ಬ್ರೇಕಿಂಗ್ ನ್ಯೂಸ್
05-02-22 12:18 pm Source: Vijayakarnataka ಡಿಜಿಟಲ್ ಟೆಕ್
ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಎಂಬ ಹೆಸರನ್ನು ಬದಲಾಯಿಸಿಕೊಂಡು ಟಾಟಾ ಪ್ಲೇ ಬ್ರಾಡ್‌ಬ್ಯಾಂಡ್ ಆಗಿ ರೂಪುಗೊಂಡಿರುವ ಕಂಪೆನಿಯು ಇದೀಗ ಮತ್ತೊಂದು ಭರ್ಜರಿ ಕೊಡುಗೆಯೊಂದನ್ನು ಪ್ರಕಟಿಸಿದೆ. ಟಾಟಾ ಪ್ಲೇ ಬ್ರಾಡ್‌ಬ್ಯಾಂಡ್ ಫೈಬರ್ ಪ್ರಸ್ತುತ ತನ್ನ ಹೊಸ ಚಂದಾದಾರರಿಗೆ ಒಂದು ತಿಂಗಳವರೆಗೆ ತನ್ನ ರೂ 1,150 ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. 'ಪ್ರಯತ್ನಿಸಿ ಮತ್ತು ಖರೀದಿಸಿ' ಎಂಬ ಹೊಸ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಒಂದು ತಿಂಗಳವರೆಗೆ ಈ ಯೋಜನೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಬಳಕೆದಾರರಿಗೆ ಮೊದಲು ಸೇವೆಯ ಗುಣಮಟ್ಟವನ್ನು ಪರೀಕ್ಷಿಸಲು ಮತ್ತು ನಂತರ ಸಂಪರ್ಕವನ್ನು ಖರೀದಿಸುವ ಆಯ್ಕೆಯನ್ನು ನೀಡುತ್ತದೆ.
ಹೌದು, 'ಪ್ರಯತ್ನಿಸಿ ಮತ್ತು ಖರೀದಿಸಿ' ಯೋಜನೆಯು ಟಾಟಾ ಪ್ಲೇ ಕಂಪನಿಯ ಪ್ರಚಾರದ ಕೊಡುಗೆಯಾಗಿದ್ದು, ಇದು ಹೊಸ ದೆಹಲಿ, ಬೆಂಗಳೂರು, ಚೆನ್ನೈ, ಗ್ರೇಟರ್ ನೋಯ್ಡಾ, ಮುಂಬೈ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ದೇಶದ ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ. ಒಂದು ತಿಂಗಳವರೆಗಿನ 1,150 ಬ್ರಾಡ್‌ಬ್ಯಾಂಡ್ ಯೋಜನೆಯು ಗ್ರಾಹಕರಿಗೆ 200 Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗದೊಂದಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕವನ್ನು ನೀಡುತ್ತದೆ. ಟ್ರೈ ಅಂಡ್ ಬೈ ಉಪಕ್ರಮದ ಗ್ರಾಹಕರು 1000GB ಹೆಚ್ಚಿನ ವೇಗದ ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ಈ ಯೋಜನೆಯನ್ನು ಪಡೆದ ಹೊಸ ಚಂದಾದಾರರಿಗೆ ಬ್ರಾಡ್‌ಬ್ಯಾಂಡ್ ಸೇವೆಯು ಇಷ್ಟವಾಗದಿದ್ದರೆ ಉಚಿತವಾಗಿ ವಾಪಸ್ ಮಾಡಬಹುದು.
'ಪ್ರಯತ್ನಿಸಿ ಮತ್ತು ಖರೀದಿಸಿ' ಯೋಜನೆಯಲ್ಲಿ ಟಾಟಾ ಪ್ಲೇ ಬ್ರಾಡ್‌ಬ್ಯಾಂಡ್ ಅನ್ನು ಖರೀದಿಸಲು ಬಳಕೆದಾರರು ಒಂದು ಬಾರಿ ಸಂಪೂರ್ಣ ಮರುಪಾವತಿಸಬಹುದಾದ 1,500 ರೂ. ಭದ್ರತಾ ಠೇವಣಿಯನ್ನು ಇರಿಸಬೇಕಾಗುತ್ತದೆ. ಬ್ರಾಡ್‌ಬ್ಯಾಂಡ್ ಫೈಬರ್ ಸಂಪರ್ಕವನ್ನು ಪಡೆದನಂತರ ಕಂಪನಿಯಿಂದ ಸಂಪೂರ್ಣ ಮರುಪಾವತಿಯನ್ನು ಪಡೆಯಲು ಅರ್ಹರಾಗಲು ನೀವು 30 ದಿನಗಳಲ್ಲಿ ಸಂಪರ್ಕವನ್ನು ರದ್ದುಗೊಳಿಸಬೇಕಾಗುತ್ತದೆ. 30 ದಿನಗಳ ಸೇವೆಯ ನಂತರ ನೀವು ರದ್ದುಗೊಳಿಸಿದರೆ, ನಿಮಗೆ 500 ರೂ.ಗಳ ಶುಲ್ಕ ವಿಧಿಸಲಾಗುತ್ತದೆ ಮತ್ತು ಉಳಿದ 1,000 ಮರುಪಾವತಿಯನ್ನು ಮಾತ್ರ ಗ್ರಾಹಕರು ಪಡೆಯುತ್ತಾರೆ ಎಂದು ಟಾಟಾ ಪ್ಲೇ ಕಂಪೆನಿ ತಿಳಿಸಿದೆ. ಬ್ರಾಡ್‌ಬ್ಯಾಂಡ್ ಸಂಪರ್ಕ ಇಷ್ಟವಾಗದಿದ್ದಲ್ಲಿ ಸಂಪರ್ಕವನ್ನು ಉಚಿತವಾಗಿ ಕಡಿತಗೊಳಿಸಬಹುದು.
