ವಿಡಿಯೋ ಗ್ಯಾಲರಿ

21-08-21 02:47 pm ವಿಡಿಯೋ

ಅಫ್ಘನ್ ಸರಕಾರಕ್ಕಾಗಿ ಅಮೆರಿಕ ವ್ಯಯಿಸಿದ್ದೆಷ್ಟು ? ಎಲ್ಲ ಬಿಟ್ಟು ತೆರಳ್ತಿರೋದ್ಯಾಕೆ ಗೊತ್ತಾ ?

ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ, ಅಲ್ಲಿನ ನಿವಾಸಿಗಳೆಲ್ಲ ಭೀತಿಗೆ ಒಳಗಾಗಿದ್ದಾರೆ. ಬದುಕಿದರೆ, ಭಿಕ್ಷೆ ಎತ್ತಿಯಾದ್ರೂ ಬದುಕಿಯೇನು ಎಂದು ಅಲ್ಲಿನ ಜನರು ಸಿಕ್ಕಲ್ಲಿಗೆಲ್ಲಾ ವಲಸೆ ಹೊರಟಿದ್ದಾರೆ. ವಿಮಾನ ನಿಲ್ದಾಣಗಳು ಕಿಕ್ಕಿರಿದು ತುಂಬಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಚೀರಾಡುತ್ತಿದ್ದಾರೆ. ಜನ ಸಿಕ್ಕ ಸಿಕ್ಕ ವಿಮಾನಗಳನ್ನು ಹತ್ತಿಕೊಳ್ಳುತ್ತಿದ್ದು ಎಲ್ಲಾದ್ರೂ ಹೋಗಿಬಿಡೋಣ ಎಂದು ಗೋಳಿಡುತ್ತಿದ್ದಾರೆ. ತಾಲಿಬಾನಿಗಳು ಬರುತ್ತಿದ್ದಾರೆ, ನಮ್ಮನ್ನು ಇಲ್ಲಿಂದ ಪಾರು ಮಾಡಿ ಎಂದು ಯುವತಿಯರು ಅಮೆರಿಕದ ಭದ್ರತಾ ಪಡೆಗಳ ಮುಂದೆ ಅಂಗಲಾಚುತ್ತಿದ್ದಾರೆ.