದಾಗಿದೆ. ಇನ್ನು ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್‌ಗಳು ಇವೆ. ಅದಾಗ್ಯೂ ಕೆಲವೊಮ್ಮೆ ವಾಟ್ಸಾಪ್ ಹ್ಯಾಕ್ ಆಗುವ ಸಾಧ್ಯತೆಗಳು ಇರುತ್ತವೆ. ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸಾಪ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳು ಇರುತ್ತವೆ.
ವಾಟ್ಸಾಪ್ ಖಾತೆಯನ್ನು ಇತರೆ ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದೊಂದು ಅನುಕೂಲಕರ ಫೀಚರ್ ಆಗಿದ್ದರೂ ಕೆಲವೊಮ್ಮೆ ಸಮಸ್ಯೆ ಎನಿಸಬಹುದು. ಬಳಕೆದಾರರ ವಾಟ್ಸಾಪ್ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ನಿಮ್ಮ ವಾಟ್ಸಾಪ್ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ?
ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸಾಪ್ ಚಾಟ್/ ಮೀಡಿಯಾ ಫೈಲ್ಸ್ ವೀಕ್ಷಿಸುತ್ತಾರೆ. ಅಂದರೆ ಬಳಕೆದಾರರ ತಪ್ಪಿನಿಂದಲೇ ಅವರ ವಾಟ್ಸಾಪ್ ಹ್ಯಾಕ್ ಆಗುವ ಚಾನ್ಸ್ ಇರುತ್ತವೆ. ಹೀಗೆ ಹ್ಯಾಕ್ ಆದ ವಾಟ್ಸಾಪ್ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸಾಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.
ಥರ್ಡ್‌ಪಾರ್ಟಿ ಆಪ್ ಅಗತ್ಯ ಇಲ್ಲ
ಬಳಕೆದಾರರ ವಾಟ್ಸಾಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆಪ್ ಅಗತ್ಯ ಇಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸಾಪ್‌ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ನಿಮ್ಮ ವಾಟ್ಸಾಪ್ ನಲ್ಲಿ ಈ ಕ್ರಮ ಅನುಸರಿಸಿ:
* ಮೊದಲಿಗೆ ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಿರಿ.
* ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್ ಸೆಲೆಕ್ಟ್ ಮಾಡಿರಿ
* ಬಳಿಕ ಅಲ್ಲಿ ಕಾಣುಸಿವ ವಾಟ್ಸಾಪ್ ವೆಬ್ / ಲಿಂಕ್ ಡಿವೈಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸಾಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.
ಬಾರ್‌ಕೋಡ್ ಸ್ಕ್ಯಾನ್;
ಕೆಲವರಿಗೆ ಬೇರೆಯವರ ವಾಟ್ಸಾಪ್ ಇಣುಕಿ ನೋಡುವ ಕುತೂಹಲ ಇರುತ್ತದೆ. ಅಂತಹವರು ಇತರರ ವಾಟ್ಸಾಪ್ ಮೆಸೆಜ್ ಓದಲು ಕಳ್ಳ ಮಾರ್ಗ ಹುಡುಕುತ್ತಾರೆ. ಬಾರ್‌ಕೋಡ್ ಸ್ಕ್ಯಾನ್ ಮೂಲಕ ವಾಟ್ಸಾಪ್ ಲ್ಯಾಪ್‌ಟಾಪ್‌ಗೆ ಅಥವಾ ಇತರೆ ಡಿವೈಸ್‌ನಲ್ಲಿ ನಕಲು ಮಾಡುವ ಸಾಧ್ಯತೆಗಳಿರುತ್ತವೆ. ಕೆಲವು ಬಳಕೆದಾರರು ತಮ್ಮ ಫೋನಿಗೆ ಯಾವುದೇ ಲಾಕ್ ಇಟ್ಟಿರುವುದಿಲ್ಲ. ಹಾಗೆಯೇ ವಾಟ್ಸಾಪ್ ಆಪ್ ತೆರೆಯಲು ಸಹ ಯಾವುದೇ ಪಾಸ್‌ವರ್ಡ್ ಇಟ್ಟಿರುವುದಿಲ್ಲ. ಇಂತಹ ಖಾತೆಗಳಿಗೆ ಸುಲಭವಾಗಿ ಇತರರು ಹ್ಯಾಕ್ ಮಾಡಬಹುದಾಗಿದೆ. ಅವರ ವಾಟ್ಸಾಪ್ ಖಾತೆ ತೆರೆದು ವಾಟ್ಸಾಪ್ ವೆಬ್ / ಲಿಂಕ್ ಡಿವೈಸ್ ಬಾರ್‌ಕೋಡ್ ಸ್ಕ್ಯಾನ್ ಮೂಲಕ ಇನ್ನೊಂದು ಡಿವೈಸ್‌ನಲ್ಲಿ ನಕಲು ವಾಟ್ಸಾಪ್ ತೆರೆದುಕೊಳ್ಳುವ ಚಾನ್ಸ್ ಇರುತ್ತವೆ.
