ವಿಡಿಯೋ ಗ್ಯಾಲರಿ

23-12-20 03:57 pm ವಿಡಿಯೋ

ಸೌತಡ್ಕ ಬಳಿ ಮನೆಗೆ ನುಗ್ಗಿ ಭಾರೀ ದರೋಡೆ ; ಎಸ್ಪಿ ಲಕ್ಷ್ಮೀಪ್ರಸಾದ್ ಪ್ರತಿಕ್ರಿಯೆ

ಕೌಕ್ರಾಡಿ ಗ್ರಾಮದ ಸೌತಡ್ಕ ದೇವಸ್ಥಾನದ ಬಳಿಯ ತುಕ್ರಪ್ಪ ಶೆಟ್ಟಿ ಎಂಬವರ ಮನೆಗೆ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ 8ರಿಂದ 9 ಮಂದಿಯ ದುಷ್ಕರ್ಮಿಗಳ ತಂಡ ನುಗ್ಗಿದೆ. ಮಲಗಿದ್ದವರನ್ನು ಎಬ್ಬಿಸಿ ಮನೆಗೆ ನುಗ್ಗಿದ ತಂಡ, ತುಕ್ರಪ್ಪ ಶೆಟ್ಟಿ ಮತ್ತು ಅವರ ಪತ್ನಿ ಗೀತಾರನ್ನು ಕಟ್ಟಿಹಾಕಿದ್ದು ಕಪಾಟುಗಳನ್ನು ಜಾಲಾಡಿದೆ. ಈ ವೇಳೆ, ಚಿನ್ನಾಭರಣ ಎಲ್ಲಿದೆ ಎಂದು ಪತ್ನಿ ಗೀತಾ ಶೆಟ್ಟಿಯನ್ನು ಚೂರಿ ತೋರಿಸಿ ಪೀಡಿಸಿದ್ದು ಗೀತಾರಿಗೆ ಚೂರಿ ಇರಿತದ ಗಾಯಗಳಾಗಿವೆ. ಗೀತಾ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.