ಫೋಟೊ ಗ್ಯಾಲರಿ

19-01-21 05:39 pm ಫೋಟೊ

ಆಕೆಯೀಗ ಬೀದಿಯಲ್ಲಿ ಅಲೆಯುವ ಬೆಕ್ಕು, ನಾಯಿಗಳ ಪಾಲಿಗೆ ಮುದ್ದಿನ ಅಮ್ಮ..!!

ಈ ಹೆಣ್ಮಗಳಿಗೆ ಸಣ್ಣಂದಿನಿಂದಲೇ ಬೆಕ್ಕು, ನಾಯಿಗಳಂದ್ರೆ ಪಂಚಪ್ರಾಣ. ಬೀದಿಯಲ್ಲಿ ಹೋಗುವ ನಾಯಿಗಳೇ ಆದ್ರೂ ಅದನ್ನು ಮುದ್ದಿಸುತ್ತಾಳೆ. ಆಹಾರ ಕೊಡುತ್ತಾಳೆ. ಕೈಕಾಲು ಊನವಾಗಿದ್ದರೆ, ಆರೋಗ್ಯ ಸರಿ ಇಲ್ಲದಿದ್ದರೆ ತಾನೇ ಹೋಗಿ ಔಷಧಿ ನೀಡುತ್ತಾಳೆ. ಹೌದು.. ನಲ್ವತ್ತಕ್ಕೂ ಹೆಚ್ಚು ಬೆಕ್ಕು, ನಾಯಿಗಳ ಪಾಲಿಗೆ ಆಕೆಯೀಗ ಮುದ್ದಿನ ಅಮ್ಮನಾಗಿದ್ದಾಳೆ.