ಫೋಟೊ ಗ್ಯಾಲರಿ

06-08-21 11:27 am ಫೋಟೊ

ಭಾರತ ಮಹಿಳಾ ಹಾಕಿ ತಂಡದ ಕಂಚು ಆಸೆ ಭಗ್ನ

ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿ ದಾಖಲೆ ಬರೆದಿದ್ದ ಭಾರತ ಮಹಿಳಾ ಹಾಕಿ ತಂಡ ಸ್ವಲ್ಪದರಲ್ಲೇ ಕಂಚು ಪದಕದಿಂದ ವಂಚಿತವಾಗಿದೆ. ಪ್ರಬಲ ಗ್ರೇಟ್ ಬ್ರಿಟನ್ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 3-4 ಗೋಲುಗಳಿಂದ ಸೋಲನುಭವಿಸಿದರು. ಆದರೆ, ರಾಣಿ ರಾಮಪಾಲ್ ನೇತೃತ್ವದ ಭಾರತ ಹಾಕಿ ತಂಡ ಅಷ್ಟು ಸುಲಭಕ್ಕೆ ಸೋತಿಲ್ಲ. ಸೋಲುವ ಮುನ್ನ ವೀರೋಚಿತ ಹೋರಾಟದಿಂದ ಕೆಚ್ಚೆದೆಯ ಪ್ರದರ್ಶನ ನೀಡಿದರು. ಕೊನೆಯ ಕ್ಷಣದವರೆಗೂ ಭಾರತ ತಂಡ ಉತ್ತಮ ಹೋರಾಟ ತೋರಿತು.