ವಿಡಿಯೋ ಗ್ಯಾಲರಿ

15-10-20 05:07 pm ವಿಡಿಯೋ

ಯೋಗಿ ವಿರುದ್ಧ 52 ಕ್ರಿಮಿನಲ್ ಕೇಸುಗಳಿದ್ದವು, ಸಿಎಂ ಆದಬಳಿಕ ಸ್ವಾಮೀಜಿ ಎನ್ನಲಾಗಲ್ಲ ; ಹರೀಶ್ ಕುಮಾರ್

ಯೋಗಿ ಆದಿತ್ಯನಾಥ್ ವಿರುದ್ಧ ಸಂಸದರಾಗುವ ಹಿಂದೆಯೇ 52 ಕ್ರಿಮಿನಲ್ ಕೇಸುಗಳಿದ್ದವು. ಯೋಗಿ ಅಧಿಕಾರಕ್ಕೆ ಬಂದ ಬಳಿಕ ಪ್ರಕರಣಗಳನ್ನು ತೆಗೆದು ಹಾಕಿದ್ರು. ಯೋಗಿ ಹಿಂದೆ ಸ್ವಾಮೀಜಿ ಇರಬಹುದು. ಸಿಎಂ ಆದಬಳಿಕ ಯೋಗಿಯನ್ನು ಸ್ವಾಮೀಜಿ ಎಂದು ಒಪ್ಪಲಾಗಲ್ಲ. ಸಾರ್ವಜನಿಕ ಜೀವನದಲ್ಲಿದ್ದವರು ಆರೋಪಗಳನ್ನು ಎದುರಿಸಬೇಕು. ಮಿಥುನ್ ರೈ ಈ ಜಿಲ್ಲೆಯ ಕಾಂಗ್ರೆಸ್ ನಾಯಕರಾಗಿದ್ದು ಒಬ್ಬ ಮುಖ್ಯಮಂತ್ರಿಯನ್ನು ಟೀಕಿಸಬಾರದೇ ? ದಲಿತ ಯುವತಿಯ ಅತ್ಯಾಚಾರದ ಬಗ್ಗೆ ಮಾತನಾಡಿದ್ದು ಅಪರಾಧವೇ ಎಂದು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.