ವಿಡಿಯೋ ಗ್ಯಾಲರಿ

16-12-20 05:08 pm ವಿಡಿಯೋ

ಪಂಚಾಯತಿಗೆ ಪಾರದರ್ಶಕ ಚುನಾವಣೆ ನಡೆಯುವ ವಿಶ್ವಾಸ ಇಲ್ಲ ; ರಮಾನಾಥ ರೈ

ಕರ್ನಾಟಕದ ದರಿದ್ರ ಬಿಜೆಪಿ ಸರಕಾರ ಪಂಚಾಯತ್ ಚುನಾವಣೆಯನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಆಟವಾಡಿದ ಬಿಜೆಪಿ ಈಗ ಕಾಂಗ್ರೆಸ್ ಬೆಂಬಲಿತರನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ. ಹೆದರಿಸಿ, ಬೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿಸಿ, ಕೆಲವು ಕಡೆ ಅವಿರೋಧ ಆಯ್ಕೆ ಆಗಿದೆ. ಹೀಗಾಗಿ ಈ ಬಾರಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತದೆ ಎನ್ನುವ ಭರವಸೆ ಇಲ್ಲ. ಪಾರದರ್ಶಕ ಚುನಾವಣೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.