ಬ್ರೇಕಿಂಗ್ ನ್ಯೂಸ್
03-05-22 07:49 pm Source: Vijayakarnataka ಡಿಜಿಟಲ್ ಟೆಕ್
ವಿಶ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ WhatsApp ನಲ್ಲಿ ಬಳಕೆದಾರರ ಅನುಭವವನ್ನು ಸರಳಗೊಳಿಸುವ ಮತ್ತೊಂದು ವಿಶೇಷ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದ್ದು, ಇದೀಗ whatsapp status ನಲ್ಲಿ ಎಮೋಜಿಗಳ ಮೂಲಕ ಇನ್‌ಸ್ಟಂಟ್ ಪ್ರತಿಕ್ರಿಯಿಸಬಹುದಾದ ಆಯ್ಕೆಯನ್ನು ತರಲಾಗುತ್ತಿದೆ ಎಂದು ತಿಳಿದುಬಂದಿದೆ. WhatsApp ಸಂದೇಶಗಳಿಗೆ ಎಮೋಜಿಗಳ ಮೂಲಕ ಪ್ರತಿಕ್ರಿಯಿಸುವಂತಹ ವೈಶಷ್ಟ್ಯದಲ್ಲಿ WhatsApp ಕಾರ್ಯನಿರ್ವಹಿಸುತ್ತಿದೆ. ಇದೇ ವೇಳೆಗೆ whatsapp statusನಲ್ಲಿ ಎಮೋಜಿಗಳ ಮೂಲಕ ಇನ್‌ಸ್ಟಂಟ್ ರಿಪ್ಲೆ ಮಾಡಬಹುದಾದ ಆಯ್ಕೆಯನ್ನು ತರಲಾಗುತ್ತಿದೆ ಎಂದು WhatsAppನ ಬೀಟಾ ಟ್ರ್ಯಾಕರ್ WABetaInfo ವರದಿ ಮಾಡಿದೆ.
WABetaInfo ವರದಿ ಮಾಡಿರುವಂತೆ, "ಯಾವುದೇ ಎಮೋಜಿಯೊಂದಿಗೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಸೇರಿಸುವ ಮೂಲಕ ಸಂದೇಶ ಪ್ರತಿಕ್ರಿಯೆಗಳ ಹೊಸ ಆವೃತ್ತಿಯನ್ನು ತರುವಲ್ಲಿ WhatsApp ಕಾರ್ಯನಿರ್ವಹಿಸುತ್ತಿರುವಾಗ, ಕಂಪನಿಯು ಈಗ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಅದೇ ತ್ವರಿತ ಪ್ರತಿಕ್ರಿಯೆಗಳು.!" WhatsAppನಲ್ಲಿ ಸ್ಟೇಟಸ್ ಅಪ್‌ಡೇಟ್ ವೀಕ್ಷಿಸುವಾಗ ಎಮೋಜಿ ಮೂಲಕ ನಾವು ಪ್ರತಿಕ್ರಿಯಿಸುವ ವೈಶಿಷ್ಟ್ಯವು ಸಿಗಲಿದೆ ಎಂದು ಹೇಳಿದೆ. ಪ್ರಸ್ತುತ Instagram ಸ್ಟೋರಿಗಳಿಗೆ ಎಮೋಜಿಗಳ ಮೂಲಕ ರಿಪ್ಲೇ ಮಾಡಬಹುದಾದ ಆಯ್ಕೆಯ ರೀತಿಯಲ್ಲೇ ಈ ವೈಶಿಷ್ಟ್ಯವು ಕೂಡ ಇರಲಿದೆ ಎಂದು WABetaInfo ತಿಳಿಸಿದೆ.
ಅಭಿವೃದ್ಧಿ ಹಂತದಲ್ಲಿರುವ ಈ ಹೊಸ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು WABetaInfo ಹಂಚಿಕೊಂಡಿದ್ದು, ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ನಲ್ಲಿ ಕಾಣುವಂತೆ WhatsApp ಬಳಕೆದಾರರು WhatsApp status ಗಳನ್ನು ನೋಡುವಾಗ ಕೇವಲ ಟಕ್ಸ್ಟ್ ಬಾಕ್ಸ್‌ನ ಬದಲಿಗೆ ಬಾಕ್ಸ್‌ನ ಮೇಲೆ ಎಮೋಜಿಗಳನ್ನು ಕಾಣುತ್ತಾರೆ. WhatsApp ಡೆಸ್ಕ್‌ಟಾಪ್‌ನಿಂದ whatsapp status ನಲ್ಲಿ ಕಾಣುವಂತೆ WhatsApp 8 ಹೊಸ ಎಮೋಜಿಗಳನ್ನು ಸೇರಿಸಲು ಯೋಜಿಸುತ್ತಿದೆ ಎಂದು ತಿಳಿಯಬಹುದಾಗಿದೆ. ಆದರೆ, ಈ ವೈಶಿಷ್ಟ್ಯವು ಈಗಿನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡುವ ಸಮಯದ ಬಗ್ಗೆ WhatsApp ನಿಂದ ಯಾವುದೇ ಅಧಿಕೃತ ಮಾಹಿತಿಯು ಲಭ್ಯವಿಲ್ಲ.
ಇನ್ನು ಭಾರತದಲ್ಲಿ ತನ್ನ ಪಾವತಿ ಸೇವೆಯನ್ನು ಜನಪ್ರಿಯಗೊಳಿಸುವ ಸಲುವಾಗಿ, ದೇಶದ UPI ಪಾವತಿ ಸೇವೆ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ಬಹುಮಾನಗಳನ್ನು ಪರಿಚಯಿಸಲು WhatsApp ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಭಾರತ ದೇಶದಲ್ಲಿ 100 ಮಿಲಿಯನ್ ಅಥವಾ 10 ಕೋಟಿ ಬಳಕೆದಾರರಿಗೆ ತನ್ನ ಪಾವತಿ ಸೇವೆಯನ್ನು ವಿಸ್ತರಿಸಲು WhatsApp ಸಂಸ್ಥೆ ಇತ್ತೀಚಿಗಷ್ಟೇ ಅನುಮತಿಯನ್ನು ಪಡೆದುಕೊಂಡಿದ್ದು, ಇದರ ಭಾಗವಾಗಿ ಈ ಬೆಳವಣಿಗೆ ಕಂಡುಬಂದಿದೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ, WhatsApp ಗಾಗಿ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಲ್ಲಿ ಹೆಚ್ಚುವರಿ 60 ಮಿಲಿಯನ್ ಬಳಕೆದಾರರಿಗೆ ತನ್ನ ಅನುಮತಿಯನ್ನು ನೀಡಿದ್ದನ್ನು ನಾವು ಗಮನಿಸಬಹುದು.
Whatsapp To Bring Quick Emoji Reactions To Status Updates.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:23 pm
HK News Desk
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm