ಬ್ರೇಕಿಂಗ್ ನ್ಯೂಸ್
11-02-21 12:42 pm Source: FILMIBEAT Shruthi Gk ಸಿನಿಮಾ
ಸ್ಯಾಂಡಲ್ ವುಡ್ ನ ಸುಂದರ ಜೋಡಿಗಳಲ್ಲಿ ಒಂದಾಗಿರುವ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ತಿಂಗಳು ಫೆಬ್ರವರಿ 14ರಂದು ಮಿಲನಾ ಮತ್ತು ಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಲವ್ ಮಾಕ್ಟೇಲ್ ಜೋಡಿಯ ಮದುವೆಗೆ ಇನ್ನೇನು ದಿನಗಣನೆ ಪ್ರಾರಂಭವಾಗಿದೆ.
ಈಗಾಗಲೇ ಮದುವೆ ಮಿಲನಾ ಮತ್ತು ಕೃಷ್ಣ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಮದುವೆ ಶಾಸ್ತ್ರಗಳಲ್ಲಿ ಸುಂದರವಾಗಿ ಕಾಣಿಸುತ್ತಿದ್ದು, ಶಾಸ್ತ್ರಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರ ಮದುವೆ ಬೆಂಗಳೂರಿನ ನಂದಗೋಕುಲ ಕನ್ವೆಷನ್ ಸೆಂಟರ್ ನಡೆಯುತ್ತಿದ್ದು, ಮದುವೆ ಶಾಸ್ತ್ರಗಳು ಸಹ ಅಲ್ಲೇ ಶಾಸ್ತ್ರೋಕ್ತವಾಗಿ ನಡೆಯುತ್ತಿದೆ.

ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಮಿಲನಾ ಮತ್ತು ಕೃಷ್ಣ
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಮೆಹಂದಿ ಸಂಭ್ರಮ ರಂಗೇರಿದೆ. ಇಬ್ಬರು ಮೆಹಂದಿ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೃಷ್ಣ ಭಾವಿ ಪತ್ನಿ ಮಿಲನಾ ಕೈಗೆ ಮೆಹೆಂದಿ ಹಾಕುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ಲೆಹೆಂಗಾದಲ್ಲಿ ಮಿಲನಾ ಮಿಂಚಿಂಗ್
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ. ಲೆಹೆಂಗದಲ್ಲಿ ನಟಿ ಮಿಲಾನಾ ಮಿಂಚಿದ್ರೆ, ಭಾವಿ ಪತಿ ಕೃಷ್ಣ ಶೇರ್ವಾನಿಯಲ್ಲಿ ಕಂಗೊಳಿಸುತ್ತಿದ್ದಾರೆ. ಲವ್ ಮಾಕ್ ಟೇಲ್ ಜೋಡಿಯ ಮೆಹಂದಿ ಶಾಸ್ತ್ರದ ಫೋಟೋಗಳಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ.

ಮದುವೆ ಶಾಸ್ತ್ರದ ಮೊದಲ ವಿಡಿಯೋ ಹಂಚಿಕೊಂಡಿದ್ದ ಮಿಲನಾ
ಇತ್ತೀಚಿಗೆ ಮಿಲನಾ ಮದುವೆ ಶಾಸ್ತ್ರದ ಮೊದಲ ವಿಡಿಯೋ ಹಂಚಿಕೊಂಡಿದ್ದರು. 'ನಮ್ಮ ಕುಟುಂಬದಲ್ಲಿ ಯಾರದೇ ಮದುವೆ ಆದರೂ ಈ ವಿಶೇಷ ಪೂಜೆಯ ಮೂಲಕ ಪ್ರಾರಂಭ ಮಾಡುತ್ತೇವೆ' ಎಂದು ಬರೆದುಕೊಂಡಿದ್ದರು. ಮಿಲನಾ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿಕ್ಕಾಪಟ್ಟೆ ವೀಕ್ಷಣೆ ಕಂಡಿದೆ.

ಕೃಷ್ಣ-ಮಿಲನಾ ಮದುವೆಗೆ ತಯಾರಾಗಿದೆ ವಿಶೇಷ ಮಂಟಪ
ಮಿಲನಾ ಮದುವೆಗೆ ಇನ್ನು 3 ದಿನಗಳು ಬಾಕಿ ಇದೆ. ಮದುವೆ ಬಗ್ಗೆ ದೊಡ್ಡ ಕನಸು ಕಂಡಿದ್ದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಬೇಕು ಎಂದು ಪ್ಲಾನ್ ಮಾಡಿದ್ದರು. ಹಾಗಾಗಿಯೇ ಇವರು ಲಾಕ್ ಡೌನ್ ಎಲ್ಲ ಮುಗಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ಆಸೆಯಂತೆ ಮದುವೆ ಈಜುಕೊಳದ ಮಧ್ಯೆ ವಿಶೇಷ ಮಂಟಪದಲ್ಲಿ ಕೃಷ್ಣ ಮತ್ತು ಮಿಲನಾ ಹೊಸಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆ ದಿನ ಲವ್ ಮಾಕ್ ಟೇಲ್-2 ಹಾಡು ರಿಲೀಸ್
ಕೃಷ್ಣ ಮತ್ತುಮಿಲನಾ ಇಬ್ಬರು ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ಲವ್ ಮಾಕ್ ಟೇಲ್ ಸಿನಿಮಾ ಬಳಿಕ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದರು. ಇದೀಗ ಈ ಜೋಡಿ ಲವ್ ಮಾಕ್ ಟೇಲ್ -2 ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ವಿಶೇಷ ಎಂದರೆ ಮದುವೆ ದಿನವೇ ಅಂದರೆ ಫೆಬ್ರವರಿ 14ರಂದು ಲವ್ ಮಾಕ್ ಟೇಲ್-2 ಸಿನಿಮಾದ ಒಂದು ಹಾಡು ಕೂಡ ರಿಲೀಸ್ ಆಗುತ್ತಿದೆ.
This News Article is a Copy of FILMIBEAT
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
29-09-26 01:25 pm
HK News Staffer
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
29-09-26 03:48 pm
HK News Staffer
ಕರಂಗಲ್ಪಾಡಿಯಲ್ಲಿ ಅಪಘಾತ ; ನ್ಯಾಯಾಧೀಶರಿದ್ದ ಕಾರಿಗೆ...
29-09-26 01:22 pm
ಪತಿಯನ್ನು ಬಿಟ್ಟು ಪ್ರತ್ಯೇಕ ವಾಸ ; ಮಾಂಸದಂಗಡಿ ಮಾಲೀ...
29-09-26 09:20 am
ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು...
28-09-26 11:03 pm
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm