ವಿಡಿಯೋ ಗ್ಯಾಲರಿ

14-08-21 04:28 pm ವಿಡಿಯೋ

ಇದಿನಬ್ಬ ಕುಟುಂಬಸ್ಥರಿಗೆ ಭಯೋತ್ಪಾದಕರ ನಂಟು ಸಾಬೀತಾಗಿದೆ, ಪ್ರತಿಭಟನೆ ಬೇಡ ಎನ್ನಲು ಉಳ್ಳಾಲ ಪಾಕಿಸ್ತಾನದಲ್ಲಿಲ್ಲ...!

ಉಳ್ಳಾಲದಲ್ಲಿ ಮಾಜಿ ಶಾಸಕ ಇದಿನಬ್ಬ ಕುಟುಂಬಸ್ಥರು ಭಯೋತ್ಪಾದಕರ ಜೊತೆ ನಂಟು ಹೊಂದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಇದಿನಬ್ಬರ ಮೊಮ್ಮಗಳು ಮತ್ತು ಆಕೆಯ ಗಂಡ ಸಿರಿಯಾಕ್ಕೆ ಹೋಗಿ ಮೃತಪಟ್ಟಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಈಗ ಅದೇ ಕುಟುಂಬದ ಮತ್ತೊಬ್ಬ ವ್ಯಕ್ತಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಅಲ್ಲಿನ ಶಾಸಕ ಖಾದರ್ ಮಾತ್ರ ಈ ಬಗ್ಗೆ ಬಜರಂಗದಳ ಪ್ರತಿಭಟನೆ ಮಾಡಬಾರದು ಎನ್ನುತ್ತಿದ್ದಾರೆ. ಬಜರಂಗದಳ ಪ್ರತಿಭಟನೆ ಮಾಡಬಾರದು ಎನ್ನಲು ಉಳ್ಳಾಲ ಏನು ಪಾಕಿಸ್ತಾನದಲ್ಲಿ ಇದೆಯೇ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಪ್ರಶ್ನಿಸಿದ್ದಾರೆ.