ಬ್ರೇಕಿಂಗ್ ನ್ಯೂಸ್
21-04-22 10:54 pm Source: Vijayakarnataka ಡಿಜಿಟಲ್ ಟೆಕ್
Lenovo ಒಡೆತನದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Moto ತನ್ನ ನೂತನ Moto G52 ಸ್ಮಾರ್ಟ್‌ಫೋನ್ ಅನ್ನು ಭಾರತದ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇತ್ತೀಚಿಗಷ್ಟೇ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದ ತನ್ನ ನೂತನ Moto G52 ಸ್ಮಾರ್ಟ್‌ಫೋನ್ ಅನ್ನು ಇದೇ ಏಪ್ರಿಲ್ 25 ರಂದು ದೇಶದ ಮಾರುಕಟ್ಟೆಗೆ ತರುತ್ತಿರುವ ಬಗ್ಗೆ Moto ಕಂಪೆನಿ ಅಧಿಕೃತವಾಗಿ ದೃಢಪಡಿಸಿದೆ. ಈ ಬಗ್ಗೆ ಟೀಸರ್ ವೀಡಿಯೊವೊಂದನ್ನು ಹೊಂಚಿಕೊಂಡಿರುವ Moto ಕಂಪೆನಿಯು, ದೇಶದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬರಲಿರುವ Moto G52 ಸ್ಮಾರ್ಟ್‌ಫೋನ್ ಜನಪ್ರಿಯ ಇ-ಕಾಮರ್ಸ್ ಜಾಲತಾಣ Flipkart ಮೂಲಕ ಖರೀದಿಗೆ ಲಭ್ಯವಿರಲಿದೆ ಎಂಬುದನ್ನು ಟೀಸರ್ ವೀಡಿಯೊದ ಮೂಲಕ ಖಚಿತಪಡಿಸಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಅದೇ Moto G52 ಸ್ಮಾರ್ಟ್‌ಪೋನ್ ಅದೇ ವೈಶಿಷ್ಟ್ಯಗಳೊಂದಿಗೆ ದೇಶದಲ್ಲಿಯೂ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ರಂಧ್ರ-ಪಂಚ್ ಕಟೌಟ್ ವಿನ್ಯಾಸದಲ್ಲಿರುವ 6.6-ಇಂಚಿನ OLED ಡಿಸ್ಪ್ಲೇ ಜೊತೆಗೆ 1080x2400 ಪಿಕ್ಸೆಲ್‌ಗಳ ಪೂರ್ಣ HD+ ರೆಸಲ್ಯೂಶನ್ ಅನ್ನು Moto G52 ಸ್ಮಾರ್ಟ್‌ಪೋನ್ ಹೊಂದಿದೆ. ಇದರ ಪ್ರದರ್ಶನವು 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ ಮತ್ತು 20:9 ಆಕಾರ ಅನುಪಾತವನ್ನು ಹೊಂದಿದೆ. Moto G52 ಫೋನ್ Qualcomm Snapdragon 680 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಪ್ರೊಸೆಸರ್ ಅನ್ನು 6GB RAM ಜೊತೆಗೆ 256GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಆಂತರಿಕ ಸಂಗ್ರಹಣೆಯನ್ನು SD ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.
Moto G52 ಸ್ಮಾರ್ಟ್‌ಪೋನ್ ಬಾಕ್ಸ್‌ನ ಹೊರಗಿನ MyUX ಸ್ಕಿನ್ Android 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಈ ಸಾಧನವು 5000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು, 30W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. Moto G52 ಸ್ಮಾರ್ಟ್‌ಫೋನ್ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸರ್ ಸಾಮರ್ಥ್ಯದ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. Dolby Atmos ಬೆಂಬಲದೊಂದಿಗೆ ಸ್ಮಾರ್ಟ್ಫೋನ್ ಡ್ಯುಯಲ್ ಸ್ಪೀಕರ್ಗಳೊಂದಿಗೆ ಬಂದಿರುವ ಈ ಸ್ಮಾರ್ಟ್‌ಫೋನ್ ನೀರಿನ ಪ್ರತಿರೋಧಕ್ಕಾಗಿ IP52-ರೇಟೆಡ್ ಸಾಮರ್ಥ್ಯವನ್ನು ಸಹ ಹೊಂದಿರುವುದನ್ನು ನಾವು ನೋಡಬಹುದು.
ಯುರೋಪ್‌ನಲ್ಲಿ Moto G52 ಸ್ಮಾರ್ಟ್‌ಫೋನನ್ನು ಎರಡು RAM ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಯುರೋಪ್‌ನಲ್ಲಿ Moto G52 ಸ್ಮಾರ್ಟ್‌ಫೋನ್ನನು EUR 249 ರ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ತರಲಾಗಿತ್ತು. ಇದನ್ನು ಭಾರತದ ರೂಪಾಯಿಗೆ ಹೋಲಿಸಿದರೆ, ಇದು ಸರಿಸುಮಾರು 20,600 ರೂ. ಗಳಾಷ್ಟಾಗುತ್ತದೆ. ಹಾಗಾಗಿ, ಭಾರತದಲ್ಲಿ ನೂತನ Moto G52 ಸ್ಮಾರ್ಟ್‌ಫೋನ್‌ನ ಬೆಲೆಯು 20,000 ರೂ.ಗಳಾಗಿರಬಹುದು ಅಥವಾ 20,000 ಸಾವಿರಗಳಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಬಹುದು. ಆದರೆ, Moto ಕಂಪನಿಯು ಭಾರತದಲ್ಲಿ ಎರಡು ರೂಪಾಂತರಗಳಲ್ಲಿ Moto G52 ಸ್ಮಾರ್ಟ್‌ಫೋನನ್ನು ಪರಿಚಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ.
Moto G52 Officially Confirmed To Launch In India.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am