ವಿಡಿಯೋ ಗ್ಯಾಲರಿ

10-06-21 05:35 pm ವಿಡಿಯೋ

ರಾಜ್ಯದಾದ್ಯಂತ ಆಕ್ಸಿಜನ್ ಜಾಲ ; ಗಣೇಶ್ ಶಿಪ್ಪಿಂಗ್ ಸಂಸ್ಥೆಯಿಂದ ಉಚಿತ ಪೂರೈಕೆ ಸೇವೆ

ಕೋವಿಡ್ ಎರಡನೇ ಅಲೆಯಲ್ಲಿ ದೇಶಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಿದ್ದು ಆಕ್ಸಿಜನ್. ಎಲ್ಲ ಕಡೆ ಆಮ್ಲಜನಕದ ಕೊರತೆ ಎದುರಾದಾಗ ಜಗತ್ತಿನ ನಾನಾ ರಾಷ್ಟ್ರಗಳಿಂದ ಭಾರತಕ್ಕೆ ಸಹಾಯ ಹರಿದುಬಂದಿತ್ತು. ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಪ್ರಮುಖವಾಗಿ ಅತಿ ಹೆಚ್ಚು ಆಕ್ಸಿಜನ್ ಕಂಟೇನರ್ ಮೂಲಕ ಬಂದಿತ್ತು. ಮಂಗಳೂರು ಬಂದರು, ವಿಮಾನ ನಿಲ್ದಾಣ ಮತ್ತು ರೈಲ್ವೇ ಇಲಾಖೆಯಿಂದಲೂ ಆಕ್ಸಿಜನ್ ಕಂಟೇನರ್ ಬಂದಿತ್ತು. ಆದರೆ, ಈ ರೀತಿ ಟನ್ ಗಟ್ಟಲೆ ತೂಕದ ಕಂಟೇನರ್ ಗಳನ್ನು ರಾಜ್ಯದಾದ್ಯಂತ ಸಾಗಿಸಿದ್ದು ಮಂಗಳೂರಿನ ಗಣೇಶ್ ಶಿಪ್ಪಿಂಗ್ ಸಂಸ್ಥೆ.