ಬ್ರೇಕಿಂಗ್ ನ್ಯೂಸ್
09-05-22 09:14 pm Source: Vijayakarnataka ಡಿಜಿಟಲ್ ಟೆಕ್
ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ WhatsApp ನಲ್ಲಿ ಇದೀಗ 2GB ವರೆಗೆ ಫೈಲ್‌ಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ನೆನ್ನೆಯಷ್ಟೇ 'ಎಮೊಜಿ ರಿಯಾಕ್ಷನ್' ವೈಶಿಷ್ಟ್ಯವನ್ನು ಪಡೆದುಕೊಂಡಿದ್ದ WhatsApp ಬಳಕೆದಾರರು ಇಂದಿನಿಂದ 2GB ವರೆಗಿನ ತುಂಬಾ ದೊಡ್ಡದಾದ ಫೈಲ್ ಅನ್ನು ಹಂಚಿಕೊಳ್ಳಲು ಆಯ್ಕೆಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲು WhatsApp ನಲ್ಲಿ 100MB ಗಾತ್ರದ ಫೈಲ್‌ಗಳನ್ನು ಮಾತ್ರ ಕಳುಹಿಸಬಹುದಾದ ಮಿತಿಯನ್ನು ಹೇರಲಾಗಿತ್ತು. ಇದೀಗ ಈ ಮಿತಿಯನ್ನು 2GB ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ WhatsApp ಬಳಕೆದಾರರು ತಮ್ಮ ಸ್ನೇಹಿತರು/ಕುಟುಂಬ/ಸಹೋದ್ಯೋಗಿಗಳಿಗೆ ದೊಡ್ಡ ಫೈಲ್‌ಗಳನ್ನು ಕಳುಹಿಸಲು ಇತರ ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಆಶ್ರಯಿಸಬೇಕಾದ ಸಮಸ್ಯೆ ಪರಿಹಾರಗೊಂಡಿದೆ.
WhatsApp ನಲ್ಲಿ ಇದೀಗ 2GB ವರೆಗೆ ಫೈಲ್‌ಗಳನ್ನು ಕಳುಹಿಸುವ ಸಾಮರ್ಥ್ಯವು ಮಾತ್ರವಲ್ಲದೇ, ಫೈಲ್‌ಗಳನ್ನು ಹಂಚಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಬಳಕೆದಾರರಿಗೆ ತಿಳಿಸಲು WhatsApp ಕೌಂಟರ್ ಅನ್ನು ಪ್ರದರ್ಶಿಸಲಿದೆ. ಇದು ದೊಡ್ಡ ಗಾತ್ರದ ಫೈಲ್ ಅನ್ನು ಅಪ್‌ಲೋಡ್ ಮಾಡಲು/ಡೌನ್‌ಲೋಡ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಅಂದಾಜು ಸಮಯವನ್ನು ಖಚಿತಪಡಿಸುತ್ತದೆ ಎಂದು ತಿಳಿದುಬಂದಿದೆ. WhatsApp ಬಳಕೆದಾರರು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ವೈಶಿಷ್ಟ್ಯವನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳಲು, WhatsApp ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕಾಗುತ್ತದೆ. Android ಮತ್ತು iOS ಎರಡೂ ಅಪ್ಲಿಕೇಶನ್‌ಗಳ ಅಪ್‌ಡೇಟ್ ರೋಲ್‌ಔಟ್ ಸಮಯ ಮತ್ತು ಆವೃತ್ತಿಗಳು ಭಿನ್ನವಾಗಿರುತ್ತವೆ ಎಂಬುದನ್ನು ಗಮನಿಸಿ.
