ಬ್ರೇಕಿಂಗ್ ನ್ಯೂಸ್
28-03-22 09:05 pm Source: Vijayakarnataka ಡಿಜಿಟಲ್ ಟೆಕ್
ಭಾರತದ ನಂ 1 ಟೆಲಿಕಾಂ ಕಂಪೆನಿ ಜಿಯೋ ಇತ್ತೀಚೆಗೆ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಸದಾಗಿ ಸೇರಿಸಿದ್ದು, ಜಿಯೋ ಗ್ರಾಹಕರು ಇದೀಗ 30 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಹೊಸದಾಗಿ ಸೇರ್ಪಡೆಗೊಳಿಸಿರುವ 259 ರೂ.ಗಳ ಯೋಜನೆಯನ್ನು ಆಯ್ದುಕೊಳ್ಳಬಹುದಾಗಿದೆ. ಟೆಲಿಕಾಂ ನಿಯಂತ್ರಣ ಮಂಡಳಿ ಟ್ರಾಯ್ ಇತ್ತೀಚಿಗಷ್ಟೇ ಟೆಲಿಕಾಂ ಕಂಪೆನಿಗಳಿಗೆ 30 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿರುವ ಕನಿಷ್ಟ ಒಂದು ಪ್ರೀಪೇಡ್ ಪ್ಲ್ಯಾನ್ ಅನ್ನು ನೀಡಬೇಕು ಎಂದು ಸೂಚಿಸಿತ್ತು. ಅದರಂತೆ, ಜಿಯೋ ಇದೀಗ 30 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ 259 ರೂ.ಗಳ ಪ್ರೀಪೇಡ್ ಯೋಜನೆಯನ್ನು ಸೇರಿಸಿದೆ. ಈ ಯೋಜನೆಯು ಜಿಯೋ ಗ್ರಾಹಕರಿಗೆ ಅತ್ಯುತ್ತಮ ಲಾಭವನ್ನು ಒದಗಿಸುವಂತೆ ಕಾಣುತ್ತಿದ್ದು, ಯೋಜನೆಯ ಲಾಭಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
30 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿರುವ ಜಿಯೋವಿನ ಹೊಸ 259 ರೂ. ಯೋಜನೆಯೊಂದಿಗೆ, ಇದೀಗ ಜಿಯೋ ಬಳಕೆದಾರರು ಪ್ರತಿದಿನ 1.5GB ದೈನಂದಿನ ಡೇಟಾ, ಪ್ರತಿದಿನ 100 SMS ಗಳು ಮತ್ತು ಅನಿಯಮಿತ ಧ್ವನಿ ಕರೆಯ ಲಾಭವನ್ನು ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ದೈನಂದಿನ ಡೇಟಾದ ಸಂಪೂರ್ಣ ಬಳಕೆಯ ನಂತರ ಇಂಟರ್‌ನೆಟ್ ವೇಗವು 64 Kbps ಗೆ ಇಳಿಯುತ್ತದೆ. ಇವಗಳ ಜೊತೆಯಲ್ಲಿ JioCinema, JioTV, JioCloud ಮತ್ತು JioSecurity ಸೇರಿದಂತೆ Jio ಅಪ್ಲಿಕೇಶನ್‌ಗಳನ್ನು ಬಳಕೆದಾರರಿಗೆ ಬಂಡಲ್‌ನಲ್ಲಿ ನೀಡಲಾಗುತ್ತದೆ. ಈ ಯೋಜನೆಯ ಪ್ರಮುಖ ವಿಶೇಷತೆಯೆಂದರೆ, ಮೊದಲೇ ಹೇಳಿದಂತೆ ಜಿಯೋ ಬಳಕೆದಾರರು ಈ ಯೋಜನೆಯೊಂದಿಗೆ 30 ದಿನಗಳ ಸಂಪೂರ್ಣ ತಿಂಗಳ ವ್ಯಾಲಿಡಿಟಿಯನ್ನು ಪಡೆಯಲಿದ್ದಾರೆ.