ಮತ್ತೊಂದು ಡಿವೈಸ್‌ನಲ್ಲಿ ವಾಟ್ಸಾಪ್ ಓಪನ್ ಆಗಿದೆಯೇ?
ವ್ಯಕ್ತಿಗಳು ವಾಟ್ಸಾಪ್ ಅನ್ನು ಕಣ್ಣಿಡಲು ಇನ್ನೊಂದು ಮಾರ್ಗವೆಂದರೆ ಮತ್ತೊಂದು ಡಿವೈಸ್‌ನ ಖಾತೆಯನ್ನು ಸಕ್ರಿಯಗೊಳಿಸುವುದು. ಮೂಲತಃ, ಅವರು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಮತ್ತೊಂದು ಮೊಬೈಲ್‌ನಲ್ಲಿ ನೋಂದಾಯಿಸುತ್ತಾರೆ ಮತ್ತು ಅವರ ಕಾನ್ಫಿಗರೇಶನ್ ಸಮಯದಲ್ಲಿ, ಅವರು ಅಪ್ಲಿಕೇಶನ್‌ನಲ್ಲಿ ಉಳಿಸಲಾದ ನಿಮ್ಮ ಎಲ್ಲಾ ಚಾಟ್‌ಗಳು ಅಥವಾ ಸಂಭಾಷಣೆಗಳನ್ನು ಮರುಪಡೆಯುತ್ತಾರೆ. ವಾಟ್ಸಾಪ್ ಕಳುಹಿಸುವ ಪರಿಶೀಲನಾ ಕೋಡ್ ಸ್ವೀಕರಿಸಲು ನಿಮ್ಮ ಸೆಲ್ ಫೋನ್ ತೆಗೆದುಕೊಳ್ಳುವ ಮೂಲಕ ಯಾರಾದರೂ ಇದನ್ನು ಮಾಡಬಹುದು.
ಹ್ಯಾಕ್ ತಡೆಯಲು ಏನು ಮಾಡಬೇಕು?
ವಾಟ್ಸಾಪ್ ಹ್ಯಾಕ್ ಆಗುವುದನ್ನು ತಡೆಯಲು ಇತರೆ ಡಿವೈಸ್‌ಗಳಲ್ಲಿ ನೀವು ತೆರೆದಿರುವ ಎಲ್ಲಾ ಸೆಷನ್‌ಗಳಿಂದ ಲಾಗ್ ಔಟ್ ಮಾಡಬಹುದು. ಹೀಗೆ ಮಾಡಿದರೇ ಮೂರನೇ ವ್ಯಕ್ತಿಯು ನಿಮ್ಮ ಖಾತೆಗೆ ಪ್ರವೇಶವನ್ನು ತಕ್ಷಣ ಕಳೆದುಕೊಳ್ಳುತ್ತಾನೆ.
ಈ ಸಂಗತಿಗಳು ಮತ್ತೆ ಸಂಭವಿಸುವುದನ್ನು ತಪ್ಪಿಸಲು, ಅಪ್ಲಿಕೇಶನ್ ಲಾಕ್‌ನೊಂದಿಗೆ ವಾಟ್ಸಾಪ್ ಅನ್ನು ಕಾನ್ಫಿಗರ್ ಮಾಡುವುದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಈ ರೀತಿಯಾಗಿ, ಯಾರಾದರೂ ನಿಮ್ಮ ಫೋನ್ ಪಡೆದರೂ ಸಹ, ಅವರು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಅದನ್ನು ವಾಟ್ಸಾಪ್ ವೆಬ್ ಮೂಲಕ ಪಿಸಿ ಅಥವಾ ಇತರ ಅಪ್ಲಿಕೇಶನ್‌ಗೆ ಸಂಪರ್ಕಿಸಲು ಸಾಧ್ಯವಿಲ್ಲ.
Though you cannot use the same WhatsApp number on two devices at the same instance. But anyone can spy on you with a feature known as WhatsApp Web. WhatsApp is a popular internet messaging App and looking at the nature of the App it is one of the most private of the software present on Android. If unknowingly a rogue gets access to your WhatsApp it may create great repercussions.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm