ವಿಡಿಯೋ ಗ್ಯಾಲರಿ

19-06-21 05:28 pm ವಿಡಿಯೋ

ಮರವೂರು ಡ್ಯಾಮಿಗೆ ಟಾಯ್ಲೆಟ್ ನೀರು ; 12 ಗ್ರಾಪಂಗಳಿಗೆ ಕುಡಿಯೋಕೂ ಅದೇ ನೀರು ! ನಿರ್ಲಜ್ಜ ಪಾಲಿಕೆ ಆಡಳಿತಕ್ಕೆ ಚಾಟಿ ಬೀಸಿದ ಸಿಎಂ ಕಚೇರಿ

ನಮ್ಮ ಮಹಾನಗರ ಪಾಲಿಕೆಯ ಅಧಿಕಾರಿಗಳು ಬರೀ ದಪ್ಪ ಚರ್ಮದವ್ರು ಕಣ್ರೀ.. ಎಷ್ಟು ಹೇಳಿದ್ರೂ ಭಾಷೆಯಿಲ್ಲ. ಏನು ಬೈದ್ರೂ ಕೇಳೋದಿಲ್ಲ.. ಹೌದು.. ಈ ರೀತಿಯ ಬೈಗುಳ ನೀವು ಹಲವೆಡೆ ಕೇಳ್ತಾನೇ ಇರಬಹುದು. ನೀವು ಈ ಸುದ್ದಿ ಕೇಳಿದರೆ, ಇದಕ್ಕಿಂತ ನಿಕೃಷ್ಟವಾಗಿ ಪಾಲಿಕೆಯವರಿಗೆ ಬೈಯಲೇಬೇಕು. ಯಾಕಂದ್ರೆ, ಮಹಾನಗರ ಪಾಲಿಕೆಯ ಅಧಿಕಾರಸ್ಥರು ಇಷ್ಟೊಂದು ನಿರ್ಲಕ್ಷ್ಯ ವಹಿಸ್ತಾರೆ ಅಂದ್ರೆ ಇವ್ರು ಹೊಟ್ಟೆಗೆ ಅನ್ನ ತಿನ್ನಲ್ವೇ ಅನ್ನುವ ಪ್ರಶ್ನೆಯನ್ನೂ ಮುಂದಿಡುತ್ತೀರಿ.