ಬ್ರೇಕಿಂಗ್ ನ್ಯೂಸ್
14-03-22 10:19 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಟೆಕ್ ಕಂಪೆನಿ Apple ತನ್ನ ಇತ್ತೀಚಿನ ಸ್ಪ್ರಿಂಗ್ ಈವೆಂಟ್‌ನಲ್ಲಿ iPhone SE 2022 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸಿರುವುದು ಬಹುತೇಕ ನಿಮಗೆಲ್ಲಾ ತಿಳಿಸಿದೆ. ಈ ಹೊಸ ಐಫೋನ್ ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರಿಗೆ ಎಷ್ಟು ಸಿಹಿಯನ್ನು ಹೊತ್ತು ತಂದಿದಿಯೋ ಎಂಬುದು ತಿಳಿದಿಲ್ಲ. ಆದರೆ, ಮುಂದಿನ ಜನ್ ಐಫೋನ್ 14 ಸರಣಿಯ ಬಿಡುಗಡೆಯ ಕುರಿತಂತೆ ಇದೀಗ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಹೌದು, ವಿಶ್ವಾಸಾರ್ಹ ಪ್ರಸಿದ್ಧ ಆಪಲ್ ವಿಶ್ಲೇಷಕ, ಮಿಂಗ್-ಚಿ ಕುವೊ ಹೇಳುವಂತೆ ಮುಂದಿನ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮಾದರಿಗಳು ಈ ವರ್ಷ A16 ಬಯೋನಿಕ್ ಚಿಪ್‌ಸೆಟ್ ಅನ್ನು ಪಡೆಯುತ್ತವೆ ಎಂದು ಹೇಳಿದ್ದಾರೆ. ಆದರೆ, ಸ್ಟ್ಯಾಂಡರ್ಡ್ ಐಫೋನ್ 14 ಮತ್ತು 14 ಮ್ಯಾಕ್ಸ್ ಅನ್ನು ಐಫೋನ್ 13 ನ ಎಲ್ಲಾ ಮಾದರಿಗಳಲ್ಲಿ ಬರುವ A15 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಬಹುದು ಎಂದು ಇದು ಸೂಚಿಸುತ್ತದೆ.
ಪ್ರಸಿದ್ಧ ಆಪಲ್ ವಿಶ್ಲೇಷಕರಾಗಿರುವ ಮಿಂಗ್-ಚಿ ಕುವೊ ಹೇಳುವಂತೆ, ಮುಂದಿನ ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಮಾದರಿಗಳು ಈ ವರ್ಷ A16 ಬಯೋನಿಕ್ ಚಿಪ್‌ಸೆಟ್ ಅನ್ನು ಪಡೆಯುತ್ತವೆಯಂತೆ. ಹೆಚ್ಚುವರಿಯಾಗಿ, ಪ್ರತಿ iPhone 14 ಮಾದರಿಯು 6GB RAM ನೊಂದಿಗೆ ಬರುತ್ತದೆ ಎಂದು ಹೇಳಿದ್ದಾರೆ. ಈ ಎರಡೂ ಉನ್ನತ-ಮಟ್ಟದ ಸಾಧನಗಳು ನವೀಕರಿಸಿದ LPDDR5 ಮೆಮೊರಿಯನ್ನು ಒಳಗೊಂಡಿರುತ್ತವೆ, ಆದರೆ ಕಡಿಮೆ ವೆಚ್ಚದ ಆವೃತ್ತಿಗಳು iPhone 13 ನಲ್ಲಿ LPDDR 4X ಅನ್ನು ಉಳಿಸಿಕೊಳ್ಳುತ್ತವೆ ಎಂದು ಮಿಂಗ್-ಚಿ ಕುವೊ (9to5Mac ಮೂಲಕ) ಅವರು ಸೂಚಿಸಿದ್ದಾರೆ. ಈ ಹಿಂದೆ, ಆಪಲ್‌ನ ದುಬಾರಿ ಮಾದರಿಗಳಿಗೆ ಹೆಚ್ಚು ಕೋರ್‌ಗಳು ಅಥವಾ ಮೆಮೊರಿಯೊಂದಿಗೆ ಪ್ರೊಸೆಸರ್ ನೀಡಲಾಗುತ್ತಿತ್ತು. ಆದ,ರೆ 2013 ರಲ್ಲಿ ಐಫೋನ್ 5S ಮತ್ತು 5C ಬಿಡುಗಡೆಯಾದಾಗಿನಿಂದ ಈ ರೀತಿ ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ ನಡುವೆ ರೇಖೆಯನ್ನು ಸೆಳೆಯಲು ಎರಡು ವಿಭಿನ್ನ ಪ್ರೊಸೆಸರ್‌ಗಳನ್ನು ಬಳಸಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆಇನ್ನು ನೂತನ ಐಫೋನ್ 14 ಮ್ಯಾಕ್ಸ್ 6.7-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಎಂದು ಮಿಂಗ್-ಚಿ ಕುವೊ ಅವರು ಊಹಿಸಿ ವರದಿಯನ್ನು ಪ್ರಕಟಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಆಪಲ್ $900 ಕ್ಕಿಂತ ಕಡಿಮೆ ಬೆಲೆಯ ದೊಡ್ಡ ಡಿಸ್‌ಪ್ಲೇಯೊಂದಿಗೆ ಐಫೋನ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ಸುದ್ದಿಯಾಗಿದ್ದನ್ನು ನಾವಿಲ್ಲಿ ನೋಡಬಹುದಾಗಿದೆ. ಗಮನಾರ್ಹವಾಗಿ, 5.4-ಇಂಚಿನ ಡಿಸ್ಪ್ಲೇ ಗಾತ್ರದ ಐಫೋನ್ 14 ಫೋನ್ ಮಿಂಗ್-ಚಿ ಕುವೊ ಅವರ ಪಟ್ಟಿಯಿಂದ ಹೊರಗಿರುವುದನ್ನು ಸಹ ನಾವು ಗಮನಿಸಬೇಕು. ಇದು ಆಪಲ್ ತನ್ನ "ಮಿನಿ" ಗಾತ್ರದ ಐಫೋನ್ ಅನ್ನು ಸ್ಥಗಿತಗೊಳಿಸಬಹುದೆಂಬ ಸಂಭಾವ್ಯ ಸಂಕೇತವಾಗಿದೆ. ಆಪಲ್ ತನ್ನ ಮುಂದಿನ ಐಫೋನ್ ಸರಣಿ ಸ್ಮಾರ್ಟ್‌ಫೋನ್‌ಗಳಿಂದ 'ಮಿನಿ' ಮಾದರಿಯನ್ನು ಹೊರಗಿಡಬಹುದು ಎಂಬ ವದಂತಿಗಳು ಈ ಮೊದಲು ಕೂಡ ಹರಡಿದ್ದನ್ನು ಸಹ ನಾವು ನೋಡಬಹುದು.
ನೂತನ iPhone 14 ಶ್ರೇಣಿಯ ಕುರಿತಂತೆ Apple ಇನ್ನೂ ಔಪಚಾರಿಕವಾಗಿ ಏನನ್ನು ಸಹ ಘೋಷಿಸಿಲ್ಲ. ಆದರೆ ಮುಂಬರುವ ಐಫೋನ್ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ, ಆಪಲ್ ತನ್ನ ಇತ್ತಿನ ಐಫೋನ್ ಸರಣಿಗಳಲ್ಲಿ ವೆನಿಲ್ಲಾ ಮಾದರಿ, ಮಿನಿ ರೂಪಾಂತರ, ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಸಾಧನಗಳು ಪ್ರೊಸೆಸರ್ ವಿಷಯದಲ್ಲಿ ಒಂದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದ್ದವು, ವಿಶೇಷವಾಗಿ ನಾವು iPhone 13 ಸರಣಿಯಲ್ಲಿ ನೋಡಿದಂತೆ, ಅದರ ಎಲ್ಲಾ ಮಾದರಿಗಳು A15 ಬಯೋನಿಕ್ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಗೊಂಡಿದ್ದವು. ಇವುಗಳ ನಡುವಿನ ವ್ಯತ್ಯಾಸವೆಂದರೆ ಅವುಗಳ ಗಾತ್ರ, ವಿನ್ಯಾಸ, ಕ್ಯಾಮೆರಾಗಳು ಮತ್ತು ಕೆಲವು ಇತರ ಅಂಶಗಳಾಗಿದ್ದುದ್ದರಿಂದ, ಇದೀಗ ನೂತನ iPhone 14 ಶ್ರೇಣಿಯ ಕುರಿತಂತೆ ಟೆಕ್ ಲೋಕದಲ್ಲಿ ಭಾರೀ ಕುತೂಹಲ ಮೂಡಿದೆ.
Iphone 14 Pro, Iphone 14 Pro Max To Get A16 Bionic Chipset.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am