ವಿಡಿಯೋ ಗ್ಯಾಲರಿ

19-12-20 03:36 pm ವಿಡಿಯೋ

ಅಪಹರಣ ಪ್ರಕರಣ ಸುಖಾಂತ್ಯ ; ಕೊನೆಗೂ ಅಮ್ಮನ ಮಡಿಲು ಸೇರಿದ ಬಾಲಕ !!

ಬೆಳ್ತಂಗಡಿ ತಾಲೂಕಿನ ಉಜಿರೆಯಿಂದ ಅಪಹರಿಸಲ್ಪಟ್ಟು ಎರಡು ದಿನಗಳ ಕಾಲ ಕರಾವಳಿ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಮಂಗಳೂರು ಪೊಲೀಸರು ಆರೋಪಿಗಳನ್ನು ಕೋಲಾರದಲ್ಲಿ ಬಂಧಿಸಿದ್ದಾರೆ. ಆರೋಪಿಗಳ ಕೈಯಲ್ಲಿದ್ದು ಎರಡು ದಿನಗಳ ಕಾಲ ಭಯದಲ್ಲೇ ಕಾಲ ಕಳೆದಿದ್ದ ಎಂಟು ವರ್ಷದ ಬಾಲಕ ಅನುಭವ್, ಕೊನೆಗೂ ಅಮ್ಮನ ಮಡಿಲು ಸೇರಿದ್ದಾನೆ.