ವಿಡಿಯೋ ಗ್ಯಾಲರಿ

01-04-21 06:14 pm ವಿಡಿಯೋ

ಕಿಡಿಗೇಡಿಗಳಿಗೆ ಕೊರಗಜ್ಜನೇ ಕೊಟ್ಟ ಶಿಕ್ಷೆ ; ರಕ್ತಕಾರಿ ಸತ್ತ ಮಂತ್ರವಾದಿ ! ತಪ್ಪು ಹೇಳಿಕೊಂಡು ಬಂದು ಸಿಕ್ಕಿಬಿದ್ದ ಯುವಕರು !

ತುಳುನಾಡಿನ ಕೊರಗಜ್ಜ, ಬಬ್ಬುಸ್ವಾಮಿ ಬರೀಯ ಗುಡಿಗಳಲ್ಲ. ಈ ನಾಡಿನ ದೈವೀ ಶಕ್ತಿಗಳು. ನಂಬಿದವರಿಗೆ ಇಂಬು ಕೊಡುವ ಸಾಕ್ಷಾತ್ ದೈವೀ ಸ್ವರೂಪಿಗಳು ಎನ್ನುವ ನಂಬಿಕೆ ಇಂದು ನಿನ್ನೆಯದ್ದಲ್ಲ. ಹಳೆ ಕಾಲದಿಂದಲೂ ತುಳುವರು ಜಾತಿ ಭೇದ ಇಲ್ಲದೆ ನಂಬಿಕೊಂಡು ಬಂದ ದೈವಗಳ ಮೇಲಿನ ನಂಬಿಕೆಯದು. ಅಂಥ ದೈವೀ ಸ್ವರೂಪದ ಶಕ್ತಿಗೆ ಅಪಮಾನ ಕೇಳಿಬಂದಾಗ, ತುಳುವರೆಲ್ಲ ಒಕ್ಕೊರಲಿನಲ್ಲಿ ಒಂದೇ ಮಾತು ಹೇಳಿದ್ದು ಅಜ್ಜನೇ ನೋಡಿಕೊಳ್ಳುತ್ತಾನೆ ಎನ್ನೋದು. ಹೌದು.. ಕೊರಗಜ್ಜ ತನ್ನ ದೈವೀ ಶಕ್ತಿಯನ್ನು ತೋರಿಸಿಕೊಟ್ಟಿದ್ದಾನೆ. ದೈವದ ಗುಡಿಗೆ ಅಪಪಾನ ಮಾಡಿದ್ದ ವ್ಯಕ್ತಿ ರಕ್ತವಾಂತಿ ಮಾಡಿಕೊಂಡು ಸತ್ತಿದ್ದಾನೆ.