ನೀವು ಟಾಟಾ ಪ್ಲೇ ಫೈಬರ್‌ನೊಂದಿಗೆ ಮುಂದುವರಿಯಲು ಬಯಸಿದರೆ, ನೀವು ಉತ್ತಮ ಕೊಡುಗೆಗಳಿಗೆ ಅರ್ಹರಾಗುತ್ತೀರಿ. ನೀವು ಕನಿಷ್ಟ 3 ತಿಂಗಳ ಕಾಲ 100 Mbps ಪ್ಲಾನ್‌ಗೆ ಹೋಗಲು ನಿರ್ಧರಿಸಿದರೆ, ನಂತರ ನೀವು ಸಂಪೂರ್ಣ ರೂ 1,500 ಮರುಪಾವತಿಯನ್ನು ಪಡೆಯುತ್ತೀರಿ. ಆದಾಗ್ಯೂ, ನೀವು 3 ತಿಂಗಳವರೆಗೆ 50 Mbps ಯೋಜನೆಯನ್ನು ಆರಿಸಿಕೊಂಡರೆ, ನೀವು ಕೇವಲ 500 ರೂಪಾಯಿಗಳ ಮರುಪಾವತಿಯನ್ನು ಪಡೆಯುತ್ತೀರಿ, ಉಳಿದ ರೂ 1,000 ಭದ್ರತಾ ಠೇವಣಿ ವ್ಯಾಲೆಟ್‌ನಲ್ಲಿರುತ್ತದೆ. ಮಾಸಿಕ ಯೋಜನೆಯನ್ನು ಪಡೆದರೆ, ಮೂರು ತಿಂಗಳ ಸಕ್ರಿಯ ಸೇವೆಯ ನಂತರ ನಿಮಗೆ ರೂ 1000 ಮರುಪಾವತಿಸಲಾಗುತ್ತದೆ, ಉಳಿದ ರೂ 500 ಭದ್ರತಾ ಠೇವಣಿ ವ್ಯಾಲೆಟ್‌ನಲ್ಲಿ ಉಳಿಯುತ್ತದೆ.
ಸಂಪರ್ಕದ ಜೊತೆಗೆ, ಪ್ರಾಯೋಗಿಕ ಅವಧಿಯಲ್ಲಿ ಟಾಟಾ ಪ್ಲೇ ಫೈಬರ್ ಬಳಕೆದಾರರಿಗೆ ಉಚಿತ ಲ್ಯಾಂಡ್‌ಲೈನ್ ಸಂಪರ್ಕವನ್ನು ಸಹ ನೀಡುತ್ತದೆ. ಇದಲ್ಲದೆ, ಬಳಕೆದಾರರಿಗೆ ಮರುಪಾವತಿಯು ಗ್ರಾಹಕ ಆವರಣದ ಉಪಕರಣಗಳ (CPE) ಚೇತರಿಕೆಗೆ ಒಳಪಟ್ಟಿರುತ್ತದೆ ಎಂದು ಕಂಪೆನಿ ತಿಳಿಸಿದೆ. ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್ ಎಂಬ ಹೆಸರನ್ನು ಬದಲಾಯಿಸಿಕೊಂಡು ಟಾಟಾ ಪ್ಲೇ ಬ್ರಾಡ್‌ಬ್ಯಾಂಡ್ ಆಗಿ ರೂಪುಗೊಂಡ ನಂತರ ಕಂಪೆನಿಯು ಭಾರೀ ಬದಲಾವಣೆಗಳನ್ನು ತರುತ್ತಿದೆ. ದೇಶದಲ್ಲಿನ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡುಹೊಡೆಯಲು ಓಟಿಟಿ ಫ್ಲಾಟ್‌ಫಾರ್ಮ್‌ಗಳ ಮೇಲೂ ನಿಗಾವಹಿಸಿದೆ. ಒಟ್ಟಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣ ಉಚಿತ ಹಣ ವಾಪಸ್ ಪಡೆಯಬಹುದಾದಂತಹ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಕಟಿಸಿದೆ.
Tata Play Fiber Broadband Offering One-Month Free Service.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:02 pm
Mangalore Correspondent
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
Yaticorp, Mangalore, AI: ಯತಿಕಾರ್ಪ್ ಸಂಸ್ಥೆಯಿಂದ...
15-09-25 08:28 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm