ವಿಡಿಯೋ ಗ್ಯಾಲರಿ

26-01-21 05:52 pm ವಿಡಿಯೋ

ಬೆಳ್ಮ ಗ್ರಾಪಂ ಪಿಡಿಓ ಅಧಿಕಾರಿ ಎಡವಟ್ಟು ; ಗಣರಾಜ್ಯ ದಿನವೇ ರಾಷ್ಟ್ರಧ್ವಜಕ್ಕೆ ಅವಮಾನ ! ವಿಡಿಯೋ ವೈರಲ್

ಗಣರಾಜ್ಯೋತ್ಸವ ದಿನ ಸರ್ಕಾರಿ ಸಂಸ್ಥೆಗಳ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಪೂರ್ವಕವಾಗಿ ಹಾರಿಸುವುದು ಕಡ್ಡಾಯ. ಆದರೆ, ಇಲ್ಲಿನ ಬೆಳ್ಮ ಗ್ರಾಮ‌ ಪಂಚಾಯತ್ ಕಚೇರಿಯ ಮುಂದೆ ಮಾತ್ರ ಬೆಳಗ್ಗೆ ಹತ್ತು ಗಂಟೆಯಾದರೂ ಧ್ವಜಾರೋಹಣ ಆಗಿರಲಿಲ್ಲ. ಸ್ಥಳೀಯರು ಪಿಡಿಓ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ಬಳಿಕ ಯಾರೋ ಒಬ್ಬ ತಾತ್ಕಾಲಿಕ ಸಿಬಂದಿ ಮೂಲಕ ಧ್ವಜವನ್ನು ಏರಿಸಿದ್ದಾರೆ.