ಬ್ರೇಕಿಂಗ್ ನ್ಯೂಸ್
02-05-22 07:57 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ದೇಶದಲ್ಲಿ ಕಳೆದ ವಾರವಷ್ಟೇ ಬಿಡುಗಡೆ ಮಾಡಿರುವ ನೂತನ Xiaomi 12 Pro ಸ್ಮಾರ್ಟ್‌ಫೋನ್ ಅನ್ನು ಇಂದು(ಮೇ 2) ಮೊದಲ ಬಾರಿಗೆ ಮಾರಾಟ ಮಾಡಲಾಗುತ್ತಿದೆ. ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಅಮೆಜಾನ್ ಇಂಡಿಯಾ ಹಾಗೂ ಕಂಪೆನಿಯ ಅಫಿಷಿಯಲ್ ವೆಬ್‌ಸೈಟ್ Mi.com ನಲ್ಲಿ Xiaomi 12 Pro ಸ್ಮಾರ್ಟ್‌ಫೋನ್ ಅನ್ನು ಇಂದು ಎಸ್‌ಕ್ಲೂಸಿಮ್ ಮಾರಾಟಕ್ಕೆ ಇಡಲಾಗಿದ್ದು, ಆರಂಭಿಕ ಬೆಲೆ ಕಡಿತ ಹಾಗೂ ತ್ವರಿತ ರಿಯಾಯಿತಿ ಬೆಲೆಗಳಲ್ಲಿ Xiaomi 12 Pro ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. Xiaomi 12 Pro ಸ್ಮಾರ್ಟ್‌ಪೋನಿನ ಮೂಲ 8GB RAM ಮಾದರಿಯು 62,999 ರೂ.ಗಳಿಗೆ ಬಿಡುಗಡೆಯಾಗಿದ್ದರೆ, 12GB RAM ರೂಪಾಂತರದ ಪೋನ್ 66,999 ರೂ.ಗಳಿಗೆ ಬಿಡುಗಡೆಯಾಗಿದೆ. ಆದರೆ, ಪರಿಚಯಾತ್ಮಕ ಕೊಡುಗಯಾಗಿ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ 4,000 ರೂ.ಗಳ ಸೀಮಿತ ರಿಯಾಯಿತಿ ಹಾಗೂ ICICI ಬ್ಯಾಂಕ್ ಕಾರ್ಡ್ ಅಥವಾ EMI ಆಯ್ಕೆಗಳನ್ನು ಬಳಸಿಕೊಂಡು ಫೋನ್ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ 6,000 ರೂ. ರಿಯಾಯಿತಿಯನ್ನು ಪಡೆಯಲಿದ್ದಾರೆ.
ಇಷ್ಟೇ ಅಲ್ಲದೇ, Xiaomi 12 Pro ಸ್ಮಾರ್ಟ್‌ಫೋನಿನ ಜೊತೆಗೆ ನಿಮ್ಮ ಹಳೆಯ Xiaomi/Redmi ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳಿ ಮತ್ತು ರೂ 20,000* (ಸೀಮಿತ ಅವಧಿಯ ಕೊಡುಗೆ) ವರೆಗೆ 100% ರಿಯಾಯಿತಿ ಪಡೆಯಿರಿ ಎಂದು Xiaomi ತಿಳಿಸಿದೆ. ಈ ಮೂಲಕ 62,999 ರೂ.ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿರುವ Xiaomi 12 Pro 5 ಸ್ಮಾರ್ಟ್‌ಫೋನ್ ಅನ್ನು ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಬೆಲೆಗಳಲ್ಲಿ 32,999 ರೂ.ಗಳ ಆಕರ್ಷಕ ದರದಲ್ಲಿ ಖರೀದಿಸಬಹುದಾಗಿದೆ. ಇನ್ನು ಕಳೆದ ವಾರವಷ್ಟೇ Xiaomi ಕಂಪೆನಿ ಆಯೋಜಿಸಿದ್ದ Xiaomi Next ಈವೆಂಟ್‌ನಲ್ಲಿ ಪ್ರಿಮಿಯಂ ವೈಶಿಷ್ಟ್ಯಗಳೊಂದಿಗೆ Xiaomi 12 Pro ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ. 6.72-ಇಂಚಿನ WQHD+ AMOLED ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್, 12GB RAM, 120W ವೇಗದ ವೈರ್ಡ್ ಮತ್ತು 50W ವೇಗದ ವೈರ್‌ಲೆಸ್ ಚಾರ್ಜಿಂಗ್ ನಂತಹ ಆಕರ್ಷಕ ವೈಶಿಷ್ಟ್ಯಗಳಲ್ಲಿ Xiaomi 12 Pro ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿರುವ Xiaomi ಕಂಪೆನಿ ಒನ್‌ಪ್ಲಸ್, ಸ್ಯಾಮ್‌ಸಂಗ್ ಮತ್ತು ಆಪಲ್ ಐಫೋನ್‌ಗಳಿಗೆ ಸೆಡ್ಡುಹೊಡೆಯಲು ಮುಂದಾಗಿದೆ. ದೇಶದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಯನ್ನು ತರಬಹುದಾದಂತಹ ನೂತನ Xiaomi 12 Pro ಸ್ಮಾರ್ಟ್‌ಫೋನ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ದೇಶದ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ನಿಡಿರುವ ಡ್ಯುಯಲ್-ಸಿಮ್ (ನ್ಯಾನೊ) ಸಾಮರ್ಥ್ಯದ ನೂತನ Xiaomi 12 Pro ಸ್ಮಾರ್ಟ್‌ಫೋನ್ MIUI 13 ಜೊತೆಗೆ ಆಂಡ್ರಾಯ್ಡ್ 12 ನಲ್ಲಿ ಕೆಲಸ ಮಾಡಲಿದೆ ಎಂದು Xiaomi ತಿಳಿಸಿದೆ. ಡೈನಾಮಿಕ್ ರಿಫ್ರೆಶ್ ರೇಟ್ ನೀಡಲು ಎರಡನೇ ತಲೆಮಾರಿನ LTPO ತಂತ್ರಜ್ಞಾನವನ್ನು ಆಧರಿಸಿದ 6.72-ಇಂಚಿನ WQHD+ (1,440x3,200 ಪಿಕ್ಸೆಲ್‌ಗಳು) E5 AMOLED ಡಿಸ್‌ಪ್ಲೇಯನ್ನು ಹೊಂದಿರುವ Xiaomi 12 Pro ಸ್ಮಾರ್ಟ್‌ಫೋನ್, 120Hz ರಿಪ್ರೆಶ್ ರೇಟ್, 1,500 nits ವರೆಗಿನ ಗರಿಷ್ಠ ಹೊಳಪು ಮತ್ತು Dolby Vision ಮತ್ತು HDR10+ ಗೆ ಬೆಂಬಲವನ್ನು ಒಳಗೊಂಡಿದೆ ಮತ್ತು ಈ ಸ್ಮಾರ್ಟ್‌ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಸುರಕ್ಷತೆಯನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಹುಡ್ ಅಡಿಯಲ್ಲಿ, Xiaomi 12 Pro ಸ್ಮಾರ್ಟ್‌ಫೋನಿನಲ್ಲಿ ಶಕ್ತಿಯುತವಾದ octa-core Snapdragon 8 Gen 1 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ Adreno 730 GPU, 12GB ವರೆಗೆ LPDDR5 RAM ಮತ್ತು 256GB UFS 3.1 ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.
ಕ್ಯಾಮೆರಾ ವೈಶಿಷ್ಟ್ಯಗಳಲ್ಲಿ, ನೂತನ Xiaomi 12 Pro ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ f/1.8 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ Sony IMX707 ಪ್ರಾಥಮಿಕ ಕ್ಯಾಮೆರಾ, ಜೊತೆಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 50-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಗಳನ್ನು ಒಳಗೊಂಡಿದೆ. ಹಿಂದಿನ ಕ್ಯಾಮೆರಾಗಳು 24fps ಫ್ರೇಮ್ ದರದಲ್ಲಿ 8K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸಲಿದ್ದು, ಇದು Xiaomi ProFocus, ಪೋರ್ಟ್ರೇಟ್ ನೈಟ್ ಮೋಡ್, ಪೋರ್ಟ್ರೇಟ್ HDR ಮತ್ತು ಫೋಟೋ ಕ್ಲೋನ್ಸ್‌ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ವೀಡಿಯೊ ರೆಕಾರ್ಡಿಂಗ್ ವೈಶಿಷ್ಟ್ಯಗಳಾಗಿ Xiaomi ProFocus ಮೋಷನ್ ಟ್ರ್ಯಾಕಿಂಗ್ ಫೋಕಸ್, ಅಲ್ಟ್ರಾ ನೈಟ್ ವೀಡಿಯೊ, ಒನ್ ಕ್ಲಿಕ್ AI ಸಿನಿಮಾ ಮತ್ತು ಸಿನಿಮಾಟಿಕ್ ವೀಡಿಯೊ ಫಿಲ್ಟರ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, Xiaomi 12 Pro ಮುಂಭಾಗದಲ್ಲಿ f/2.45 ಲೆನ್ಸ್‌ನೊಂದಿಗೆ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.Xiaomi 12 Pro ಸ್ಮಾರ್ಟ್‌ಫೋನಿನಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS/ NavIC, ಇನ್ಫ್ರಾರೆಡ್ (IR) ಬ್ಲಾಸ್ಟರ್, NFC, ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳು ಸೇರಿವೆ. ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್, ಬ್ಯಾರೋಮೀಟರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಒಳಗೊಂಡಿರುವ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಬಿಡುಗಡೆಯಾಗಿದೆ. ಇನ್ನು Xiaomi 12 Pro ಸ್ಮಾರ್ಟ್‌ಫೋನ್ 4,600mAh ಸಾಮರ್ಥ್ಯದ Li-Polymer ಬ್ಯಾಟರಿಯನ್ನು ಹೊಂದಿದ್ದು, ಇದು 120W Xiaomi ಹೈಪರ್ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಕ್ವಿಕ್ ಚಾರ್ಜ್ 4, ಕ್ವಿಕ್ ಚಾರ್ಜ್ 3+ ಮತ್ತು ಪವರ್ ಡೆಲಿವರಿ 3.0 ಚಾರ್ಜಿಂಗ್ ನಂತಹ ವಿವಿಧ ಆಯ್ಕೆಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಈ ಸ್ಮಾರ್ಟ್‌ಫೋನ್ 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ.
Xiaomi 12 Pro To Go On First Sale Today In India At 12 Pm.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:23 pm
HK News Desk
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm