ವಿಡಿಯೋ ಗ್ಯಾಲರಿ

04-11-20 06:28 pm ವಿಡಿಯೋ

ಲೇಡಿಗೋಷನ್ ಆಸ್ಪತ್ರೆ ಹೊಸ ದಾಖಲೆ ; ಒಂದೇ ತಿಂಗಳಲ್ಲಿ 800ಕ್ಕೂ ಹೆಚ್ಚು ಹೆರಿಗೆ !

ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಬ್ರಿಟಿಷರ ಕಾಲದಿಂದಲೂ ಬಡವರ ಪಾಲಿನ ಕಾಮಧೇನು. ಬಡ ಹೆಣ್ಣು ಮಕ್ಕಳ ಹೆರಿಗೆ ಹೆಚ್ಚಾಗಿ ಇಲ್ಲೇ ಆಗುತ್ತಿರುವುದರಿಂದ ಆಸುಪಾಸಿನ ಐದಾರು ಜಿಲ್ಲೆಗಳಲ್ಲಿ ಲೇಡಿಗೋಷನ್ ಹೆಸರು ಫೇಮಸ್. ಈ ಬಾರಿಯ ಅಕ್ಟೋಬರ್ ನಲ್ಲಿ ಮಾತ್ರ ಅತಿ ಹೆಚ್ಚು ಹೆರಿಗೆಯಾಗುವ ಮೂಲಕ ಲೇಡಿಗೋಷನ್ ಆಸ್ಪತ್ರೆ 167 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಅಕ್ಟೋಬರ್ ತಿಂಗಳಲ್ಲಿ 800 ಕ್ಕೂ ಹೆಚ್ಚು ಹೆರಿಗೆ ಆಗಿದ್ದು ಲೇಡಿಗೋಷನ್ ದಾಖಲೆ ಪುಟ ಸೇರಿದೆ.