ವಿಡಿಯೋ ಗ್ಯಾಲರಿ

07-02-22 10:13 am ವಿಡಿಯೋ

Mangalore: ಪಂಜಿಮೊಗರಿನಲ್ಲಿ ಪ್ರಾರ್ಥನಾ ಕೇಂದ್ರ ನೆಲಸಮ ; ಅಂಗನವಾಡಿಯೇ, ಪ್ರಾರ್ಥನಾ ಕೇಂದ್ರವೇ ? ಸ್ಥಳೀಯರು ಏನಂತಾರೆ ? ಒಡೆದು ಹಾಕಿದ್ದು ಯಾರು ?

ಪಂಜಿಮೊಗರಿನ ಉರುಂದಾಡಿಯ ಖುರ್ಸುಗುಡ್ಡೆಯಲ್ಲಿ ಪ್ರಾರ್ಥನಾ ಕೇಂದ್ರ ಒಡೆದಿರುವ ಬಗ್ಗೆ ತಕರಾರು ಎದ್ದಿದೆ. ಕ್ರಿಸ್ತಿಯನ್ನರ ಪ್ರಕಾರ, ಅಲ್ಲಿ 40 ವರ್ಷಗಳಿಂದಲೂ ಹೋಲಿ ಕ್ರಾಸ್ ಇದೆಯಂತೆ. ಸ್ಥಳೀಯ ಕಟ್ಟಡದಲ್ಲಿ ಪ್ರಾರ್ಥನೆ ನಡೆಸುತ್ತಿದ್ದರಂತೆ. ಈಗಲೂ ಹಳೆಯ ಹೋಲಿ ಕ್ರಾಸ್ ಸ್ಥಳದಲ್ಲಿದೆ. ಆದರೆ, ಈಗ ವಿವಾದಕ್ಕೆ ಕಾರಣವಾಗಿದ್ದು ಅಲ್ಲಿದ್ದ ಹಳೆಯ ಕಟ್ಟಡ ಒಂದನ್ನು ಏಕಾಏಕಿ ಕೆಡವಿ ಹಾಕಿದ್ದು. ಈ ಬಗ್ಗೆ ಸ್ಥಳೀಯರಲ್ಲಿ ಕೇಳಿದರೆ ಬೇರೆಯದ್ದೇ ಮಾತು ಹೇಳುತ್ತಾರೆ.