ಬ್ರೇಕಿಂಗ್ ನ್ಯೂಸ್
03-09-26 02:44 pm HK News Staffer ಸಿನಿಮಾ
ಬೆಂಗಳೂರು, ಸೆ.3: ದುನಿಯಾ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಧಿಕೃತ ಅಂತ್ಯ ಬಿದ್ದಿದೆ. ಹೈಕೋರ್ಟ್ ವಿಭಾಗೀಯ ಪೀಠವು ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ್ದು ಪತ್ನಿ ಮಕ್ಕಳಿಗೆ ದೊಡ್ಡ ಮೊತ್ತದ ಜೀವನಾಂಶ ನೀಡುವುದಕ್ಕೂ ಆದೇಶ ಮಾಡಿದೆ.
ನ್ಯಾಯಮೂರ್ತಿ ಡಿಕೆ ಸಿಂಗ್, ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರಿದ್ಧ ಪೀಠ ವಿಚ್ಛೇದನ ಆದೇಶ ನೀಡಿದ್ದು ಒಂದೇ ಬಾರಿಗೆ ಎರಡು ಕೋಟಿ ರೂಪಾಯಿ ಜೀವನಾಂಶ ನೀಡಲು ಆದೇಶಿಸಿದೆ. ವಿಜಯ್ ಹಾಗೂ ನಾಗರತ್ನ ದಂಪತಿಗೆ ಮೊನಿಷಾ, ಮೋನಿಕಾ ಹಾಗೂ ಸಾಮ್ರಾಟ್ ಎಂಬ ಮೂವರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮೂವರು ಮಕ್ಕಳ ಜೀವನದ ಪ್ರಶ್ನೆ ಇರುವುದರಿಂದ ಮತ್ತು ಮೂವರೂ ಮಕ್ಕಳು ಅವಿವಾಹಿತರಾಗಿರುವುದರಿಂದ, ದುನಿಯಾ ವಿಜಯ್ ಸ್ಥಾನಮಾನ ಮತ್ತು ಹಣಕಾಸಿನ ಸ್ಥಿತಿ ಪರಿಗಣಿಸಿ ನಾಗರತ್ನಗೆ 2 ಕೋಟಿ ರೂಪಾಯಿ ಖಾಯಂ ಜೀವನಾಂಶ (ಏಕಮೊತ್ತದ ಇಡುಗಂಟು) ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
2013 ರಲ್ಲಿ ದುನಿಯಾ ವಿಜಯ್ - ನಾಗರತ್ನ ದಾಂಪತ್ಯದಲ್ಲಿ ಬಿರುಕು ಎದುರಾಗಿ ಕೋರ್ಟ್ ಮೆಟ್ಟಿಲೇರಿತ್ತು. 2014ರಲ್ಲಿ ಸಂಧಾನ ಯಶಸ್ವಿಯಾಗಿ ಇಬ್ಬರೂ ಸಹಬಾಳ್ವೆಗೆ ಮುಂದಾಗಿದ್ದರು. ಆದರೆ, ಕೆಲವು ವರ್ಷಗಳ ಬಳಿಕ ಮತ್ತೆ ಕಾನೂನು ಹೋರಾಟ ಶುರುವಾಗಿತ್ತು. ಇದೀಗ ಹೈಕೋರ್ಟ್‌ನಲ್ಲಿ ಇಬ್ಬರಿಗೂ ವಿಚ್ಛೇದನ ಭಾಗ್ಯ ಲಭಿಸಿದೆ.
ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುನ್ನವೇ ದುನಿಯಾ ವಿಜಯ್ ಎರಡನೇ ಮದುವೆಯಾಗಿದ್ದಾರೆ ಎಂಬ ವದಂತಿ 2016ರಲ್ಲಿ ಕೇಳಿಬಂದಿತ್ತು. ಅದರ ಬಳಿಕ ಇವರ ನಡುವಿನ ಮನಸ್ತಾಪ ಇನ್ನಷ್ಟು ಜೋರಾಗಿತ್ತು. ತಮಗೆ ಹಾಗೂ ತಮ್ಮ ಪೋಷಕರಿಗೆ ನಾಗರತ್ನ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದುನಿಯಾ ವಿಜಯ್ 2018ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದರೂ, ನಾಗರತ್ನ ವಿರುದ್ಧ ಮಾಡಿದ್ದ ಆರೋಪಗಳನ್ನ ಸಾಬೀತು ಪಡಿಸುವಲ್ಲಿ ವಿಜಯ್ ವಿಫಲರಾಗಿದ್ದರು.
ನನಗೆ ವಿಚ್ಛೇದನ ಬೇಡ, ಪತಿಯೊಂದಿಗೆ ಬಾಳುತ್ತೇನೆ’’ ಎಂದು ಕೋರ್ಟ್‌ನಲ್ಲಿ ನಾಗರತ್ನ ವಾದಿಸಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ದುನಿಯಾ ವಿಜಯ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚ್ಛೇದನ ನೀಡುವಂತೆ ಹೈಕೋರ್ಟ್‌ಗೆ ದುನಿಯಾ ವಿಜಯ್ ಮೇಲ್ಮನವಿ ಸಲ್ಲಿಸಿದ್ದರು.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 10:36 am
Mangaluru Staffer
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am