ವಿಡಿಯೋ ಗ್ಯಾಲರಿ

13-04-21 02:56 pm ವಿಡಿಯೋ

ನಡುರಸ್ತೆಯಲ್ಲೇ ಪತ್ನಿಯನ್ನು ಯದ್ವಾತದ್ವಾ ಇರಿದು ಕೊಲೆಗೈದ ಪತಿ ! ಮನಕಲಕಿದ ವಿಡಿಯೋ ವೈರಲ್

ಮಹಿಳೆ ಮತ್ತು ಆಕೆಯ ಪತಿ ಜೊತೆಯಾಗಿ ಜನನಿಬಿಡ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆದರೆ, ಅವನಿಗೆ ಅದೇನಾಯ್ತೋ ಏನೋ.. ದಿಢೀರ್ ಆಗಿ ಚಾಕು ಹೊರತೆಗೆದು ಆಕೆಯ ಮೇಲೆ ಯದ್ವಾತದ್ವಾ ಇರಿದಿದ್ದಾನೆ. ಸಾವಿರಾರು ಮಂದಿ ಓಡಾಡುವ ರಸ್ತೆಯಾಗಿದ್ದರಿಂದ ವಾಹನಗಳು ಅದೇ ರಸ್ತೆಯಲ್ಲಿ ಸರಣಿಯಂತೆ ಸಾಗುತ್ತಿದ್ದವು. ಅಕ್ಕಪಕ್ಕದ ಕಟ್ಟಡದಲ್ಲಿ ನಿಂತಿದ್ದ ಜನ ಇದನ್ನು ನೋಡುತ್ತಾ ವಿಡಿಯೋ ಮಾಡಿದ್ದರೇ ವಿನಾ ಯಾರು ಕೂಡ ತಡೆಯಲು ಬರಲಿಲ್ಲ. ಆರೋಪಿ ಇರಿದ ಬಳಿಕ ಏನೂ ಆಗದಂತೆ ನಡೆದು ಹೋಗಿದ್ದಾನೆ.