ಬ್ರೇಕಿಂಗ್ ನ್ಯೂಸ್
14-02-22 07:13 pm Source: Vijayakarnataka ಡಿಜಿಟಲ್ ಟೆಕ್
ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್‌ಕಾರ್ಟ್ ಇದೀಗ ಗ್ರಾಹಕರಿಂದ ಬಳಸಿದ (ಸೆಕೆಂಟ್ ಹ್ಯಾಂಡ್) ಮೊಬೈಲ್ ಫೋನ್ ಗಳನ್ನು ಖರೀದಿಸುವ `ಸೆಲ್ ಬ್ಯಾಕ್ ಪ್ರೋಗ್ರಾಂ’(Sell Back Programme) ಅನ್ನು ಪರಿಚಯಿಸಿದೆ. ಈ ಪ್ಲಾಟ್ ಫಾರ್ಮ್ ಮೂಲಕ ಗ್ರಾಹಕರು ಸೂಕ್ತ ಬೆಲೆಗೆ ತಮ್ಮ ಹಳೆಯ ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಬಹುದಾಗಿದ್ದು, ಇದರ ಮೌಲ್ಯಕ್ಕೆ ಸಮನಾದ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ ಗಿಫ್ಟ್ ವೋಚರ್ ಅನ್ನು ಫ್ಲಿಪ್‌ಕಾರ್ಟ್ ನೀಡಲಿದೆ. ಗ್ರಾಹಕರು ಈ ಹಿಂದೆ ಮೊಬೈಲ್ ಫೋನ್ ಗಳನ್ನು ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಿದ್ದಾಗಿರಬಹುದು ಅಥವಾ ಇಲ್ಲದಿರಬಹುದು. ಎಲ್ಲಾ ಹಳೆಯ ಮೊಬೈಲ್ ಫೋನ್ ಗಳನ್ನು ಖರೀದಿಸುವುದಾಗಿ ಫ್ಲಿಪ್‌ಕಾರ್ಟ್ ತಿಳಿಸಿದ್ದು, ಬೆಂಗಳೂರು ದೆಹಲಿ, ಕೊಲ್ಕತ್ತಾ ಮತ್ತು ಪಾಟ್ನಾ ಸೇರಿದಂತೆ ವಿವಿಧ ನಗರಗಳ 1,700 ಕ್ಕೂ ಹೆಚ್ಚು ಪಿನ್ ಕೋಡ್ ಗಳಲ್ಲಿ ಈ ಮಾರಾಟ ಸೇವೆಯನ್ನು ಪಡೆಯಬಹುದಾಗಿದೆ.
ಫ್ಲಿಪ್‌ಕಾರ್ಟ್ ಇತ್ತೀಚೆಗೆ ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್ ರೀ-ಕಾಮರ್ಸ್ (ಮರು ವಾಣಿಜ್ಯ) ಕಂಪನಿಯಾದ 'ಯಾಂತ್ರ'ವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ ಈ ಸೆಲ್ ಬ್ಯಾಕ್ ಪ್ರೋಗ್ರಾಂ ಅನ್ನು ಪರಿಚಯಿಸುತ್ತಿದ್ದು, ತನ್ನ ಗ್ರಾಹಕರ ಕೊಡುಗೆಗಳನ್ನು ಹೆಚ್ಚಿಸುವ ಮತ್ತು ಮರು ಮಾರಾಟದ ವ್ಯವಹಾರವನ್ನು ಬಲಪಡಿಸುವ ಸಂದರ್ಭದಲ್ಲಿ ಗ್ರಾಹಕರಿಗೆ ಆರ್ಥಿಕತೆಯ ಕೊಡುಗೆ ನೀಡಲು ಪ್ರಯತ್ನಿಸುತ್ತದೆ. ಇತ್ತೀಚೆಗೆ ಐಡಿಸಿ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರತಿವರ್ಷ ಭಾರತದಲ್ಲಿ 125 ಮಿಲಿಯನ್ ಗೂ ಅಧಿಕ ಬಳಕೆ ಮಾಡಿದ ಫೋನ್ ಗಳು ಲಭ್ಯವಿವೆ. ಈ ಪೈಕಿ ಕೇವಲ 20 ಮಿಲಿಯನ್ ಫೋನ್ ಗಳು ಮಾರುಕಟ್ಟೆಗೆ ಬರುತ್ತಿವೆ. ಇದು ಇ-ತ್ಯಾಜ್ಯಕ್ಕೆ ಪ್ರಮುಖ ಕಾರಣವಾಗಿದೆ ಮತ್ತು ಈ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಹರಿಸಬೇಕಾಗಿದೆ. ಇಂತಹ ಸವಾಲನ್ನು ಪರಿಹರಿಸುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್ ನ ಸೆಲ್ ಬ್ಯಾಕ್ ಪ್ರೋಗ್ರಾಂ ಮೂಲಕ ಗ್ರಾಹಕರಿಗೆ ಸುಲಭ ಮತ್ತು ಸರಳ ವಿಧಾನದೊಂದಿಗೆ ಹಳೆಯ ಡಿವೈಸ್ ಗಳನ್ನು ಮಾರಾಟ ಮಾಡಿ ಅದಕ್ಕೆ ಬದಲಾಗಿ ಫ್ಲಿಪ್‌ಕಾರ್ಟ್ ನಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವ ಅವಕಾಶವನ್ನು ನೀಡುತ್ತಿದೆ.
ಫ್ಲಿಪ್‌ಕಾರ್ಟ್ ಸೆಲ್ ಬ್ಯಾಕ್ ಪ್ರೋಗ್ರಾಂ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಹೊಸ ಯೋಜನೆಯನ್ನು ಆರಂಭ ಮಾಡುವ ಬಗ್ಗೆ ಮಾತನಾಡಿದ ಫ್ಲಿಪ್‌ಕಾರ್ಟ್ ಗ್ರೋತ್ ಚಾರ್ಟರ್ ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಮತ್ತು ಮುಖ್ಯಸ್ಥ ಪ್ರಕಾಶ್ ಸಿಕಾರಿಯಾ ಅವರು, ``ಫ್ಲಿಪ್‌ಕಾರ್ಟ್ ನಲ್ಲಿ ನಮ್ಮ ಗ್ರಾಹಕರಿಗೆ ಇತ್ತೀಚಿನ ಅಪೇಕ್ಷಿತ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಖರೀದಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಟೆಕ್- ಸಕ್ರಿಯಗೊಳಿಸಲಾದ ಪರಿಹಾರಗಳನ್ನು ನೀಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಜನರು ತಮ್ಮ ಡಿವೈಸ್ ಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳುವುದನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಅಸಂಘಟಿತರಾಗಿರುವ ಮತ್ತು ನ್ಯಾವಿಗೇಟ್ ಮಾಡಲು ಕಷ್ಟಸಾಧ್ಯವಾಗಿರುವ ಡಿವೈಸ್ ಗಳನ್ನು ಮರು ಮಾರಾಟ ಮಾಡುವ ಮಾರುಕಟ್ಟೆಯು ಬೆಲೆಯುತ್ತಿದೆ. ಫ್ಲಿಪ್‌ಕಾರ್ಟ್ ನ ಸೆಲ್ ಬ್ಯಾಕ್ ಪ್ರೋಗ್ರಾಂನೊಂದಿಗೆ ನಾವು ಈ ಮಾರುಕಟ್ಟೆಯನ್ನು ಸಂಘಟಿತವನ್ನಾಗಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಈ ದಿಸೆಯಲ್ಲಿ ಹೆಚ್ಚು ಉತ್ಪಾದನೆಯಾಗುತ್ತಿರುವ ಇ-ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಸಹಕಾರಿಯಾಗಲಿದೆ. ಇದು ಸುಸ್ಥಿರ ಆರ್ಥಿಕತೆ ನಿರ್ಮಾಣಕ್ಕೆ ನಿರ್ಣಾಯಕ ಹೆಜ್ಜೆಯಾಗಿದೆ’’ ಎಂದು ಹೇಳಿದರು.
flipkart launches sell back programme to purchase used smartphones.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 07:12 pm
HK News Desk
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm