ವಿಡಿಯೋ ಗ್ಯಾಲರಿ

11-11-20 04:51 pm ವಿಡಿಯೋ

Exclusive Video: ಉಳ್ಳಾಲ ; ಹಾಡಹಗಲೇ ಮರಳು ದಂಧೆ ! ಲಗಾಮಿಲ್ಲದ ಮಾಫಿಯಾ ಹಿಂದೆ ಯಾರಿದ್ದಾರೆ ?

ಕಡಲ ತೀರದಿಂದ ಮರಳು ತೆಗೆಯುವಂತಿಲ್ಲ. ಅಷ್ಟೇ ಅಲ್ಲ, ಸಿಆರ್ ಝೆಡ್ ವ್ಯಾಪ್ತಿಯ ನದಿಗಳಲ್ಲೂ ಮರಳು ತೆಗೆಯುವಂತಿಲ್ಲ. ಆದರೆ, ಉಳ್ಳಾಲದಲ್ಲಿ ಇವ್ಯಾವ ನಿಯಮಗಳೂ ಲೆಕ್ಕಕ್ಕೇ ಬರಲ್ಲ. ಹೌದು.. ಉಳ್ಳಾಲದಲ್ಲಿ ಮರಳು ಮಾಫಿಯಾ ದರ್ಬಾರಿನ ಮುಂದೆ ನಮ್ಮ ಸರಕಾರದ ಯಾವುದೇ ಕಾನೂನು ಕಟ್ಟಳೆಗಳಿಗೆ ಬೆಲೆಯೇ ಇಲ್ಲದಾಗಿದೆ. ಉಳ್ಳಾಲದ ಸಮುದ್ರ ತೀರದಿಂದ ಹಾಡಹಗಲೇ ರಾಜಾರೋಷವಾಗಿ ಮರಳನ್ನು ಎತ್ತಿ ರಾಶಿ ಹಾಕಿ ಒಯ್ಯುತ್ತಿರುವುದು ಬೆಳಕಿಗೆ ಬಂದಿದೆ.