ಸಂಪೂರ್ಣ 30 ದಿನಗಳ ಸೇವಾ ಮಾನ್ಯತೆಯನ್ನು ಬಯಸುವ ಜಿಯೋ ಬಳಕೆದಾರರಿಗೆ ಇದು ಉತ್ತಮ ಪ್ರಿಪೇಯ್ಡ್ ಯೋಜನೆಯಾಗಿದೆ. ಆದರೆ, ಇದೇ ಪ್ರಯೋಜನಗಳೊಂದಿಗೆ ಮತ್ತು 28 ದಿನಗಳ ಸೇವಾ ಮಾನ್ಯತೆಯೊಂದಿಗೆ ಲಭ್ಯವಿರುವ ಜಿಯೋವಿನ ಯೋಜನೆಯ ಬೆಲೆ ಕಡಿಮೆ ಇರುವುದನ್ನು ನಾವು ನೋಡಬಹುದು. ಪ್ರತಿದಿನ 1.5GB ದೈನಂದಿನ ಡೇಟಾ, ಪ್ರತಿದಿನ 100 SMS ಗಳು ಮತ್ತು ಅನಿಯಮಿತ ಧ್ವನಿ ಕರೆಯ ಲಾಭವನ್ನು ಹೊಂದಿರುವ ಹಾಗು 28 ದಿನಗಳ ಸೇವಾ ಮಾನ್ಯತೆಯೊಂದಿಗೆ ಲಭ್ಯವಿರುವ ಜಿಯೋವಿನ ಯೋಜನೆಗೆ ಬಳಕೆದಾರರು 239 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಕೇವಲ 20 ರೂ.ಗಳನ್ನು ಹೆಚ್ಚು ಪಾವತಿಸುವ ಮೂಲಕ ಬಳಕೆದಾರರು ಸಂಪೂರ್ಣ 30 ದಿನಗಳವರೆಗೆ ಪ್ರಯೋಜನಗಳನ್ನು ಪಡೆಯುವುದು ಸ್ವಲ್ಪ ಲಾಭದಾಯಕ ಎಂದು ನಾವು ತಿಳಿಯಬಹುದು.
259 ರೂ.ಗಳ ಈ ಹೊಸ ಪ್ರಿಪೇಯ್ಡ್ ಪ್ಲಾನ್ ಜೊತೆಗೆ, ಜಿಯೋ 555 ರೂ.ಗಳ ಪ್ರಿಪೇಯ್ಡ್ ಯೋಜನೆಯೊಂದನ್ನು ಸಹ ಪರಿಚಯಿಸಿದೆ. ಈ 555 ರೂ. ಯೋಜನೆಯೊಂದಿಗೆ ಬಳಕೆದಾರರು 55 ದಿನಗಳವರೆಗೆ 55GB ಡೇಟಾವನ್ನು ಪಡೆಯಲಿದ್ದಾರೆ. ಇದು ಡೇಟಾ-ಮಾತ್ರ ಯೋಜನೆಯಾಗಿದ್ದು, ಬಳಕೆದಾರರು ಈ ಯೋಜನೆಯೊಂದಿಗೆ ಧ್ವನಿ ಕರೆ ಮತ್ತು SMS ಪ್ರಯೋಜನಗಳನ್ನು ಪಡೆಯುವುದಿಲ್ಲ ಎಂಬುದನ್ನು ಗಮನಿಸಿ. ಆದರೆ, ಯೋಜನೆಯೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ನ ಓವರ್-ದಿ-ಟಾಪ್ (OTT) ಚಂದಾದಾರಿಕೆ ಸಿಗುತ್ತದೆ. ಇದು 55 ದಿನಗಳ ಯೋಜನೆಯಾಗಿರುವುದರಿಂದ, ಬೇಸ್ ಪ್ರಿಪೇಯ್ಡ್ ಪ್ಲಾನ್‌ನ ಮುಕ್ತಾಯದ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂಬುದನ್ನು ಗಮನಿಸಿ. ಹಾಗಾಗಿ, ಈ ಯೋಜನೆಯನ್ನು ಡೇಟಾ ಬೂಸ್ಟರ್ ಆಗಿಯೂ ಕೂಡ ಗ್ರಾಹಕರು ಆಯ್ದುಕೊಳ್ಳಬಹುದು.
Reliance Jio Prepaid Plan For Users Who Want 1 Month Complete Validity.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm