ಬ್ರೇಕಿಂಗ್ ನ್ಯೂಸ್
07-05-22 07:59 pm Source: Vijayakarnataka ಡಿಜಿಟಲ್ ಟೆಕ್
ಭಾರತದಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಷ್ಟೇ ಬಿಡುಗಡೆಯಾಗಿರುವ 44MP Eye AF ಡ್ಯುಯಲ್ ಸೆಲ್ಫಿ ಕ್ಯಾಮರಾ ಸಾಮರ್ಥ್ಯದ Vivo V23e 5G ಸ್ಮಾರ್ಟ್‌ಫೋನ್ ಅನ್ನು ಇದೀಗ 5,000 ರೂ.ಗಳ ಸೀಮಿತ ಅವಧಿಯ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ದೇಶದಲ್ಲಿ 25,990 ರೂ.ಗಳ ಬೆಲೆಯಲ್ಲಿ ಏಕೈಕ 8GB RAM ಮತ್ತು 128GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆಗೊಂಡಿದ್ದ Vivo V23e 5G ಸ್ಮಾರ್ಟ್‌ಫೋನ್ ಮೇಲೆ 5,000 ರೂ.ಗಳ ಬ್ಯಾಂಕ್ ರಿಯಾಯಿತಿಯನ್ನು ಪ್ರಕಟಿಸಲಾಗಿದ್ದು, ICICI , IDFC ಮತ್ತು SBI ಬ್ಯಾಂಕ್ ಕಾರ್ಡ್‌ಳನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್ ಅನ್ನು ಖರೀದಿಸುವ ಗ್ರಾಹಕರು 5,000 ರೂ. ಕ್ಯಾಶ್‌ಬ್ಯಾಕ್ ಅನ್ನು ಪಡೆಯಲಿದ್ದಾರೆ ಎಂದು Vivo ಕಂಪೆನಿ ತಿಳಿಸಿದೆ. ಆದರೆ, ಈ ಕೊಡುಗೆಯು ಇದೇ ಮೇ 10 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು Vivo ಹೇಳಿದೆ.
ಜನಪ್ರಿಯ ಮೊಬೈಲ್ ತಯಾರಿಕಾ ಕಂಪೆನಿ Vivo ತನ್ನ 44-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ Vivo V23e ಸ್ಮಾರ್ಟ್‌ಫೋನನ್ನು ದೇಶದಲ್ಲಿ ಅತ್ಯುತ್ತಮ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಐಫೋನ್ 12 ಮತ್ತು ಐಫೋನ್ 13 ಸರಣಿಗಳಿಂದ ಪ್ರೇರಿತವಾದ ಫ್ಲಾಟ್-ಎಡ್ಜ್ ವಿನ್ಯಾಸದಲ್ಲಿ, 44-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 6.44-ಇಂಚಿನ AMOLED ಡಿಸ್‌ಪ್ಲೇ ಮತ್ತು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 4,050mAh ಬ್ಯಾಟರಿ ಸಾಮರ್ಥ್ಯದಲ್ಲಿ Vivo V23e ಸ್ಮಾರ್ಟ್‌ಫೋನ್ ಎಂಟ್ರಿ ನೀಡಿತ್ತು. ಇದೀಗ ರಿಯಾಯಿತಿ ಬೆಲೆಯ ನಂತರ 20,990 ರೂ. ಬೆಲೆಯಲ್ಲಿ Vivo V23e 5G ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಪ್ರಸ್ತುತ ಯೋಗ್ಯ ಬೆಲೆಯಲ್ಲಿ ಉತ್ತಮ ಖರೀದಿಯಂತೆ ಕಾಣಿಸುತ್ತಿರುವ VIVO V23E ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳನ್ನು ನೋಡೋಣ ಬನ್ನಿ.
ನೂತನ VIVO V23E 5G ಸ್ಮಾರ್ಟ್‌ಫೋನ್ ನಯವಾದ ಗಾಜಿನ ಹಿಂಭಾಗದ ವಿನ್ಯಾಸದಲ್ಲಿ, 6.44-ಇಂಚಿನ AMOLED ಡಿಸ್‌ಪ್ಲೇ ಜೊತೆಗೆ 2400×1080 ಪಿಕ್ಸೆಲ್‌ಗಳ ರೆಸಲ್ಯೂಶನ್ (ಪೂರ್ಣ-HD+) ಮತ್ತು ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್‌ಪ್ಲೇಯನ್ನು ಹೊತ್ತು ಬಿಡುಗಡೆಯಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಜೊತೆಗೆ 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಈ ಫೋನ್ RAM ಸಾಮರ್ಥ್ಯವನ್ನು ಹೆಚ್ಚಿಸಲು ಉಚಿತ ಆಂತರಿಕ ಸಂಗ್ರಹಣೆಯನ್ನು ಬಳಸಿಕೊಳ್ಳುವ ವಿಸ್ತೃತ RAM ತಂತ್ರಜ್ಞಾನವನ್ನು ಸಹ ಬೆಂಬಲಿಸಲಿದೆ. 5G, ಡ್ಯುಯಲ್-ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್ 5.1, ಹೈಬ್ರಿಡ್ ಸಿಮ್ ಸ್ಲಾಟ್ ಮತ್ತು 4 ಜಿ ಎಲ್‌ಟಿಇ ಜೊತೆಗೆ ಅಂಡರ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಈ ಫೋನ್ ಹೊಂದಿದೆ.
ಹಿಂಭಾಗದಲ್ಲಿ, VIVO V23E ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಪಡೆದಿದೆ. ಇದು 50-ಮೆಗಾಪಿಕ್ಸೆಲ್ ಸ್ವಯಂ-ಫೋಕಸ್ ಮುಖ್ಯ ಕ್ಯಾಮೆರಾವನ್ನು, 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಸ್ನ್ಯಾಪರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ, Vivo V23e ಸ್ವಯಂ-ಫೋಕಸ್ನೊಂದಿಗೆ 44-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಪೋರ್ಟ್ರೇಟ್ ಫಿಲ್ಟರ್‌ಗಳು, ಬೊಕೆ ಫ್ಲೇರ್ ಪೋರ್ಟ್ರೇಟ್, ಹೈ ರೆಸಲ್ಯೂಷನ್, ಲೈವ್ ಫೋಟೋ, ಎಆರ್ ಸ್ಟಿಕ್ಕರ್‌ಗಳು, ಸ್ಲೋ-ಮೊ, ಟೈಮ್-ಲ್ಯಾಪ್ಸ್, ಡ್ಯುಯಲ್-ವ್ಯೂ ವೀಡಿಯೋ ಮತ್ತು ಡಬಲ್ ಎಕ್ಸ್‌ಪೋಸರ್‌ನಂತಹ ಮೋಡ್‌ಗಳೊಂದಿಗೆ ಕ್ಯಾಮರಾ ಅಪ್ಲಿಕೇಶನ್ ಬರುತ್ತದೆ. ನೀವು ಸೆಲ್ಫಿ ಪ್ರಿಯರಾಗಿದ್ದರೆ ಇದು ನಿಮಗೆ ಹೇಳಿ ಮಾಡಿಸಿರುವಂತಹ ಸ್ಮಾರ್ಟ್‌ಫೋನ್ ಎನ್ನಬಹುದು.
Vivo V23e 5g Available With Rs 5,000 Discount In India.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:23 pm
HK News Desk
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm