ಬ್ರೇಕಿಂಗ್ ನ್ಯೂಸ್
16-04-22 09:30 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಚೀನಾ ಮೂಲಕ ಕಂಪೆನಿ Infinix ಇದೀಗ ದೇಶದಲ್ಲಿ ತನ್ನ ನೂತನ Infinix Hot 11 2022 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದ Infinix Hot 11 ಸ್ಮಾರ್ಟ್‌ಫೋನಿನ ಉತ್ತರಾಧಿಕಾರಿಯಾಗಿ ನೂತನ Infinix Hot 11 2022 ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದ್ದು, ಡ್ಯುಯಲ್ ಪ್ರೈಮರಿ ಕ್ಯಾಮೆರಾ ಮಾಡ್ಯೂಲ್, 6.7-ಇಂಚಿನ ದೊಡ್ಡ ಡಿಸ್‌ಪ್ಲೇ ಹಾಗೂ 5,000 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ವೈಶಿಷ್ಟ್ಯಗಳನ್ನು ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದೇ ಏಪ್ರಿಲ್ 22 ರಂದು ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಮಾರಾಟಕ್ಕೆ ಬರುತ್ತಿರುವ ನೂತನ Infinix Hot 11 2022 ಸ್ಮಾರ್ಟ್‌ಫೋನಿನ ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ನೂತನ Infinix Hot 11 2022 ಸ್ಮಾರ್ಟ್‌ಫೋನ್ 6.7-ಇಂಚಿನ ಪೂರ್ಣ HD+ IPS LCD ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಪಾಂಡಾ ಕಿಂಗ್ ಗ್ಲಾಸ್ ರಕ್ಷಣೆಯನ್ನು ಪಡೆದಿದೆ. ಈ ಸಾಧನದಲ್ಲಿ ಆಕ್ಟಾ-ಕೋರ್ UNISOC T610 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಈ ಪ್ರೊಸೆಸರ್ ಅನ್ನು 4GB RAM ಮತ್ತು 64GB ವಿಸ್ತರಿಸಬಹುದಾದ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ನೂತನ Infinix Hot 11 2022 ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 11 ಜೊತೆಗೆ XOS 7.6 ಮೂಲಕ ಕೆಲಸ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ, ಸ್ಮಾರ್ಟ್‌ಫೋನಿನ ಭದ್ರತೆಗಾಗಿ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ತರಲಾಗಿದೆ ಮತ್ತು ಸಾಮಾನ್ಯ 10W ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಬ್ಯಾಟರಿಯನ್ನು ಸಹ ನಾವು ಈ ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು.
ಕ್ಯಾಮೆರಾ ವಿಭಾಗದಲ್ಲಿ, ನೂತನ Infinix Hot 11 2022 ಸ್ಮಾರ್ಟ್‌ಫೋನ್ f/1.8 ಅಪಾರ್ಚನೊಂದಿಗೆ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾವಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಜೊತೆಗೆ f/2.4 ಅಪಾರ್ಚನೊಂದಿಗೆ 2MP ಡೆಪ್ತ್ ಸೆನ್ಸರ್ ಅನ್ನು ಒಳಗೊಂಡಿದೆ..ಸೆಲ್ಫಿ ಮತ್ತು ವೀಡಿಯೊ ಕರೆ ಉದ್ದೇಶಗಳಿಗಾಗಿ, ಸಾಧನದ ಮುಂಭಾಗದಲ್ಲಿ f/2.0 ಅಪಾರ್ಚನೊಂದಿಗೆ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. Infinix Hot 11 2022 ಸ್ಮಾರ್ಟ್‌ಫೋನಿನ ಸಂಪರ್ಕ ಆಯ್ಕೆಗಳಲ್ಲಿ 4G VoLTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.1, A-GPS ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ. ಅರೋರಾ ಗ್ರೀನ್, ಪೋಲಾರ್ ಬ್ಲ್ಯಾಕ್ ಮತ್ತು ಸನ್‌ಸೆಟ್ ಗೋಲ್ಡ್ ಬಣ್ಣ ರೂಪಾಂತರಗಳಲ್ಲಿ Infinix Hot 11 2022 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲಾಗಿದೆ.
ನೂತನ Infinix Hot 11 2022 ಸ್ಮಾರ್ಟ್‌ಫೋನಿನ ಬೆಲೆ 8,999 ರೂ.ಗಳಾಗಿದ್ದು, ಈ ಸ್ಮಾರ್ಟ್‌ಫೋನ್ ಮೊದಲ ಬಾರಿಗೆ ಏಪ್ರಿಲ್ 22 ರಂದು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಸ್ಮಾರ್ಟ್‌ಫೋನಿನ ಉಡಾವಣಾ ಕೊಡುಗೆಗಳ ಭಾಗವಾಗಿ, Flipkart ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇ. 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಅನ್ನು ನೀಡಲಾಗುತ್ತಿದೆ. ಹಾಗೂ Infinix Hot 11 2022 ಸ್ಮಾರ್ಟ್‌ಫೋನ್ನು ಖರಿದಿಸುವ ಗ್ರಾಹಕರು, Google Next Hub ಮತ್ತು Nest Mini ಸಾಧನಗಳನ್ನು ಕ್ರಮವಾಗಿ 4,999 ರೂ. ಹಾಗೂ 1,999 ರೂ.ಗಳ ರಿಯಾಯಿತಿಯಲ್ಲಿ ಪಡೆಯಬಹುದು. ಭಾರತೀಯ ಮಾರುಕಟ್ಟೆಯಲ್ಲಿ Xiaomi Redmi 9 Prime ಮತ್ತು Samsung Galaxy M12 ಗಳ ವಿರುದ್ಧ ಸ್ಪರ್ಧಿಸಲಿರುವ ಈ ಸ್ಮಾರ್ಟ್‌ಫೋನ್ ಪ್ರೀಮಿಯಂ ಲುಕ್ ಹೊಂದುವ ಜೊತೆಗೆ ಹೆಚ್ಚು ಸ್ಲಿಮ್ ಆಗಿದೆ.
Infinix Hot 11 2022 Launched In India Check Price.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm