ವಿಡಿಯೋ ಗ್ಯಾಲರಿ

23-08-23 05:49 pm ವಿಡಿಯೋ

chandrayaan 3 live Kannada | ಚಂದ್ರಯಾನ 3 ಲ್ಯಾಂಡಿಂಗ್, ಇಸ್ರೋ ಕೇಂದ್ರದಿಂದ ನೇರ ಪ್ರಸಾರ

ಇಡೀ ವಿಶ್ವದ ಕಣ್ಣು ಇಂದು ಭಾರತದತ್ತ ನೆಟ್ಟಿದೆ. ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ (Chandrayaan 3) ಯೋಜನೆ ಬಹುತೇಕ ಯಶಸ್ವಿಯ ಹಂತದಲ್ಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂದರೆ ಇಂದು ಸಂಜೆ 6 ಗಂಟೆ 4 ನಿಮಿಷ ಸುಮಾರಿಗೆ ಚಂದ್ರಯಾನದ ನೌಕೆ ಚಂದ್ರನಂಗಳಕ್ಕೆ (Chandrayaan 3 Landing Time) ಕಾಲಿಡಲಿದೆ. ಸಂಜೆ 5.45ರಿಂದಲೇ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಚಂದ್ರನ ಮೇಲ್ಮೈಯಲ್ಲಿ ಸ್ಪರ್ಶದ ಸಮಯವನ್ನು ಸಂಜೆ 6.04 ಕ್ಕೆ ನಿಗದಿಪಡಿಸಲಾಗಿದೆ. ಚಂದ್ರಯಾನ-3 (Chandrayaan-3) ಸಕ್ಸಸ್‌ಗಾಗಿ ದೇಶಾದ್ಯಂತ ವಿಶೇಷ ಪೂಜೆ ಪುನಸ್ಕಾರ ನಡೆಸಲಾಗ್ತಿದೆ. ಹೆಮ್ಮೆಯ ವಿಕ್ರಂ ಲ್ಯಾಂಡರ್ ಸೇಫ್ ಲ್ಯಾಂಡ್ ಮಾಡಲಿ ಅಂತ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಇನ್ನೂ ಚಂದ್ರಯಾನ 3ರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ ನೋಡಿ.