ವಿಡಿಯೋ ಗ್ಯಾಲರಿ

07-06-21 03:05 pm ವಿಡಿಯೋ

ಮೂರು ವರ್ಷಗಳಿಂದ ಕರೆಂಟ್ ಇಲ್ಲದೆ ಕತ್ತಲವಾಸ ; ಬದುಕುವ ಹಕ್ಕನ್ನೇ ಕಸಿದುಬಿಟ್ಟ ಅಪಾರ್ಟ್ಮೆಂಟ್ ಅಸೋಸಿಯೇಷನ್ !! ವೃದ್ಧ ದಂಪತಿಯ ಕೂಗು ಕೇಳಿಸದೇ ಪೊಲೀಸರೇ ?

ಈಗಿನ ಕಾಲದಲ್ಲಿ ಯಾರೇ ಆಗಲಿ, ಕರೆಂಟ್ ಇಲ್ಲದೆ ಬದುಕಲು ಸಾಧ್ಯನಾ..? ವಿದ್ಯುತ್ ಇಲ್ಲದ ಮನೆಯನ್ನು ನಗರ ಭಾಗದಲ್ಲಿ ಊಹಿಸಲು ಸಾಧ್ಯವೇ ? ವಿದ್ಯುತ್ ಇಲ್ಲದ ಬದುಕೇ ಅಸಾಧ್ಯ ಎನ್ನುವಂಥ ಸ್ಥಿತಿ ಇರೋದ್ರಿಂದ ಕರೆಂಟಿಗೂ, ಮನುಷ್ಯನಿಗೂ ಅವಿನಾಭಾವ ಸಂಬಂಧ. ಆದರೆ, ಇಲ್ಲೊಂದು ವೃದ್ಧ ದಂಪತಿ ಕಳೆದ ಮೂರು ವರ್ಷಗಳಿಂದ ಕರೆಂಟ್ ಇಲ್ಲದೇ ಅತ್ಯಾಧುನಿಕ ಫ್ಲಾಟ್ ಒಂದರಲ್ಲಿ ನರಕ ಅನುಭವಿಸುತ್ತಿದ್ದಾರೆ. ಇದಕ್ಕೇನು ಕಾರಣ ಅಂದ್ರೆ, ಯಾರು ಕೂಡ ನಂಬಲಿಕ್ಕಿಲ್ಲ. ಈ ರೀತಿ ವೃದ್ಧ ದಂಪತಿಯನ್ನು ನರಕಕ್ಕೆ ತಳ್ಳಿದ್ದು ಅಲ್ಲಿನ ಫ್ಲಾಟ್ ಓನರ್ಸ್ ಅಸೋಸಿಯೇಶನ್ ಅಂತೆ. ಪೊಲೀಸರು, ಕೋರ್ಟ್ ವ್ಯವಸ್ಥೆಯ ಮಧ್ಯೆಯೂ ನಮ್ಮ ಸಮಾಜ ವೃದ್ಧರನ್ನು ನರಕಕ್ಕೆ ನೂಕಿ ಬದುಕುವ ಹಕ್ಕನ್ನೇ ಕಸಿದುಬಿಟ್ಟಿದೆ.