ಇನ್ನು ನೆನ್ನೆಯಷ್ಟೇ WhatsApp ಬಳಕೆದಾರರು ಎಮೋಜಿಗಳ ಮೂಲಕ ಇನ್‌ಸ್ಟಂಟ್ ರಿಪ್ಲೆ ಮಾಡಬಹುದಾದ ಹೊಸ ವೈಶಿಷ್ಟ್ಯವೊಂದನ್ನು WhatsApp ಸಂಸ್ಥೆ ಒಡೆತನದ ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರು ಇಂದು ಪ್ರಕಟಿಸಿದ್ದರು. ಎಮೋಜಿಗಳ ಮೂಲಕ ಇನ್‌ಸ್ಟಂಟ್ ರಿಪ್ಲೆ ವೈಶಿಷ್‌ಟಯದ ಬಗ್ಗ ಅವರು ಈ ಹೊಸ ವೈಶಿಷ್ಟ್ಯದ ಬಗ್ಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಅವರು ಶೇರ್ ಮಾಡಿಕೊಂಡಿದ್ದರು. WhatsApp ಅಪ್ಲಿಕೇಷನ್‌ನಲ್ಲಿ ಕಾಣಿಸಲಿರುವ ಹೊಸ 'ಎಮೋಜಿ ರಿಯಾಕ್ಷನ್' ವೈಶಿಷ್ಟ್ಯದ ಸಹಾಯದಿಂದ, WhatsApp ಸಂದೇಶಗಳಿಗೆ ಪಠ್ಯದ ರೂಪದಲ್ಲಿ ಪ್ರತಿಕ್ರಿಯೆಗಳನ್ನು ಕಳುಹಿಸುವ ಅಗತ್ಯವಿಲ್ಲದೇ, WhatsApp ಬಳಕೆದಾರರು ವಿಭಿನ್ನ ರೀತಿಯ ಎಮೋಜಿಗಳನ್ನು ಬಳಸಿಕೊಂಡು ಸಂದೇಶಗಳಿಗೆ ತತಕ್ಷಣ ಪ್ರತಿಕ್ರಿಯಿಸಬಹುದಾಗಿದೆ.
WhatsApp ಬಳಕೆದಾರರು ತಮ್ಮ ಎಲ್ಲಾ ಚಾಟ್‌ಗಳಲ್ಲಿ, ಇಷ್ಟ, ಪ್ರೀತಿ, ನಗು, ಆಶ್ಚರ್ಯ, ದುಃಖ ಮತ್ತು ಧನ್ಯವಾದ ಭಾವನೆಗಳನ್ನು ವ್ಯಕ್ತಪಡಿಸುವ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ. WhatsApp ಬಳಕೆದಾರರು ಯಾವುದೇ ಚಾಟ್‌ನಲ್ಲಿ ಸಂದೇಶವನ್ನು ದೀರ್ಘಕಾಲ ಒತ್ತುವ ಮೂಲಕ WhatsApp ಪ್ರತಿಕ್ರಿಯೆಗಳ ವೈಶಿಷ್ಟ್ಯವನ್ನು ಬಳಸಬಹುದು. ಆ ನಂತರ ತಮಗೆ ಬೇಕಾದ ಎಮೋಜಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಚಾಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಬಹುದು ಎಂದು ಗುರುತಿಸಲಾಗಿದೆ. ಓರ್ವ ವ್ಯಕ್ತಿಯಿಂದ ಮತ್ತು ಗುಂಪು ಚಾಟ್‌ಗಳಲ್ಲಿ ಸ್ವೀಕರಿಸುವ ನಿರ್ದಿಷ್ಟ ಸಂದೇಶಗಳ ಕುರಿತು ಜನರು ತಮ್ಮ ಭಾವನೆಗಳನ್ನು ತ್ವರಿತವಾಗಿ ವ್ಯಕ್ತಪಡಿಸಲು ಸಹಾಯ ಮಾಡುವುದು 'ಎಮೋಜಿ ಪ್ರತಿಕ್ರಿಯೆ' ವೈಶಿಷ್ಟ್ಯದ ಪ್ರಮುಖ ಉದ್ದೇಶವಾಗಿದೆ.
Whatsapp Finally Rolls Out Ability To Transfer Files Up To 2gb.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:23 pm
HK News Desk
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm