ಬ್ರೇಕಿಂಗ್ ನ್ಯೂಸ್
22-03-22 07:53 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಟೆಕ್ ದೈತ್ಯ ಕಂಪೆನಿ ಸ್ಯಾಮ್‍ಸಂಗ್ ಕಂಪೆನಿಯು ಕೊನೆಯಿರದ ಮನರಂಜನೆಗಾಗಿ ಬಿಡುಗಡೆಮಾಡಿರುವ ನೂತನ ಪೋರ್ಟಬಲ್ ಪ್ರೊಜೆಕ್ಟರ್ 'ದಿ ಫ್ರೀಸ್ಟೈಲ್' ಸಾಧನದ ಪೂರ್ವ ಕಾಯ್ದಿರಿಸುವಿಕೆಯು ಇದೀಗ ಆರಂಭವಾಗಿದೆ. ಈ ವರ್ಷ ಜನವರಿಯಲ್ಲಿ ಸಿಇಎಸ್ 2022ರಲ್ಲಿ ಬಿಡುಗಡೆ ಕಂಡಿರುವ ಫ್ರೀಸ್ಟೈಲ್ ಪ್ರೊಜೆಕ್ಟರ್ ಭಾರತಕ್ಕೆ ಸದ್ಯದಲ್ಲೇ ಬರಲಿದೆ. ಗ್ರಾಹಕರು ಇದೇ ಮಾರ್ಚ್ 18 ರಿಂದ 28, 2022ರವರೆಗೆ ಸ್ಯಾಮ್‍ಸಂಗ್ ಕಂಪೆನಿಯ ಅಧಿಕೃತ ಆನ್‌ಲೈನ್ ಮಳಿಗೆಯಲ್ಲಿ ದಿ ಫ್ರೀಸ್ಟೈಲ್ ಪ್ರೊಜೆಕ್ಟರ್ ಸಾಧನವನ್ನು ಕಾಯ್ದಿರಿಸಬಹುದು ಎಂದು ಕಂಪೆನಿ ತಿಳಿಸಿದೆ.
ಸ್ಯಾಮ್‍ಸಂಗ್‌ನ ನೂತನ ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಸಾಧನವು ತನ್ನ ಆವಿಷ್ಕಾರಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದ್ದು, ಈ ಹೊಸ ಸಾಧನವು ಕೇವಲ 0.8 ಕೆಜಿ ತೂಕವಿದೆ. ಅಂದರೆ, ಒಂದೇ ಕೈಯಲ್ಲಿ ಎತ್ತಬಹುದಾದಷ್ಟು ಕಿರಿದಾಗಿರುವ ಈ ಸಾಧನವು 180 ಡಿಗ್ರಿಗಳಷ್ಟು ಪ್ರೊಜೆಕ್ಟ್ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಈ 'ದಿ ಫ್ರೀಸ್ಟೈಲ್' ಸಾಧನವು ಸ್ಯಾಮ್‍ಸಂಗ್ ಸ್ಮಾರ್ಟ್ ಟಿ.ವಿ.ಗಳಲ್ಲಿ ಲಭ್ಯವಿರುವ ಸ್ಮಾರ್ಟ್ ಫೀಚರ್ಸ್ ಕೂಡಾ ಹೊಂದಿದ್ದು, ಬಿಲ್ಟ್ ಇನ್ ಸರ್ಟಿಫೈಡ್ ಒಟಿಟಿ ಅಪ್ಲಿಕೇಷನ್ಸ್ ಹೊಂದಿದೆ ಎಂದು ಕಂಪೆನಿಯು ತಿಳಿಸಿದೆ.

ಪ್ರೊಜೆಕ್ಟರ್ಸ್ಯಾಮ್‍ಸಂಗ್ ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಸಾಧನದಲ್ಲಿ ಸ್ಮಾರ್ಟ್ ಕನೆಕ್ಟಿವಿಟಿಗೆ ಆಂಡ್ರಾಯಿಡ್ ಮತ್ತು ಐಒಎಸ್ ಮೊಬೈಲ್ ಡಿವೈಸ್‍ಗಳಿಂದ ಮಿರರಿಂಗ್ ಮತ್ತು ಕ್ಯಾಸ್ಟಿಂಗ್ ಸೌಲಭ್ಯಗಳು ಲಭ್ಯವಿವೆ. ಇದರೊಂದಿಗೆ ದಿ ಫ್ರೀಸ್ಟೈಲ್ ಆಂಬಿಯೆಂಟ್ ಮೋಡ್‍ನಲ್ಲಿ ಆಯಂಬಿಯೆನ್ಸ್ ನಿಗದಿಪಡಿಸುತ್ತದೆ ಮತ್ತು ಲೆನ್ಸ್ ಕ್ಯಾಪ್ ಬಳಸಿ ಪ್ರಿಸಂ ಎಫೆಕ್ಟ್ ನೀಡುತ್ತದೆ. ಇದರ 360-ಡಿಗ್ರಿ ಧ್ವನಿ ಗ್ರಾಹಕರು ಎಲ್ಲೇ ಇದ್ದರೂ ಸಿನಿಮಾ ಗುಣಮಟ್ಟದ ಧ್ವನಿ ಅನುಭವವನ್ನು ಆನಂದಿಸಲು ಅನುಮತಿಸುತ್ತದೆ ಎಂದು ಸ್ಯಾಮ್‌ಸಂಗ್ ಕಂಪೆನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಕಾರ್ಯಗಳನ್ನು ಆಧುನಿಕ ಜೀವನಶೈಲಿಗೆ ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಿದ್ದು, ಇದನ್ನು 2022ರ ಅತ್ಯಂತ ಗಮನಾರ್ಹ ಗ್ಯಾಡ್ಜೆಟ್‍ಗಳಲ್ಲಿ ಒಂದಾಗಿಸಿದೆ.! ಇದೇ ಮಾರ್ಚ್ 18 ರಿಂದ 28, 2022ರವರೆಗೆ ಆಸಕ್ತ ಗ್ರಾಹಕರು 2000 ರೂ.ಗಳನ್ನು ಪಾವತಿಸಿ ಸಾಧನವನ್ನು ಕಾಯ್ದಿರಿಸಬಹುದು ಮತ್ತು ಅಂತಿಮ ಖರೀದಿಯಲ್ಲಿ 4,000 ರೂ.ಗಳ ರಿಯಾಯಿತಿ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. ಫ್ರೀಸ್ಟೈಲ್ ಪ್ರೊಜೆಕ್ಟರ್ ಅನ್ನು ಪ್ರಿ-ರಿಸರ್ವ್ ಮಾಡಲು ಸ್ಯಾಮ್‌ಸಂಗ್ ಇಂಡಿಯಾದ ಅಧಿಕೃತ ಆನ್‌ಲೈನ್ ತಾಣಕ್ಕೆ ಭೇಟಿ ನೀಡಿ.
Samsung Opens Pre-Reserve For The Freestyle Portable Projector.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm