ವಿಡಿಯೋ ಗ್ಯಾಲರಿ

11-03-21 06:14 pm ವಿಡಿಯೋ

ರೂಪದರ್ಶಿ ಸಾವಿನ ಹಿಂದೆ ಅನುಮಾನದ ಹುತ್ತ ; ಸಾವಿನ ಹಿಂದಿದ್ಯಾ ಗಾಂಜಾ ಗ್ಯಾಂಗ್ ?!

ಕುಂಪಲದ ಆಶ್ರಯ ಕಾಲನಿ ನಿವಾಸಿಗಳಾದ ಚಿತ್ತಪ್ರಸಾದ್ ಮತ್ತು ವನಿತಾ ದಂಪತಿಯ ಕಿರಿಯ ಪುತ್ರಿ, 17ರ ಹರೆಯದ ಪ್ರೇಕ್ಷಾ ಬುಧವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ತಾಯಿ ಅಂಗನಾಡಿ ಕಾರ್ಯಕರ್ತೆಯಾಗಿದ್ದು ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಾಗ ಎದುರಿನ ಬಾಗಿಲು ಒಳಗಿಂದ ಲಾಕ್ ಆಗಿದ್ದರೆ, ಹಿಂಬಾಗಿಲು ತೆರೆದಿತ್ತು. ಹಿಂಬಾಗಿಲಿನಿಂದ ಮನೆಯೊಳಗೆ ನೋಡಿದಾಗ ಪ್ರೇಕ್ಷಾ ಮಂಚದ ಮೇಲೆ ಚೇರ್ ನಲ್ಲಿ ಕುಳಿತ ಸ್ಥಿತಿಯಲ್ಲೇ ನೇಣು ಬಿಗಿದು ಸಾವನ್ನಪ್ಪಿದ್ದು ಕಂಡು ಬಂದಿದ್ದಳು.